3 ರೂ. ಇದ್ದ ಒಂದು ಸಸಿ ಬೆಲೆ ಏಕಾಏಕಿ 23 ರೂ.ಗೆ ಏರಿಕೆ: ಕಂಗಾಲಾದ ರೈತ..!

Published : May 27, 2023, 11:25 PM IST
3 ರೂ. ಇದ್ದ ಒಂದು ಸಸಿ ಬೆಲೆ ಏಕಾಏಕಿ 23 ರೂ.ಗೆ ಏರಿಕೆ: ಕಂಗಾಲಾದ ರೈತ..!

ಸಾರಾಂಶ

ಅರಣ್ಯ ಕೃಷಿಗೆ ಮುಂದಾಗುವ ಅನೇಕರಿಗೆ ಸಸಿಗಳು ಖರೀದಿಸಲು ಕಷ್ಟವಾಗುತ್ತಿದೆ. ಹೀಗಾಗಿ ಈ ಬಾರಿ ಅರಣ್ಯ ಕೃಷಿಗೆ ಕುಸಿಯುವ ಆತಂಕವೂ ಎದುರಾಗಿದ್ದು, ಪರಿಸರ ಹೆಚ್ಚಿಸುವ ಬದಲು ಸರ್ಕಾರ ಸಾಮಾಜಿಕ ಹೊಣೆಗಾರಿಕೆ ಮರೆತು ತನ್ನ ಆರ್ಥಿಕ ನಷ್ಟ ತಪ್ಪಿಸಲು ಸಸಿಗಳ ಬೆಲೆ ಏರಿಕೆ ಮಾಡಿದ್ದು ಚರ್ಚೆಗೆ ಗ್ರಾಸವಾಗಿದೆ. 

ಆಳಂದ(ಮೇ.27):  ಮುಂಗಾರು ಹಂಗಾಮು ಅರಣ್ಯ ಕೃಷಿಗೆ ಪೂರಕ ವಾತಾವರಣ ಹಿನ್ನೆಲೆಯಲ್ಲಿ ಈಗಿನಿಂದಲೆ ಇಲ್ಲಿನ ಪ್ರಾದೇಶಿಕ ಮತ್ತು ಸಾಮಾಜಿಕ ಅರಣ್ಯ ಇಲಾಖೆ ಪ್ರತ್ಯೇಕವಾಗಿ ಭರದ ಸಿದ್ಧತೆ ಮಾಡಿಕೊಳ್ಳತೊಡಗಿದೆ. ಈ ನಡುವೆ ಅರಣ್ಯ ಕೃಷಿಗೆ ಮುಂದಾಗುವ ರೈತರಿಗೆ ಅರಣ್ಯ ಇಲಾಖೆ ನೀಡುವ ಸಸಿಗಳಲ್ಲಿ ಭಾರೀ ಬೆಲೆ ಏರಿಕೆ ಮಾಡಿದ್ದರಿಂದ ಸರ್ಕಾರವೇ ಅರಣ್ಯ ಕೃಷಿಗೆ ಬೆಂಕಿಯಿಟ್ಟಂತಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗತೊಡಗಿದೆ.

ಅರಣ್ಯ ಕೃಷಿಗೆ ಮುಂದಾಗುವ ಅನೇಕರಿಗೆ ಸಸಿಗಳು ಖರೀದಿಸಲು ಕಷ್ಟವಾಗುತ್ತಿದೆ. ಹೀಗಾಗಿ ಈ ಬಾರಿ ಅರಣ್ಯ ಕೃಷಿಗೆ ಕುಸಿಯುವ ಆತಂಕವೂ ಎದುರಾಗಿದ್ದು, ಪರಿಸರ ಹೆಚ್ಚಿಸುವ ಬದಲು ಸರ್ಕಾರ ಸಾಮಾಜಿಕ ಹೊಣೆಗಾರಿಕೆ ಮರೆತು ತನ್ನ ಆರ್ಥಿಕ ನಷ್ಟ ತಪ್ಪಿಸಲು ಸಸಿಗಳ ಬೆಲೆ ಏರಿಕೆ ಮಾಡಿದ್ದು ಚರ್ಚೆಗೆ ಗ್ರಾಸವಾಗಿದೆ. ಪ್ರತಿವರ್ಷ ಅರಣ್ಯ ಇಲಾಖೆಯಿಂದ ಪ್ರೋತ್ಸಾಹಧನ ಅಡಿ ಅರಣ್ಯ ಕೃಷಿ ಕೈಗೊಳುತ್ತಿದ್ದ ರೈತರು, ಬೆಲೆ ಏರಿಕೆಯಾದ್ದರಿಂದ ಖರೀದಿಗೆ ಹಿಂದೆ ಮುಂದೆ ನೋಡುತ್ತಿದ್ದಾರೆ. ಕಳೆದ ಸಾಲಿನ ದರಕ್ಕೆ ಹೋಲಿಸಿದರೆ 3 ರೂಪಾಯಿ ಇದ್ದ ಸಸಿ ಬೆಲೆ ಈ ಬಾರಿ 23 ರು.ಗೆ ಹೆಚ್ಚಿಸಿದ್ದರಿಂದ 300ರಿಂದ 400 ಸಸಿಗಳನ್ನು ಖರೀದಿಸಿ ನೆಡುವುದು ರೈತರಿಗೆ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ.

