Karnataka Politics: ಶಾಸಕ ಯತ್ನಾಳ್ ವಿರುದ್ದ ಭುಗಿಲೆದ್ದ ಆಕ್ರೋಶ, ಸತೀಶ್ ಜಾರಕಿಹೊಳಿ ಬೆಂಬಲಿಗರ ಪ್ರತಿಭಟನೆ

By Gowthami K  |  First Published Nov 14, 2022, 8:13 PM IST

Basanagouda Patil Yatnal Vs Satish Jarkiholi: ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹಾವೇರಿ ನಗರದಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಯಿತು. ಹಾವೇರಿ ನಗರದ ಹೊಸಮನಿ ಸಿದ್ದಪ್ಪ ಸರ್ಕಲ್ ನಲ್ಲಿ ರಸ್ತೆ ತಡೆದು ಸತೀಶ್ ಜಾರಕಿಹೊಳಿ ಅಭಿಮಾನಿಗಳು, ವಿವಿಧ ದಲಿತ ಸಂಘಟನೆಗಳು ‌ಆಕ್ರೋಶ ಹೊರ ಹಾಕಿದರು.


ಹಾವೇರಿ( ನ.14): ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹಾವೇರಿ ನಗರದಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಯಿತು. ಹಾವೇರಿ ನಗರದ ಹೊಸಮನಿ ಸಿದ್ದಪ್ಪ ಸರ್ಕಲ್ ನಲ್ಲಿ ರಸ್ತೆ ತಡೆದು ಸತೀಶ್ ಜಾರಕಿಹೊಳಿ ಅಭಿಮಾನಿಗಳು, ವಿವಿಧ ದಲಿತ ಸಂಘಟನೆಗಳು ‌ಆಕ್ರೋಶ ಹೊರ ಹಾಕಿದರು. ಹಿಂದೂ ಪದದ ಅರ್ಥದ ಕುರಿತು ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ್ ಜಾರಕಿಹೊಳಿ ನೀಡಿದ ಹೇಳಿಕೆ ತಿರುಚಿ ಬಿಜೆಪಿಯವರು ಅಪಪ್ರಚಾರ ನಡೆಸುತ್ತಿದ್ದಾರೆ. ಸತೀಶ್ ಜಾರಕಿಹೊಳಿಯವರ ಬಗ್ಗೆ ತೇಜೋವಧೆ ಮಾಡಲಾಗ್ತಿದೆ. ಬಿಜೆಪಿಯವರು  ಸತೀಶ್ ಜಾರಕಿಹೊಳಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ ಎಂದು ಸತೀಶ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು. ಜಾರಕಿಹೊಳಿಯವರು  ಹಿಂದೂ ಪದ ಪರ್ಷಿಯನ ಭಾಷೆಯಿಂದ ಬಂದಿದ್ದು, ಅದರ ಅರ್ಥ ಕೆಟ್ಟದು ಎಂಬುದಾಗಿದೆ ಅಂತಾ ಹೇಳಿದ್ದನ್ನು ತಿರುಚಿ ಹಿಂದೂ ಧರ್ಮದ ವಿರೋಧಿ ಪಟ್ಟವನ್ನು ಕಟ್ಟುತ್ತಿದ್ದಾರೆ. ಶಾಸಕ ಯತ್ನಾಳ ಕೂಡಾ ಬೇಕಾ ಬಿಟ್ಟಿ ಮಾತಾಡಿದ್ದಾರೆ. ಹೀಗೆ  ಮುಂದುವರೆದರೆ ಅವರಿಗೆ ತಕ್ಕ ಪಾಠ ಕಲಿಸುತ್ತೆವೆ ಎಂದು ಎಚ್ಚರಿಸಿದರು‌.

ನಗರದ ಕಾಗಿನೆಲೆ ರಸ್ತೆಯ ಮುರುಘರಾಜೇಂದ್ರ ಮಠದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಪಿ.ಬಿ ರಸ್ತೆ ಮುಖಾಂತರ ಸಾಗಿ ಹೊಸಮನಿ ಸಿದ್ದಪ್ಪ ವೃತ್ತಕ್ಕೆ ಬಂದು ಸಮಾವೇಶಗೊಂಡಿತು. ಈ ವೇಳೆ ಪ್ರತಿಭಟನಾಕಾರು ಬಿಜೆಪಿ ಸರ್ಕಾರ ಹಾಗೂ ಆರ್‌ಎಸ್‌ಎಸ್‌ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶವನ್ನು ವ್ಯಕ್ತಪಡಿಸಿದರು.

