ಸ್ಯಾಂಟ್ರೋ ರವಿ ಪ್ರಕರಣ: ನಮ್ಮ ಸರ್ಕಾರ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ: ಬಿಎಸ್‌ವೈ

By Ravi JanekalFirst Published Jan 9, 2023, 1:52 PM IST
Highlights

ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಸ್ಯಾಂಟ್ರೋ ರವಿ ವಿಚಾರದಲ್ಲಿ ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳುತ್ತದೆ. ಯಾರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಸಮಗ್ರ ತನಿಖೆ ನಂತರ ಸತ್ಯಾಸತ್ಯತೆ ಹೊರಗೆ ಬರಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ಬೆಂಗಳೂರು (ಜ.9)ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಸ್ಯಾಂಟ್ರೋ ರವಿ ವಿಚಾರದಲ್ಲಿ ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳುತ್ತದೆ. ಯಾರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಸಮಗ್ರ ತನಿಖೆ ನಂತರ ಸತ್ಯಾಸತ್ಯತೆ ಹೊರಗೆ ಬರಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ಯಾಂಟ್ರೋ ರವಿ(Santro Ravi) ವಿಚಾರ ನಾನು ಸಂಪೂರ್ಣ ತಿಳಿದುಕೊಂಡಿದ್ದೇನೆ. ಸಿಎಂ ಈಗಾಗಲೇ ಕ್ರಮಕೈಗೊಳ್ಳಲು ಸೂಚಿಸಿದ್ದಾರೆ. ಕಾನೂನು ತನ್ನದೇ ಆದ ಕ್ರಮ ತೆಗೆದುಕೊಳ್ಳಲಿದೆ. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಬಿಗಿಯಾದ ಕ್ರಮ ತೆಗೆದುಕೊಂಡು ತಕ್ಕ ಪಾಠ ಕಲಿಸುವ ಪ್ರಯತ್ನ ಸರ್ಕಾರ ಮಾಡಲಿದೆ.‌ ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದರು.

ಸ್ಯಾಂಟ್ರೋ ರವಿಯ 20 ವರ್ಷದ ಕೇಸ್‌ಗಳ ಇತಿಹಾಸ ತೆಗೆಯುತ್ತೇವೆ: ಸಿಎಂ ಬೊಮ್ಮಾಯಿ

ಸ್ಯಾಂಟ್ರೋ ರವಿ ಪ್ರಕರಣದಲ್ಲಿ ಹಲವು ಸಚಿವರ ಹೆಸರು ಈ ಪ್ರಕರಣದಲ್ಲಿ ಕೇಳಿ ಬಂದಿದೆ.‌ ಸತ್ಯಾಸತ್ಯತೆ ತನಿಖೆಯಾದ ಬಳಿಕ ಹೊರಬರಲಿದೆ. ಯಾರು ಏನೇ ಹೇಳಬಹುದು. ಆದರೆ, ಸ್ಯಾಂಟ್ರೋ ರವಿ ವಿರುದ್ಧ ಖಂಡಿತ ಕ್ರಮ ತೆಗೆದುಕೊಳ್ಳುವುದು ನಿಶ್ಚಿತ ಎಂದರು.

ಸಂಪುಟ ವಿಸ್ತರಣೆ ಕುರಿತಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ ಯಡಿಯೂರಪ್ಪ ಅವರು, ಸಂಪುಟ ವಿಸ್ತರಣೆ ಚರ್ಚೆ ನಡೆಯುತ್ತಿದೆ.‌ ಇವತ್ತಲ್ಲ ನಾಳೆ ಸಂಪುಟ ವಿಸ್ತರಣೆ ಆಗುತ್ತೆ ಅನ್ನೋದಷ್ಟೇ ಗೊತ್ತು ಕಾದು ನೋಡಬೇಕಿದೆ ಎಂದರು. ಇದೇ ವೇಳೆ ಈಶ್ವರಪ್ಪ ಮತ್ತೆ ಸಂಪುಟ ಸೇರುವ ಕುರಿತು ಪ್ರತಿಕ್ರಿಯಿಸಿದ ಅವರು, ಪಕ್ಷದ ಹೈಕಮಾಂಡ್ ಏನು ತೀರ್ಮಾನ ಮಾಡ್ತಾರೋ ಗೊತ್ತಿಲ್ಲ. ಆದರೆ, ಅವರು ಸಂಪುಟ ಸೇರಬೇಕೆಂಬ ಅಪೇಕ್ಷೆ ಇದೆ ಎಂದು ಪರೋಕ್ಷವಾಗಿ ಈಶ್ವರಪ್ಪ ಸಂಪುಟ ಸೇರುವ ಬಗ್ಗೆ ಸುಳಿವು ನೀಡಿದರು.