ಕಲಬುರಗಿ: 3 ಹೊಸ ರೈಲು ಓಡಿಸಲು ರೇಲ್ವೆ ಸಚಿವರಿಗೆ ಮಲ್ಲಿ​ಕಾ​ರ್ಜುನ ಖರ್ಗೆ ಪತ್ರ

ಸಾರ್ವಜನಿಕರಿಗೆ ಇಕೋ ಬಜೆಟ್‌ ಅಡಿಯಲ್ಲಿ ಒಂದು ರುಪಾಯಿಗೆ ವಿತರಣೆ ಆಗುತ್ತಿದ್ದ ಸಸಿಗಳ ಬೆಲೆ ಈಗ 6 ರುಪಾಯಿ ಹೆಚ್ಚಿಸಿದ್ದು, ಸಹ ಅರಣ್ಯ ಕೃಷಿಗೆ ಮುಂದಾದವರಿಗೆ ಆರ್ಥಿಕ ಹೊರೆಯಾಗಿ ಕೈಸುಟ್ಟುಕೊಳ್ಳುವಂತೆ ಮಾಡಿದೆ.
ಈ ಕುರಿತು ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಅರಣ್ಯ ಕೃಷಿಗೆ ಉತ್ತೇಜಿಸುವ ನಿಟ್ಟಿನಲ್ಲಿ ಸಸಿಗಳ ಬೆಲೆ ಏರಿಕೆ ಹಿಂಪಡೆದು ಮೊದಲಿನ ಬೆಲೆಯಲ್ಲಿ ನೀಡಿದರೆ ಒಳ್ಳೆಯದು ಎಂದು ರೈತರು ಹೇಳಿಕೊಂಡಿದ್ದಾರೆ.

ನಗರ ಹಸಿರೀಕರಣ ಯೋಜನೆ ಅಡಿಯಲ್ಲಿ ಸಾರ್ವಜನಿಕ ಸ್ಥಳ ಉದ್ಯಾನವನ ಸೇರಿ ಇನ್ನಿತರ ಸ್ಥಳಗಳಲ್ಲಿ ನೆಡುವುದಕ್ಕೆ 1520 ಸಸಿಗಳು ಉತ್ಪಾದಿಸಲಾಗಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಪ್ರಾದೇಶಿಕ ಅರಣ್ಯ ಇಲಾಖೆಯಿಂದ ರಸ್ತೆ ಬದಿ ನೆಡುತೋಪ ನಡೆಸುವುದಕ್ಕಾಗಿ 6600 ಸಸಿಗಳ ಉತ್ಪಾದನೆ ಕೈಗೊಂಡು ಮಳೆಗಾಲಕ್ಕೆ ನೆಡಲು ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಇದರ ಜೊತೆಯಲ್ಲೇ ಸಾರ್ವಜನಿಕರಿಗೆ ರಿಯಾತಿದರದಲ್ಲಿ ಇಕೋ ಬಜೆಟ್‌ ಅಡಿಯಲ್ಲಿ ವಿತರಣೆಗೆ ಮಹಾಗನಿ, ಹೆಬ್ಬೇವು, ಕರಿಬೇವು, ಬೀದಿರು, ಸಾಗವಾನಿ ಮತ್ತು ಶ್ರೀಗಂಧದಂತ 50 ಸಾವಿರ ಸಸಿಗಳು ಉತ್ಪಾದಿಸಿದ್ದು, ಪ್ರತಿ ಸಸಿಗೆ 6 ರುಪಾಯಂತೆ ದರ ನಿಗದಿಪಡಿಸಿದೆ. ಸಾರ್ವಜನಿಕರ ವಿತರಣೆಗಾಗಿ ಸಸಿಗಳನ್ನು ಬೆಳೆಸುವ ಯೋಜನೆಯಲ್ಲೂ ಶ್ರೀಗಂಧ, ಮಹಾಗಣಿ, ಬೀದಿರು, ಬೇವು, ನೇರಳೆ ಸೇರಿ ಇನ್ನಿತರ ಒಟ್ಟು 50 ಸಾವಿರ ಸಸಿಗಳು ಉತ್ಪಾದಿಸಿದ್ದು, ಇದು ಪ್ರತಿ ಸಸಿಗೆ 23 ರುಪಾಯಿ ನಿಗದಿಯಾಗಿದೆ. ಹಳೆ ದರ ಮುಂದುವರೆಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕಲಬುರಗಿ ಜಿಲ್ಲೆಯಲ್ಲಿ 8.87 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ

