ಎಂಟಿಬಿ ಬಳಿ ಮನೆ ಅಡವಿಟ್ಟು ಸಾಲ ಪಡೆದುಕೊಂಡಿದ್ದಾರಾ ಯೋಗೇಶ್ವರ್..?

Kannadaprabha News   | Asianet News
Published : Jan 16, 2021, 09:59 AM IST
ಎಂಟಿಬಿ ಬಳಿ ಮನೆ ಅಡವಿಟ್ಟು ಸಾಲ ಪಡೆದುಕೊಂಡಿದ್ದಾರಾ ಯೋಗೇಶ್ವರ್..?

ಸಾರಾಂಶ

ಆಸ್ತಿ ಅಡವಿಟ್ಟು ಯೋಗೇಶ್ವರ್ ಸಾಲ ಪಡೆದುಕೊಂಡಿದ್ದಾರೆ ಎನ್ನುವ  ವಿಚಾರವಾಗಿ ಇದೀಗ ಸ್ವತಃ ಎಂಟಿಬಿ ನಾಗರಾಜ್ ಪ್ರತಿಕ್ರಿಯೆ ನೀಡಿದ್ದಾರೆ. ಎಂಟಿಬಿ ಸಾಲದ ಬಗ್ಗೆ  ಮಾತನಾಡಿದ್ದೇನು..? 

ಚಿತ್ರದುರ್ಗ (ಜ.16): ರಾಜ್ಯ ಸಚಿವ ಸಂಪುಟದ ನೂತನ ಸಚಿವ ಸಿ.ಪಿ.ಯೋಗೇಶ್ವರ್‌ ನನ್ನ ಬಳಿ ಯಾವುದೇ ಮನೆ, ಮಠ ಆಸ್ತಿ ಅಡವಿಟ್ಟು ಸಾಲ ಪಡೆದುಕೊಂಡಿಲ್ಲ ಎಂದು ನೂತನ ಸಚಿವ ಎಂ.ಟಿ.ಬಿ.ನಾಗರಾಜ್‌ ಹೇಳಿದರು. 

ಈ ಮೂಲಕ ಜಲ ಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಜತೆ ಮಾತನಾಡಿದ್ದು, ಯಾವ ಕಾರಣಕ್ಕೆ ಹೀಗೆ ಹೇಳುತ್ತೀರಿ ಎಂದು ಕೇಳಿದ್ದೇನೆ. ಸತ್ಯಾಸತ್ಯತೆ ಇದ್ದರೆ ಮಾತಾಡಿ ಎಂದು ಹೇಳಿರುವೆ ಎಂದು ತಿಳಿಸಿದರು.

ಯೋಗೇಶ್ವರ್‌ ಸಾಲ ಮಾಡಿ, ರಿಸ್ಕ್‌ ತೆಗೆದುಕೊಂಡವರು: ಜಾರಕಿಹೊಳಿ .. 

ಎಂಟಿಬಿ ನಾಗರಾಜ್ ಬಳಿ ಯೋಗೇಶ್ವರ್ ಸಾಲ ಮಾಡಿ ರಿಸ್ಕ್ ತೆಗೆದುಕೊಂಡರು ಎನ್ನುವ ರಮೇಶ್ ಜಾರಕಿಹೊಳಿ ಹೇಳಿಕೆಗೆ ಎಂಟಿಬಿ ಪ್ರತಿಕ್ರಿಯೆ ನೀಡಿದ್ದಾರೆ.

PREV
click me!

Recommended Stories

ಬೆಂಗಳೂರು ಹೊಸೂರು ಫ್ಲೈಓವರ್ ಮೇಲೆ ಸ್ಲೀಪರ್ ಬಸ್ ಅಪಘಾತ, ನಾಲ್ವರಿಗೆ ಗಾಯ
ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಹೊಸ ವರ್ಷ ಸೆಲೆಬ್ರೇಷನ್‌ಗೆ ಡೆಡ್ ಲೈನ್, ಸಮಯ ಮೀರಿದರೆ ಆಪತ್ತು