Tap to resize

Latest Videos

undefined

ಸತೀಶ್‌ ಜಾರಕಿಹೊಳಿ ಕ್ಷಮೆಯಾಚಿಸುವ ಅಗತ್ಯವಿಲ್ಲ, ಸಾಹಿತಿ ಪ್ರೊ.ಕೆ.ಎಸ್‌. ಭಗವಾನ್‌
ಮೈಸೂರು: ಶಾಸಕ ಸತೀಶ್‌ ಜಾರಕಿಹೊಳಿ ಅವರು ಕೇವಲ ಹಿಂದೂ ಪದದ ಮೂಲದ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ, ಹಿಂದೂ ಎನ್ನುವುದು ಇಲ್ಲಿನ ಪದವಲ್ಲ. ಪರ್ಷಿಯನ್ನರ ಭಾಷೆಯಲ್ಲಿ ಸ ಅಕ್ಷರದ ಬದಲು ಹ ಅಕ್ಷರ ಬಳಕೆಯಾಗುವ ಕಾರಣ ಸಿಂಧೂ ಪದವನ್ನು ಹಿಂದೂ ಎಂದು ಕರೆದರು. ಹೀಗಾಗಿ ಸತೀಶ್‌ ಜಾರಕಿಹೊಳಿ ಅವರು ತಮ್ಮ ಹೇಳಿಕೆ ಬಗ್ಗೆ ಕ್ಷಮೆಯಾಚಿಸುವ ಅಗತ್ಯವಿಲ್ಲ ಎಂದು ಸಾಹಿತಿ ಪ್ರೊ.ಕೆ.ಎಸ್‌. ಭಗವಾನ್‌ ತಿಳಿಸಿದರು.

ಪ್ರಗತಿಪರ ವೇಷ ಹಾಕಿದವರಿಗೆ ಹಿಂದೂ ಧರ್ಮದ ಮೇಲೆ ಅದೆಷ್ಟು ತಕರಾರುಗಳು..!

ವೇದ, ಉಪನಿಷತ್ತು, ಪುರಾಣ, ಉಪ ಪುರಾಣಗಳಲ್ಲೆಲ್ಲಿಯೂ ಹಿಂದೂ ಪದ ಬಳಕೆಯಿಲ್ಲ. ಅಲ್ಲಿರುವುದೆಲ್ಲ ಚಾತುರ್ವರ್ಣ, ವೈದಿಕ ಧರ್ಮ ಮಾತ್ರ ಇದೆ. ನಾನು ಮೇಲು, ನೀನು ಕೀಳು ಎಂದು ಹೇಳುವುದು ಯಾವ ಧರ್ಮ? ಅಲ್ಲದೆ, ಕ್ರೈಸ್ತ, ಮುಸ್ಲಿಂ ಧರ್ಮಗಳಿಗೆ ಮತಾಂತರವಾದವರು ಬಳಿಕವೇ ಆ ಧರ್ಮದ ಧಾರ್ಮಿಕ ಮುಖಂಡರಾಗಬಹುದಾಗಿದೆ. ಆದರೆ, ಹಿಂದೂ ವೈದಿಕ ಧರ್ಮದಲ್ಲಿ ಕೇವಲ ಒಂದೇ ಜಾತಿಯವರೇ ಪುರೋಹಿತರಾಗಿರುತ್ತಾರೆ. ಹೀಗಾಗಿ ಇಲ್ಲಿ ಸಮಾನತೆ ಎಲ್ಲಿದೆ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಹಿಂದು ಅನ್ನೋದು ಅಶ್ಲೀಲ ಪದ, ಇದು ಪರ್ಷಿಯಾದಿಂದ ಬಂದಿದ್ದು: ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ!

ಮಾಜಿ ಮೇಯರ್‌ ಪುರುಷೋತ್ತಮ್‌ ಮಾತನಾಡಿ, ಸತೀಶ್‌ ಜಾರಕಿಹೊಳಿ ಅವರ ವಿರುದ್ಧ ರಾಜಕೀಯ ಪಕ್ಷದ ಹಿತಾಸಕ್ತಿಗಾಗಿ ಕೆಲವರು ಹೋರಾಟ ನಡೆಸುತ್ತಿರುವುದು ಸರಿಯಲ್ಲ. ದಿನನಿತ್ಯ ಹಿಂದೂ ಸಂಸ್ಕೃತಿ ಎನ್ನುವವರಿಗೆ ಮಾನವೀಯತೆ ಎಲ್ಲಿದೆ? ಇಲ್ಲಿ ಅಸಮಾನತೆ ಬಿಟ್ಟರೆ ಬೇರೇನೂ ಇಲ್ಲ. ಪ್ರಜಾಪ್ರಭುತ್ವದಲ್ಲಿ ವ್ಯಕ್ತಿ ತನಗನ್ನಿಸಿದನ್ನು ಹೇಳಬಾರದ ಪರಿಸ್ಥಿತಿ ಸೃಷ್ಟಿಸುವುದು ಸರಿಯಲ್ಲ. ಹೀಗಾಗಿ ಸತೀಶ್‌ ಜಾರಕಿ ಹೊಳಿ ಅವರು ಯಾವುದೇ ಕಾರಣಕ್ಕೂ ಕ್ಷಮೆಯಾಚಿಸಬಾರದು ಎಂದರು. ಸಮಾನ ಮನಸ್ಕರ ವೇದಿಕೆಯ ಸಿದ್ದಸ್ವಾಮಿ, ಸೋಮಯ್ಯ ಮಲಿಯೂರು, ಜವರಪ್ಪ, ರೇವಣ್ಣ ಇದ್ದರು.

click me!