
ಬೆಂಗಳೂರು (ಡಿ.6): ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇತ್ತೀಚೆಗೆ ಭಾರತಕ್ಕೆ ಬಂದಿದ್ದರು. ನಾನೇನೋ ಪುಟಿನ್‌ಗೆ ಇಲ್ಲೇ ಟಿಕೆಟ್ ಕೊಡ್ತಾರೆ ಎಂದುಕೊಂಡಿದ್ದೆ. ಮೋದಿ-ಪುಟಿನ್ ಫ್ರೆಂಡ್‌ಶಿಪ್ ಎಷ್ಟಿದೆ ಅನ್ನೋದನ್ನೇ ಎಲ್ಲರೂ ತೋರಿಸ್ತಾರೆ. ಆದರೆ, ಇದರಿಂದ ನಮಗೇನು ಲಾಭವಾಗಿದೆ ಅನ್ನೋದು ಯಾರಿಗೂ ಗೊತ್ತಿಲ್ಲ ಎಂದು ಕಾರ್ಮಿಕ ಕಲ್ಯಾಣ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಎಲೆಕ್ಟ್ರಿಕ್ ರಾಪಿಡ್ ಟ್ರಾನ್ಸಿಟ್ ಯೋಜನೆ ಆರಂಭಿಸುವ ಬಗ್ಗೆ ಸಿಎಂ ನೇತೃತ್ವದಲ್ಲಿ ಶನಿವಾರ ನಡೆದ ಸಭೆಯಲ್ಲಿ ಭಾಗವಹಿಸಿದ ಬಳಿಕ ಅವರು ಈ ಮಾತು ಹೇಳಿದ್ದಾರೆ.
ಸಿಎಂ ಗೃಹ ಕಛೇರಿ ಕೃಷ್ಣಾದಲ್ಲಿ ನಡೆದ ಸಭೆಯ ಬಳಿಕ ಅವರು ಮಾಧ್ಯಮಗಳೊಂದಿಗೆ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದರು. 'ಡಾಲರ್ ಬಗ್ಗೆ ಮೊದಲಿನಿಂದ ಹೇಳುತ್ತಿದ್ದೇನೆ. ಇದು ಮೋದಿ ವಿರುದ್ಧವಲ್ಲ. ವಾಸ್ತವ ಹೇಳುತ್ತಿದ್ದೇನೆ. ಡಾಲರ್ ಎದುರು ರೂಪಾಯಿ 90 ರೂಪಾಯಿ ದಾಟಿದೆ. 100 ಸ್ಮಾರ್ಟ್ ಸಿಟಿ ಮಾಡುತ್ತೇವೆ ಎಂದಿದ್ದರು. 33 ಸ್ಮಾರ್ಟ್ ಸಿಟಿ ಮಾತ್ರ ಆರಂಭ ಮಾಡಿದ್ದರು. ಅದರಲ್ಲಿ ಕೇಂದ್ರ ಸರ್ಕಾರದ ರಿಪೋರ್ಟ್ ಪ್ರಕಾರ 18% ಅಚೀವ್‌ಮೆಂಟ್ ಮಾತ್ರ ಆಗಿದೆ ಎಂದು ಹೇಳಿದರು.
ಸದನದಲ್ಲಿ ಉತ್ತರ ಕರ್ನಾಟಕದ ಬಗ್ಗೆ ಹೆಚ್ಚು ಚರ್ಚೆ ಆಗಬೇಕು ಎಂದು ಅಶೋಕ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು, ಖಾದರ್ ಸಾಹೇಬ್ರು 12-1 ಗಂಟೆವರೆಗೂ ಸದನ ನಡೆಸುತ್ತಾರೆ. ಅವಕಾಶ ಕೊಟ್ಟರೆ ಬಿಜೆಪಿ ಅವರು ವಿವಾದವನ್ನೇ ಮಾತಣಾಡುತ್ತಾರೆ. ಈಗ ಅವಕಾಶ ಇದೆಯಲ್ಲ ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಮಾಡಲಿ. ಇವರ ಅವಧಿಯಲ್ಲಿ ಎಷ್ಟು ಅವಧಿ ಸದನ ನಡೆಸಿದ್ದರು ಅನ್ನೋದನ್ನ ತಿಳಿದುಕೊಳ್ಳಲಿ ಎಂದಿದ್ದಾರೆ.
