ನೊಣಗಳಿಂದ ರಕ್ಷಿಸಲು ಹಸುಗಳಿಗೆ ಸೀರೆ : ಕೋಳಿ ಫಾರಂ ತಂದ ಸಂಕಷ್ಟ

Kannadaprabha News   | Asianet News
Published : Nov 07, 2021, 08:39 AM IST
ನೊಣಗಳಿಂದ ರಕ್ಷಿಸಲು ಹಸುಗಳಿಗೆ ಸೀರೆ :  ಕೋಳಿ ಫಾರಂ ತಂದ ಸಂಕಷ್ಟ

ಸಾರಾಂಶ

ಊಟ ಮಾಡಲು ಹೋದರೆ ಕೈಗೆ ಮುತ್ತಿಕ್ಕುವ ನೊಣ, ಬೆಳೆಗಳಿಗೂ ಈಗದ ಬಾಧೆ, ಹಸುಗಳಿಗೂ ನೊಣಗಳು ಕಚ್ಚಿ ಗಾಯ ನೊಣಗಳಿಂದ ಪಾರು ಮಾಡಲು ಜಾನುವಾರುಗಳಿಗೆ ಇಲ್ಲಿನ ರೈತರು ಸೀರೆ ಸುತ್ತುತ್ತಿದ್ದಾರೆ.

 ಹನೂರು(ನ.07):  ಊಟ ಮಾಡಲು ಹೋದರೆ ಕೈಗೆ ಮುತ್ತಿಕ್ಕುವ ನೊಣ (Flies), ಬೆಳೆಗಳಿಗೂ ಈಗದ ಬಾಧೆ, ಹಸುಗಳಿಗೂ (Cow) ನೊಣಗಳು ಕಚ್ಚಿ ಗಾಯಗೊಳಿಸಿದ್ದು, ನೊಣಗಳಿಂದ ಪಾರು ಮಾಡಲು ಜಾನುವಾರುಗಳಿಗೆ ಇಲ್ಲಿನ ರೈತರು (farmers) ಸೀರೆ (Saree) ಸುತ್ತುತ್ತಿದ್ದಾರೆ.

ಇತ್ತೀಚೆಗೆ ಹನೂರು (Hanur) ತಾಲೂಕಿನ ಹುಲ್ಲೇಪುರ ವ್ಯಾಪ್ತಿಯಲ್ಲಿ ತಲೆ ಎತ್ತಿರುವ ಕೋಳಿ ಸಾಕಾಣಿಕೆ ಕೇಂದ್ರದಲ್ಲಿನ ಅವೈಜ್ಞಾನಿಕ ನಿರ್ವಹಣೆಯಿಂದ ಇಲ್ಲಿನ ರೈತರು ನೊಣಗಳಿಂದ ಜಾನುವಾರು ಕಾಪಾಡಲು ಸೀರೆಗೆ ಮೊರೆ ಹೋಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಬೆಂಗಳೂರು (Bengaluru) ಮೂಲದ ಉದ್ಯಮಿಯೊಬ್ಬರು ಸ್ಥಾಪಿಸಿರುವ 50 ಸಾವಿರ ಕೋಳಿ ಸಾಕಾಣಿಕೆ (Poultry Farm) ಸಾಮಾರ್ಥ್ಯದ ಧ್ರುವ ಪೌಲ್ಟಿ್ರ ಫಾರಂನಲ್ಲಿ ಅವೈಜ್ಞಾನಿಕ ನಿರ್ವಹಣೆ ಮಾಡುತ್ತಿರುವುದರಿಂದ ಹನೂರು ಹೊರವಲಯ, ರಾಯರದೊಡ್ಡಿ, ಚಿಂಚಳ್ಳಿ ಹನೂರು, ಯಡಹಳ್ಳಿ ದೊಡ್ಡಿ ಗ್ರಾಮಗಳಲ್ಲಿ ನೊಣಗಳ ಕಾಟ ಮಿತಿ ಮೀರಿದ್ದು ರೈತರು ಹೈನುಗಾರಿಕೆ ನಡೆಸಲಾಗದೇ ಶೋಚನೀಯ ಸ್ಥಿತಿಯಲ್ಲಿದ್ದು, ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಇಲ್ಲಿನ ಕಂದಾಯ ಇಲಾಖೆ ವಿರುದ್ಧ ರೈತರು ಆಕ್ರೋಶ ಹೊರಹಾಕಿದ್ದಾರೆ.