ಕಾಂಗ್ರೆಸ್ ಸಮಾವೇಶಕ್ಕೆ ಬೆಲೆ ಎಲ್ಲಿದೆ?

 ನಿನ್ನೆಯ ಕಾಂಗ್ರೆಸ್ ನ ಎಸ್ಸಿ ಎಸ್ಟಿ ಸಮಾವೇಶ(SC ST convention) ಕುರಿತು ಪ್ರತಿಕ್ರಿಯಿಸಿದ ಯಡಿಯೂರಪ್ಪ(BS Yadiyurppa) ಅಚವರು, ಅವರ ಸಮಾವೇಶಕ್ಕೆ ಬೆಲೆ ಎಲ್ಲಿದೆ? ಎಂದು ಪ್ರಶ್ನಿಸಿದರು. ಬಿಜೆಪಿ(BJP) ಮಾಡುವ ಪ್ರತಿಯೊಂದು ಕೆಲಸಕ್ಕೂ ಟೀಕೆ ಮಾಡಿಕೊಂಡು ಬಂದಿರುವ ಕಾಂಗ್ರೆಸ್‌ನವರು ಎಸ್ಸಿ ಎಸ್ಟಿ ಬಗ್ಗೆ ಮಾಡಿರುವ ತೀರ್ಮಾನವನ್ನು ಮನಬಂದಂತೆ ತಿರುಚಿ ಒಬ್ಬ ರಾಷ್ಟ್ರೀಯ  ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ(mallikarjuna kharge)ಯವರು ಮಾತನಾಡುವುದು ಎಷ್ಟು ಗೌರವ ಬರುತ್ತೆ ಎಂಬುದು ಅರ್ಥವಾಗದ ವಿಷಯ. ಅವರಿಂದ ಈ ಮಾತುಗಳನ್ನು ನಿರೀಕ್ಷೆ ಮಾಡಿರಲಿಲ್ಲ. ವಾಸ್ತವ ಸಂಗತಿ ಇಟ್ಟುಕೊಂಡು ಮಾತನಾಡಲಿ ಎಂದರು.

ರಾಜ್ಯದಲ್ಲಿ 'ಸ್ಯಾಂಟ್ರೋ ರವಿ' ರಾಜಕೀಯ ಫೈಟ್: ಇದು ಡಿವೈಎಸ್‌ಪಿ ಪುತ್ರ ಪಿಂಪ್‌ ಆದ ಕತೆ

ಈ ಕಾಂಗ್ರೆಸ್‌ನವರಂತೂ ಮೀಸಲಾತಿ ಕಲ್ಪಿಸಲಿಲ್ಲ. ಇದೀಗ ನಾವು ಮಾಡಿದ್ದಾದರೂ ಸ್ವಾಗತ ಮಾಡಬೇಕಿತ್ತು.‌ ಅದನ್ನು ಬಿಟ್ಟು ಎಲ್ಲದಕ್ಕೂ ಟೀಕೆ ಟಿಪ್ಪಣಿ ಮಾಡುವುದು ಅವರಿಗೆ ಗೌರವ ತರುವಂತದ್ದಲ್ಲ.  ಮೀಸಲಾತಿ ಬಗ್ಗೆ ಯಾವುದೇ ಗೊಂದಲ ಇಲ್ಲ.‌ ನಮ್ಮ ನಿಲುವು ಸ್ಪಷ್ಟವಾಗಿದೆ. ಅದರಂತೆ ನಾವು ಮುಂದೆ ಹೋಗುತ್ತೆವೆ ಎಂದು ಮಾಜಿ ಸಿಎಂ ಯಡಿಯೂರಪ್ಪ.

click me!