ಸಿಎಂ ಡಿಸಿಎಂ ವಾಚ್ ಬಗ್ಗೆ ಕೇಳಿ ಬರುತ್ತಿರುವ ಆರೋಪದ ಬಗ್ಗೆ ಮಾತನಾಡಿದ ಲಾಡ್, ಮೋದಿ ಸಾಹೇಬ್ರು ,9 ಸಾವಿರ ಕೋಟಿ ಫ್ಲೈಟ್ ಉಪಯೋಗಿಸ್ತಾರೆ. ಅವರ ಸೂಟ್ ,ಅವರ ಗ್ಲಾಸ್ ಬಗ್ಗೆ ಮಾತಾಡಬಹುದು. ರಫೇಲ್ ಬಗ್ಗೆ ಮಾತಾಡಲ್ಲ.ಅವರು ಅದನ್ನ ಯಾರಿಗೆ ಮಾರಾಟ ಮಾಡಿದ್ರು? ಕಳೆದ 10 ವರ್ಷದಲ್ಲಿ ಆದಾನಿ ಸಂಪತ್ತು ಹೆಚ್ಚಾಗಿದೆ. ಏರ್ಪೋರ್ಟ್ ಅದಾನಿ ಹಿಡಿತದಲ್ಲಿ ಇದೆ. ಎಷ್ಟು ಪಬ್ಲಿಕ್ ಸೆಕ್ಟರ್ ಕಂಪನಿ ಆರಂಭಿಸಿದ್ದಾರೆ? ಎಲ್‌ಐಸಿಯ 58 ಸಾವಿರ ಕೋಟಿ ಹಣ ಅದಾನಿ, ಅಂಬಾನಿಗೆ ಕೊಟ್ಟಿದ್ದಾರೆ. 556 ಕಂಪನಿ ಹಣ ಕೇಳಿದ್ರೆ,ಈ ಎರಡು ಕಂಪನಿಗೆ ಮಾತ್ರ ಕೊಟ್ಟಿದ್ದಾರೆ. ಈ ವಿಚಾರವನ್ನ ಇಟ್ಟುಕೊಂಡು ವೋಟ್ ಕೇಳಲ್ವಲ್ಲ ಎಂದು ಹೇಳಿದ್ದಾರೆ.
ಪುಲ್ವಾಮ ಆಯ್ತು,ಪೆಹಲ್ಗಾಮ್ ಆಯ್ತು. ದೆಹಲಿ ಬ್ಲಾಸ್ಟ್‌ನಲ್ಲಿ ನಾಲ್ಕು ಜನರ ಹೆಸರು ಬಂತು. ಬಿಹಾರ್ ಚುನಾವಣೆ ವೇಳೆ ನಾಲ್ಕು ಜನ ಮುಸ್ಲಿಮರ ಹೆಸರು ಹೇಳಿದರು. ಈಗ ಬೇರೆ ಅವರ ಹೆಸರು ಬಂತು. ಎಲ್ಲಾದರೂ ಚರ್ಚೆ ಆಗ್ತಿದ್ಯಾ? ಪಾರ್ಲಿಮೆಂಟ್ ಅಲ್ಲಿ ಇದರ ಬಗ್ಗೆ ಮಾತಾಡಲ್ಲ. ಬಿಜೆಪಿಯವರು ಇದರ ಬಗ್ಗೆ ಮಾತಾಡಲ್ಲ ಎಂದು ಹೇಳಿದರು.
ನಿರ್ಮಲಾ ಸೀತಾರಾಮನ್ ಮನಮೋಹನ್ ಸಿಂಗ್ ಅವರ ಹತ್ತಿರ ಬರೋಕು ಸಾಧ್ಯವಿಲ್ಲ. ಅವರು ಗ್ರೇಟೆಸ್ಟ್ ಎಕಾನಾಮಿಸ್ಟ್ ಅವರನ್ನ ಹೋಲಿಕೆ ಮಾಡಿಕೊಂಡು ನಿರ್ಮಲಾ ಸೀತಾರಾಮನ್ ಮಾತಾಡೊದು ಸರಿಯಲ್ಲ ಎಂದಿದ್ದಾರೆ.
