ಪಕ್ಷ ವಿರೋಧಿ ಚಟುವಟಿಕೆ: ಕೊನೆಗೂ ಬಿಜೆಪಿ ಮುಖಂಡ ಉಚ್ಚಾಟನೆ

By Kannadaprabha News  |  First Published Feb 5, 2021, 1:50 PM IST

ಶಾಸಕರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕೆಲ ಹಿಂಬಾಲಕರಿಂದ ಪೋಸ್ಟ್‌| ಉಂಟಾಗುವಂತೆ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದ್ದ ಪಕ್ಷ ವಿರೋಧಿ ಚಟುವಟಿಕೆ| ಜೆಡಿಎಸ್‌ ಸೇರುವ ಇಂಗಿತ ವ್ಯಕ್ತಪಡಿಸಿದ್ದ ಸಂತೋಷ ಹೊಕ್ರಾಣಿ| 


ಬಾಗಲಕೋಟೆ(ಫೆ.05): ಬಿಜೆಪಿ ಜಿಲ್ಲಾಧ್ಯಕ್ಷ ಎಸ್‌.ಟಿ.ಪಾಟೀಲರ ಸೂಚನೆಯ ಮೇರೆಗೆ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಸಂತೋಷ ಹೊಕ್ರಾಣಿ ಅವರನ್ನು ಬಿಜೆಪಿಯಿಂದ ಆರು ವರ್ಷಗಳ ಕಾಲ ಉಚ್ಚಾಟಿಸಲಾಗಿದೆ.

ಸಂತೋಷ ಹೊಕ್ರಾಣಿ ಕಳೆದ 4-5 ವರ್ಷಗಳಿಂದ ಬಿಜೆಪಿಯ ಯಾವುದೇ ಕಾರ್ಯಕ್ರಮಗಳಲ್ಲೂ ಸಕ್ರಿಯವಾಗಿ ಪಾಲ್ಗೊಂಡಿಲ್ಲ. ಪಕ್ಷದಲ್ಲಿ ಯಾವುದೇ ಪದಾಧಿ​ಕಾರಿಯಾಗಿ ಜವಾಬ್ದಾರಿಯೂ ಇಲ್ಲ. ಅಲ್ಲದೆ ಪಕ್ಷದ ಹಿರಿಯರ ಮತ್ತು ವ್ಯವಸ್ಥೆಯ ವಿರುದ್ಧ ಗುಂಪು ಕಟ್ಟಿಕೊಂಡು ಬಾಗಲಕೋಟೆ ಶಾಸಕರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕೆಲ ಹಿಂಬಾಲಕರಿಂದ ಪೋಸ್ಟ್‌ ಮಾಡಿಸುತ್ತಿದ್ದು, ಕಾರ್ಯಕರ್ತರಲ್ಲಿ ಗೊಂದಲ ಉಂಟಾಗುವಂತೆ ಮಾಡುತ್ತಿರುವುದರಿಂದ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. 

Tap to resize

Latest Videos

ಅಲ್ಪಸಂಖ್ಯಾತರಿಗೆ ಕಾಂಗ್ರೆಸ್‌ ಅನ್ಯಾಯ: 'ಇಬ್ರಾಹಿಂ ಬಾಯಲ್ಲಿ ಲಡ್ಡು ಇಟ್ಟುಕೊಂಡಿದ್ರಾ?'

ಜ.31ರಂದು ನಡೆದ ಜಾತ್ಯತೀತ ಜನತಾದಳದ ರಾಜ್ಯಾಧ್ಯಕ್ಷ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು ಬಾಗಲಕೋಟೆಗೆ ಜೆಡಿಎಸ್‌ ಪಕ್ಷ ಸಂಘಟನೆಯ ಸಮಾವೇಶಕ್ಕೆ ಬಂದ ಸಂದರ್ಭದಲ್ಲಿ ಹೊಕ್ರಾಣಿ ಅವರ ಮನೆಗೆ ಭೇಟಿ ನೀಡಿದ್ದು, ಆ ಸಮಯದಲ್ಲಿ ಅವರು ಜೆಡಿಎಸ್‌ ಸೇರುವ ಇಂಗಿತ ವ್ಯಕ್ತಪಡಿಸಿ ಪಕ್ಷದಲ್ಲಿ ಮುಂದುವರಿದರೆ ಕಾರ್ಯಕರ್ತರನ್ನು ದಾರಿ ತಪ್ಪಿಸಿ ಗೊಂದಲವುಂಟು ಮಾಡುವ ಸಾಧ್ಯತೆ ಇರುವುದರಿಂದ ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟಿಸಲಾಗಿದೆ ಎಂದು ಬಿಜೆಪಿ ನಗರ ಅಧ್ಯಕ್ಷ ಬಸವರಾಜ ಅವರಾದಿ, ಮಾಧ್ಯಮ ಪ್ರಮುಖ ಸಂಗಮೇಶ ಹಿತ್ತಲಮನಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

click me!