ಗಿಡ, ಮರ ಬೆಳೆಸಲು ಸಿದ್ಧತೆ:

ತಾಲೂಕಿನಲ್ಲಿ ಒಟ್ಟು 1505.4 ಹೆಕ್ಟೇರ್‌ ಕ್ಷೇತ್ರದ ಅರಣ್ಯ ಪ್ರದೇಶದಲ್ಲಿ ಈಗಾಗಲೇ ಹಲವು ವರ್ಷಗಳಿಂದ ಕ್ಲಿರಿಸಿಡಿಯ ಮತ್ತು ಸ್ಥಳೀಯ ಕಾಡುಜಾತಿ ನೆಡುತೋಪು ನೆಟ್ಟು ಅರಣ್ಯ ವ್ಯಾಪ್ತಿಯ ಪೂರ್ಣಸ್ಥಳದಲ್ಲಿ ಗಿಡ, ಮರಗಳನ್ನು ಬೆಳೆಸಲಾಗಿದೆ. ಈಗ ರಸ್ತೆ ಬದಿ ಸಾರ್ವಜನಿಕ ಸ್ಥಳಗಳಲ್ಲಿ ಇಲಾಖೆಯಿಂದಲೇ ಸಸಿಗಳು ನೆಡುವ ಕಾರ್ಯ ನಡೆಯಲಿದೆ ಅಂತ ಆಳಂದ ತಾಲೂಕು ಪ್ರಾದೇಶಿಕ ಅರಣ್ಯಾಧಿಕಾರಿ ಜಗನಾಥ ಕೊರಳ್ಳಿ ಹೇಳಿದ್ದಾರೆ. 

ಹಸಿರೀಕರಣಕ್ಕೆ ಪ್ರೋತ್ಸಾಹ ಅಗತ್ಯ:

ನೆರೆಯ ರಾಜ್ಯಗಳಿಗೆ ಹೊಲಿಸಿದರೆ ಅರಣ್ಯ ಬೆಳೆಸುವಲ್ಲಿ ಕರ್ನಾಟಕ ತನ್ನತ್ತ ನೋಡುವಂತೆ ಮಾಡಿತ್ತಾದರೂ ಇದೇ ಸಲ ತನ್ನ ಆರ್ಥಿಕ ಹೊರೆಯನ್ನು ತಗ್ಗಿಸಲು ಇಲಾಖೆಯ ಬಹುತೇಕ ಮುಂದಾಗಿದ್ದು, ರಿಯಾಯಿತಿ ದರದಲ್ಲಿನ ಸಸಿಗಳ ಬೆಲೆಯನ್ನು ಹೆಚ್ಚಿಸಿದೆ. ಆದರೆ ಬೆಲೆ ಹೆಚ್ಚಳದಿಂದ ನೂರಾರು ಸಸಿಗಳನ್ನು ಖರೀದಿಸಲು ಮುಂದಾಗುವ ಜನರಿಗೆ ಆರ್ಥಿಕ ಹೊರೆಯಾಗಿ ಅರಣ್ಯ ಕೃಷಿಯನ್ನೇ ಬಿಡುವ ಸಾಧ್ಯತೆ ಇರುತ್ತದೆ. ಅರಣ್ಯ ಕೃಷಿ ಹೆಚ್ಚಳ ಮಾಡಲು ಆರ್ಥಿಕ ಲಾಭ ನೋಡದೆ ಸಾಮಾಜಿಕ ಹೊಣೆಗಾರಿಕೆಯನ್ನೇ ಮರೆಯುವ ಮೂಲಕ ಬೆಲೆ ಇಳಿಕೆ ಮಾಡಿ ಅರಣ್ಯ ಕೃಷಿಗೆ ಪ್ರೋತ್ಸಾಹಿಸಲು ಇಲಾಖೆ ಮತ್ತು ಸರ್ಕಾರ ಮುಂದಾಗಬೇಕು ಅಂತ ಪರಿಸರ ಪ್ರೇಮಿಗಳು ಮತ್ತು ರೈತ ಸಮುದಾಯ ತಿಳಿಸಿದ್ದಾರೆ. 

PREV
Read more Articles on
click me!

Recommended Stories

ಮೆಟ್ರೋ ಗುಲಾಬಿ ಮಾರ್ಗದ ರೈಲು ಅನಾವರಣ: ಯಾವ್ಯಾವ ಮಾರ್ಗಕ್ಕೆ?
ದಿಲ್ಲಿ, ಮುಂಬಯಿ ರೀತಿ ರಾಜಧಾನಿಗೆ ಎರಡು ಪೊಲೀಸ್‌ ಕಮೀಷನರೇಟ್‌