ಬಿಆರ್‌ಟಿಎಸ್ 75%, 80%ರಸ್ತೆಯನ್ನ ತೆಗೆದುಕೊಳ್ಳುತ್ತಿತ್ತು. 36 ಸ್ಟೇಷನ್,33 ಸಿಗ್ನಲ್ ಇದೆ. ಬಿಆರ್‌ಟಿಎಸ್‌ನಿಂದ ಹಲವಾರು ಸಮಸ್ಯೆ ಆಗುತ್ತಿತ್ತು. ನಾನೇ ಸ್ವಿಜರ್ಲೆಂಡ್, ಫ್ರಾನ್ಸ್‌ಗೆ ಹೋಗಿ ಯಾವ ರೀತಿ ಹೊಸ ಸಿಸ್ಟಮ್ ತರಬಹುದೆಂದು ನೋಡಿದ್ದೆ. ಹೀಗಾಗಿ ಹೊಸ ವ್ಯವಸ್ಥೆ LRT ಸಿಸ್ಟಮ್ ಜಾರಿ ಮಾಡುವ ಬಗ್ಗೆ ಚರ್ಚೆ ಆಗಿದೆ. 240 ಜನರನ್ನ ಒಂದೇ ಸರಿ ಟ್ರಾನ್ಸ್‌ಪೋರ್ಟ್ ಮಾಡುವ ಸಾಮರ್ಥ್ಯ ಇದೆ. 12 ಕಿಮಿ ಎಲಿವೇಟೆಡ್ ಇರಲಿದ್ದು,ಸಬ್ ವೇ ಮಾಡುತ್ತೇವೆ. ಕೇವಲ 4-5 ಸಿಗ್ನಲ್ ಇರಬೇಕು ಅನ್ನೋದಿದೆ. ರಸ್ತೆಯ 10% ಜಾಗದಲ್ಲಿ ಇದನ್ನ ಮಾಡಬಹುದು. ಡಿಪಿಆರ್ ಸಿಎಂಗೆ ಸಲ್ಲಿಕೆ ಮಾಡಿದ್ದೇವೆ. ಪುನಃ ಕ್ಯಾಬಿನೆಟ್‌ಗೆ ಹೋಗಬೇಕಿದೆ ಪಿಪಿಪಿ ಮಾದರಿಯಲ್ಲಿ ಪ್ರಾಜೆಕ್ಟ್ ಮಾಡಲಿದ್ದೇವೆ ಎಂದರು.
ಪಕ್ಷಾತೀತವಾಗಿ ಎಲ್ಲಾಶಾಸಕರ ಸಹಕಾರ ಇದೆ. ಅವರೆಲ್ಲರ ಅಭಿಪ್ರಾಯ ತೆಗೆದುಕೊಂಡು ಮಾಡಿದ್ದೇವೆ. ಎಲ್ಲರ ಪ್ರಯತ್ನ ಈ ಯೋಜನೆಗೆ ಇದ. ಒಂದು ದಿನದಲ್ಲಿ 4ಲಕ್ಷ ಜನರನ್ನ ಟ್ರಾನ್ಸ್‌ಪೋರ್ಟ್ ಮಾಡುವ ವ್ಯವಸ್ಥೆ ಡಿಪಿಆರ್‌ನಲ್ಲಿದೆ. ಹುಬ್ಬಳ್ಳಿ ಧಾರವಾಡವನ್ನ ಮಾಡರ್ನ್‌ಸಿಟಿ ಮಾಡಲು ಈ ಯೋಜನೆ ಸಹಕಾರಿ. 6 ಸಾವಿರ ಕೋಟಿಯ ಪ್ರಾಜೆಕ್ಟ್ ಇದು ಎಂದಿದ್ದಾರೆ.