
ಮೈಸೂರು: ಸಾಂಸ್ಕೃತಿಕ ನಗರಕ್ಕೆ ಆಗಮಿಸಿದ್ದ ಮಾಜಿ ಸಚಿವ ಸಾರಾ ಮಹೇಶ ಮಾಧ್ಯಮದ ಎದುರು ಕಾಂಗ್ರೆಸ್ ಸರ್ಕಾರದ ಆಡಳಿತವನ್ನು ಕಟುವಾಗಿ ಟೀಕಿಸಿದ್ದಾರೆ. ಅಲ್ಲದೇ ಮೂಡಾ ಸೈಟ್, ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ವಿರುದ್ದ ಹರಿಹಾಯ್ದಿದ್ದಾರೆ. ಮೂಡಾ ಸೈಟ್‌ಗಳ ರದ್ಧತಿಗೆ ಆಗ್ರಹಿಸಿದ್ದಾರೆ. ಅಲ್ಲದೇ ಮೈಸೂರನ್ನು ಅಭಿವೃದ್ದಿ ಹೆಸರಲ್ಲಿ ಲೂಟಿ ಹೊಡೆಯುತ್ತಿದ್ದಾರೆ ಎಂದು ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯವಾಡಿದ್ದಾರೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
ಮುಡಾದಲ್ಲಿ 50:50 ಅನುಪಾತದಲ್ಲಿ ಸೈಟ್ ಹಂಚಿಕೆ ವಿಚಾರವಾಗಿ ಮಾತನಾಡಿದ ಮಾಜಿ ಸಚಿವ. 50:50ರ ಎಲ್ಲಾ ಸೈಟ್ ಗಳನ್ನು ಸರ್ಕಾರ ಮುಟ್ಟುಗೊಲು ಹಾಕಿಕೊಳ್ಳಬೇಕು. 50:50 ಅನುಪಾತದಲ್ಲಿ ದೊಡ್ಡ ಭ್ರಷ್ಟಾಚಾರ ಆಗಿದೆ. ಅದನ್ನು ತನಿಖಾ ಆಯೋಗಗಳೇ ವರದಿ ನೀಡಿವೆ. ಕೆಲವರು ಅದೇ ಜನರನ್ನು ದಾರಿ ತಪ್ಪಿಸಿ ಕೆಲವರು ಜನರನ್ನು ದಾರಿ ತಪ್ಪಿಸಿ 50:50 ಅನುಪಾತದ ಸೈಟ್ ಗಳನ್ನ ಮಾರುತ್ತಿದ್ದಾರೆ. 50:50 ಅನುಪಾತದ ಸೈಟ್ ಗಳ ಮಾರಾಟ ಆಗುವುದನ್ನು ನಿಲ್ಲಿಸಬೇಕು. ಡಾ.ಯತೀಂದ್ರ ಸಿದ್ದರಾಮಯ್ಯ 50:50 ಅನುಪಾತದ ಎಲ್ಲಾ ಸೈಟ್ ರದ್ದತಿಗೆ ಆದೇಶ ಮಾಡಬೇಕು. ಇಲ್ಲದಿದ್ದಲ್ಲಿ ಮುಡಾ ಮುಂದೆ ಪ್ರತಿಭಟನೆ ನಡೆಸುತ್ತೇವೆ ಎಂದು ಮೈಸೂರಿನಲ್ಲಿ ಮಾಜಿ ಸಾರಾ ಮಹೇಶ್ ಹೇಳಿಕೆ ನೀಡಿದ್ದಾರೆ.
ಲೋಕಾಯುಕ್ತರು ಐಪಿಎಸ್ ಐಎಎಸ್ ಮನೆ ಮೇಲೆ ಯಾಕೆ ದಾಳಿ ಮಾಡ್ತಿಲ್ಲ. ಐಪಿಎಸ್ ಐಎಎಸ್ ನಲ್ಲಿ ಭ್ರಷ್ಟರೆ ಇಲ್ವಾ? ಅವರು ಲಂಚವೇ ಪಡೆದಿಲ್ವ. ಲೋಕಾಯುಕ್ತ ಕಾನೂನಿನಿಂದ ಐಪಿಎಸ್, ಐಎಎಸ್ ನವರು ಹೊರಗಿದ್ದಾರಾ. ಭ್ರಷ್ಟರು ಅಂದ ಮೇಲೆ ಎಲ್ಲಾ ಇಲಾಖೆಯಲ್ಲೂ ಇರ್ತಾರೆ. ಲೋಕಾಯುಕ್ತರು ಐಎಎಸ್ ಐಪಿಎಸ್ ಬಿಟ್ಟು ಬೇರೆಯವರ ಮನೆ ಮೇಲೆ ಯಾಕೆ ದಾಳಿ ಮಾಡ್ತಿದ್ದಾರೆ. ಮೈಸೂರಿನಲ್ಲಿ ಮಾಜಿ ಸಚಿವ ಸಾರಾ ಮಹೇಶ್ ಹೇಳಿಕೆ.
ಮೈಸೂರನ್ನು ಅಭಿವೃದ್ದಿ ಮಾಡುತ್ತೇವೆ ಅಂದರು. 12 ಕಡೆ ವೈಟ್ ಟ್ಯಾಪಿಂಗ್ ಮಾಡ್ತಿದ್ದಾರೆ. ಒಳಚರಂಡಿ ಮಾಡದೆ ವೈಟ್ ಟ್ಯಾಪಿಂಗ್ ಮಾಡ್ತಿದ್ದಾರೆ. ಅದು ಕೂಡಾ ಎಂ.ಡಿ.ಎ 390 ಕೋಟಿ ಹಣದಲ್ಲಿ. ಅಲ್ಲಿನ ನೌಕರರಿಗೆ ಸಂಬಳ ಕೊಡಲು ಸೈಟು ಮಾರಾಟ ಮಾಡ್ತಿದ್ದಾರೆ. ಅಂತದರಲ್ಲಿ ವೈಟ್ ಟ್ಯಾಪಿಂಗ್ ಬೇರೆ. ಅದಕ್ಕೆ ದೇವರಾಜ ಅರಸು ದಾಖಲೆ ಮುರಿದರು ಅಂತ ಪಟ್ಟ ಬೇರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಾರಾ ಮಹೇಶ್ ವ್ಯಂಗ್ಯವಾಡಿದ್ದಾರೆ.