'ರಮೇಶ್‌ ಮುಸ್ಲಿಂ ಟೋಪಿ ಹಾಕಿದ್ದು, ಕರಿ ಟೋಪಿಯಲ್ಲ'

Kannadaprabha News   | Asianet News
Published : Jan 16, 2021, 10:48 AM IST
'ರಮೇಶ್‌ ಮುಸ್ಲಿಂ ಟೋಪಿ ಹಾಕಿದ್ದು, ಕರಿ ಟೋಪಿಯಲ್ಲ'

ಸಾರಾಂಶ

ನಮ್ಮ ತಂದೆ ಲಕ್ಷ್ಮಣರಾವ್‌ ಜಾರಕಿಹೊಳಿ ಪತ್ರ ಚಳವಳಿಯಲ್ಲಿ ಹೋರಾಟ ಮಾಡಿದ್ದರು. ಆದರೆ, ಸಂಘ ಪರಿವಾರದಲ್ಲಿ ಇರಲಿಲ್ಲ. ಸಂಘದ ಸಲುವಾಗಿ ಮೂರು ವರ್ಷ ಜೈಲು ವಾಸ ಮಾಡಿದ್ದಾರೆ ಎನ್ನುವುದು ಶುದ್ಧ ಸುಳ್ಳು ಎಂದ ಸತೀಶ್‌ ಜಾರಕಿಹೊಳಿ

ಬೆಳಗಾವಿ(ಜ.16): ರಮೇಶ್‌ ಜಾರಕಿಹೊಳಿ ಮುಸ್ಲಿಂ ಟೋಪಿ ಹಾಕಿದ್ದು ನೋಡಿದ್ದೇವೆ. ಆದರೆ, ಕರಿ ಟೋಪಿ (ಆರ್‌ಎಸ್‌ಎಸ್‌) ಹಾಕಿದ್ದು ನೋಡಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಹೇಳಿದರು.

ಕಾಂಗ್ರೆಸ್‌ ಭವನದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ತಂದೆ ಲಕ್ಷ್ಮಣರಾವ್‌ ಜಾರಕಿಹೊಳಿ ಪತ್ರ ಚಳವಳಿಯಲ್ಲಿ ಹೋರಾಟ ಮಾಡಿದ್ದರು. ಆದರೆ, ಸಂಘ ಪರಿವಾರದಲ್ಲಿ ಇರಲಿಲ್ಲ. ಸಂಘದ ಸಲುವಾಗಿ ಮೂರು ವರ್ಷ ಜೈಲು ವಾಸ ಮಾಡಿದ್ದಾರೆ ಎನ್ನುವುದು ಶುದ್ಧ ಸುಳ್ಳು ಎಂದರು.

ಯೋಗೇಶ್ವರ್‌ ಸಾಲ ಮಾಡಿ, ರಿಸ್ಕ್‌ ತೆಗೆದುಕೊಂಡವರು: ಜಾರಕಿಹೊಳಿ

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ಸಚಿವ ರಮೇಶ್‌ ಜಾರಕಿಹೊಳಿ ಅವರು, ನಾವು ಒರಿಜಿನಲ್‌ ಜನಸಂಘದವರು. ಚಿಕ್ಕವರಿದ್ದಾಗ ಕರಿ ಟೋಪಿ ಹಾಕಿಕೊಳ್ಳುತ್ತಿದ್ದೆವು. ನಮ್ಮ ತಂದೆ ಲಕ್ಷ್ಮಣ ಜಾರಕಿಹೊಳಿ ಅವರು ಸಂಘಟನೆಯ ಸಲುವಾಗಿ 3 ತಂಗಳು ಜೈಲುವಾಸ ಅನುಭವಿಸಿದ್ದರು ಎಂದು ತಿಳಿದ್ದರು. ಇದಕ್ಕೆ ಸಂಬಂಧಿಸಿದಂತೆ ಇದೀಗ ಸತೀಶ್‌ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ.
 

PREV
click me!

Recommended Stories

ಡಿವೈಡರ್‌ನಿಂದ ಹಾರಿ KSRTC ಬಸ್‌ಗೆ ಡಿಕ್ಕಿಯಾದ ಕಾರ್, ಮೂರು ಸಾವು ಚೆಲ್ಲಾಪಿಲ್ಲಿಯಾದ ಮೃತದೇಹಗಳು
ಸರ್ಕಾರಿ ಶಾಲೆ ಟಾಯ್ಲೆಟ್‌ ಸ್ವಚ್ಛತೆಗೆ ಉದ್ಯಮಿ ನೆರವು