ರಾಯರದೊಡ್ಡಿ ಗ್ರಾಮದ ಹೊನ್ನಯ್ಯ  ಮಾತನಾಡಿ, ಕೋಳಿ ಫಾರಂನವರು ಸರಿಯಾಗಿ ತ್ಯಾಜ್ಯ ನಿರ್ವಹಣೆ ಮಾಡುತ್ತಿಲ್ಲ, ಮೊದ ಮೊದಲು ದುರ್ವಾಸನೆಯನ್ನೇನೋ ಸಹಿಸಿಕೊಂಡೆವು. ಆದರೆ, ಈಗ ನೊಣಗಳ ಕಾಟ ತಾಳಲಾಗುತ್ತಿಲ್ಲ, ಹಸುಗಳ ಮೇಲೆ ನೂರಾರು ನೊಣಗಳು ಕುಳಿತು ಕಚ್ಚಿ ಗಾಯಗೊಳಿಸಿದ್ದು ಗಾಯಕ್ಕೆ ನೊಣ ಮುತ್ತಬಾರದೆಂದು ಸೀರೆ ಸುತ್ತುತ್ತಿದ್ದೇವೆ. ಇನ್ನು ಕೆಲವರು ಎಲ್ಲಾ ಹಸುಗಳಿಗೆ ಸೀರೆ ಸುತ್ತಿ ನೊಣಗಳಿಂದ ಕಾಪಾಡಲು ಮುಂದಾಗಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.

ಇನ್ನಾದರೂ ಸಂಬಂಧಪಟ್ಟಅಧಿಕಾರಿಗಳು ಕೋಳಿ ಸಾಕಾಣಿಕೆ ಕೇಂದ್ರದಲ್ಲಿ ಶುಚಿತ್ವ ಕಾಪಾಡುವಂತೆ ಕ್ರಮ ಕೈಗೊಳ್ಳಬೇಕಿದ್ದು ಸಂಬಂಧಪಟ್ಟವರು ಕೂಡಲೇ ಕ್ರಮ ಜರುಗಿಸುವ ಮೂಲಕ ಇಲ್ಲಿನ ಪ್ರಶಾಂತ ಹಾಗೂ ಶುಚಿತ್ವ ಪರಿಸರ ಸಂರಕ್ಷಿಸುವ ಕೆಲಸ ಅಗತ್ಯವಾಗಿ ಮಾಡಬೇಕಾಗಿದೆ. ಈ ಬಗ್ಗೆ ಸಂಬಂಧಪಟ್ಟವರು ಯಾವ ಕ್ರಮ ಕೈಗೊಳ್ಳುವರೋ ಕಾದು ನೋಡಬೇಕಾಗಿದೆ.

ಬೆಳೆಗಳ ಮೇಲೆಲ್ಲಾ ನೊಣ ಕೂರುತ್ತಿದ್ದು ಫಸಲು ಏನಾಗುವುದೋ ಎಂಬ ಭೀತಿ ಶುರುವಾಗಿದೆ, ಮನೆಯಲ್ಲಿ ನೊಣ ಮುತ್ತಿಕ್ಕದ ಜಾಗವೇ ಇಲ್ಲಾ, ಊಟ ಮಾಡಲು ತೊಂದರೆಯಾಗುತ್ತಿದ್ದು, ಮಕ್ಕಳ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ

  •  ನೊಣಗಳಿಂದ ಪಾರು ಮಾಡಲು ಜಾನುವಾರುಗಳಿಗೆ ಇಲ್ಲಿನ ರೈತರು ಸೀರೆ ಸುತ್ತುತ್ತಿದ್ದಾರೆ
  • ಹನೂರು ತಾಲೂಕಿನ ಹುಲ್ಲೇಪುರ ವ್ಯಾಪ್ತಿಯಲ್ಲಿ ತಲೆ ಎತ್ತಿರುವ ಕೋಳಿ ಸಾಕಾಣಿಕೆ ಕೇಂದ್ರದಲ್ಲಿನ ಅವೈಜ್ಞಾನಿಕ ನಿರ್ವಹಣೆ
  • ಬೆಂಗಳೂರು ಮೂಲದ ಉದ್ಯಮಿಯೊಬ್ಬರು ಸ್ಥಾಪಿಸಿರುವ 50 ಸಾವಿರ ಕೋಳಿ ಸಾಕಾಣಿಕೆ ಸಾಮಾರ್ಥ್ಯದ ಧ್ರುವ ಫಾರಂ
  • ಗ್ರಾಮಗಳಲ್ಲಿ ನೊಣಗಳ ಕಾಟ ಮಿತಿ ಮೀರಿದ್ದು ರೈತರು ಹೈನುಗಾರಿಕೆ ನಡೆಸಲಾಗದೇ ಶೋಚನೀಯ ಸ್ಥಿತಿ
  • ಹಸುಗಳ ಮೇಲೆ ನೂರಾರು ನೊಣಗಳು ಕುಳಿತು ಕಚ್ಚಿ ಗಾಯ
  • ಕೋಳಿ ಫಾರಂನವರು ಸರಿಯಾಗಿ ತ್ಯಾಜ್ಯ ನಿರ್ವಹಣೆ ಮಾಡದೆ ದುರ್ವಾಸನೆ

ನಾಗರಾಜು, ರೈತ

ನೊಣಗಳ ಕಾಟಕ್ಕೆ ತತ್ತರಿಸಿದ ಗ್ರಾಮಸ್ಥರು

ನೊಣಗಳ ಕಾಟಕ್ಕೆ ತತ್ತರಿಸಿದ ಗ್ರಾಮಸ್ಥರ ಸಮಸ್ಯೆಯನ್ನ ಏಷ್ಯಾನೆಟ್ ಸುವರ್ಣ ನ್ಯೂಸ್ ಡಿಜಿಟಲ್‌ನಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಹೌದು, ನೊಣಗಳ ಕಾಟಕ್ಕೆ ಮುಕ್ತಿ ಹಾಡಲು ಹರ್ತಿ ಗ್ರಾಮ ಪಂಚಾಯ್ತಿಯಲ್ಲಿ  ತುರ್ತು ಸಭೆ ನಡೆಸಲಾಯಿತು.

ವರದಿ ಬಿತ್ತರವಾದ ಬೆನ್ನಲ್ಲೇ ಕೋಳಿ ಫಾರ್ಮ್‌ಗೆ ಭೇಟಿ ಕೊಟ್ಟು ಪಿಡಿಒ ಪರಿಶೀಲನೆ ನಡೆಸಿದರು.  ಗದಗ ತಾಲೂಕಿನ ಹರ್ತಿ ಗ್ರಾಮದಲ್ಲಿನ ನೊಣಗಳ ಕಾಟದ ಬಗ್ಗೆ ಸ್ಟೋರಿ ಬಿತ್ತರವಾಗಿದ್ದು  ಕೋಳಿ ಫಾರ್ಮ್‌ನಲ್ಲಿ ಸ್ವಚ್ಛತೆ ಇಲ್ಲದ ಕಾರಣ ನೊಣಗಳ ಉತ್ಪತ್ತಿಯಾಗುತ್ತಿದ್ದು, ಫಾರ್ಮ್ ಮಾಲೀಕ ಚಂದ್ರಶೇಖರಗೆ ಸ್ವಚ್ಛತೆ ಕಾಪಾಡಿಕೊಳ್ಳಲು ತಾಕೀತು ಮಾಡಿದರು.  ತುರ್ತು ಸಭೆಯಲ್ಲಿ ಫಾರ್ಮ್ ಬಂದ್ ಮಾಡಿಸುವ ಟರಾವ್ ಹೊರಡಿಸಿದರು. 

PREV
Read more Articles on
click me!

Recommended Stories

ಜನರ ವಿಶ್ವಾಸ ಕಳೆದುಕೊಂಡ ಕಾಂಗ್ರೆಸ್, ಚುನಾವಣೆಗೇ ಬನ್ನಿ: ಸರ್ಕಾರಕ್ಕೆ ಸಿ.ಟಿ.ರವಿ ಸವಾಲು
ಸಿದ್ದರಾಮಯ್ಯ ಆಡಳಿತ ಕೇವಲ ಟೀಕೆಯಲ್ಲಿ ಮುಳುಗಿದೆ: ಕೇಂದ್ರ ಸಚಿವ ವಿ.ಸೋಮಣ್ಣ ಆರೋಪ