ಆತ ಮದುವೆಯಾದವ , ಆಕೆ ವಿದ್ಯಾರ್ಥಿನಿ : ಇಬ್ಬರ ಲವ್ ಹೋಟೆಲ್‌ ರೂಮಲ್ಲಿ ಸಾವಲ್ಲಿ ಕೊನೆ

Kannadaprabha News   | Asianet News
Published : Feb 05, 2021, 01:21 PM ISTUpdated : Feb 05, 2021, 02:01 PM IST
ಆತ ಮದುವೆಯಾದವ , ಆಕೆ ವಿದ್ಯಾರ್ಥಿನಿ : ಇಬ್ಬರ ಲವ್  ಹೋಟೆಲ್‌ ರೂಮಲ್ಲಿ ಸಾವಲ್ಲಿ ಕೊನೆ

ಸಾರಾಂಶ

ಆತ ಮದುವೆಯಾಗಿ ಮಕ್ಕಳಿರುವ ಅಂಕಲ್, ಆಕೆಯಿನ್ನೂ ವಿದ್ಯಾರ್ಥಿನಿ. ಇಬ್ಬರ ನಡುವೆ ನಡೆದಿತ್ತು ಲವ್ ಆದ್ರೆ ಕೊನೆಯಾಗಿದ್ದು ಮಾತ್ರ ಕೊಲೆಯಲ್ಲಿ 

ಮೈಸೂರು (ಫೆ.05): ಪ್ರಿಯತಮೆಯ ಕತ್ತು ಬಿಗಿದು ಹತ್ಯೆ ಮಾಡಿದ ವ್ಯಕ್ತಿಯೊಬ್ಬ ತಾನು ಸಹ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಹೆಬ್ಬಾಳ್ ಕೈಗಾರಿಕಾ ಪ್ರದೇಶದಲ್ಲಿರುವ ಹೊಟೇಲ್‌ವೊಂದರದಲ್ಲಿ ಬುಧವಾರ ನಡೆದಿದೆ.

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಹೊಂಬಾಳೆಕೊಪ್ಪಲು ನಿವಾಸಿ ಎಚ್. ಎಂ. ಲೋಕೇಶ್(39) ಎಂಬವರೇ ಪ್ರೇಯಸಿ ನಾಗಮಂಗಲದ ಅಮೂಲ್ಯ ಅವರನ್ನು ಹತ್ಯೆ ಮಾಡಿ, ತಾನು ಸಹ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡವರು. 

ಬೇರೆ ಹೆಣ್ಣುಗಳು ಬೇಕು : ಹೆಂಡ್ತಿ ಮುಖ ಕಂಡರಾಗದ ಸಾಫ್ಟ್‌ವೇರ್ ಗಂಡನಿಂದ ಬೇಸತ್ತು ಸೂಸೈಡ್ .

ಈಗಾಗಲೇ ಮದುವೆಯಾಗಿರುವ ಲೋಕೇಶ್ ಅವರಿಗೆ ಪುತ್ರಿ ಸಹ ಇದ್ದಾರೆ. ಪ್ರಥಮ ದರ್ಜೆ ಗುತ್ತಿಗೆದಾರರಾದ ಲೋಕೇಶ್ ಮೈಸೂರಿನಲ್ಲಿ ಎಂಎಸ್ಸಿ ಓದುತ್ತಿದ್ದ ಅಮೂಲ್ಯ ಎಂಬ ವರನ್ನು ಪ್ರೀತಿಸುತ್ತಿದ್ದ. ಇತ್ತೀಚೇಗೆ ಈಕೆ ಮದುವೆಯಾಗುವಂತೆ ಲೋಕೇಶ್ ನನ್ನು ಒತ್ತಾಯಿಸಿದ್ದಳು. 

ಈ ಹಿನ್ನೆಲೆಯಲ್ಲಿ ಬುಧವಾರ ಹೊಟೇಲ್‌ನಲ್ಲಿ ರೂಮ್ ಬುಕ್ ಮಾಡಿ ಅಲ್ಲಿಗೆ ಅಮೂಲ್ಯಲನ್ನು ಕರೆ ತಂದ ಲೋಕೇಶ್, ಆ ನಂತರ ಆಕೆಯ ಕತ್ತನ್ನು ಹಗ್ಗದಿಂದ ಬಿಗಿದು ಹತ್ಯೆ ಮಾಡಿ. ತನ್ನ ಸ್ನೇಹಿತನೊಬ್ಬನಿಗೆ ಫೋನ್ ಮಾಡಿ ಘಟನೆ ಯನ್ನು ವಿವರಿಸಿ, ಯುವತಿಯ ದೇಹವನ್ನು ಇಲ್ಲಿಂದ ತೆಗೆದುಕೊಂಡು ಹೋಗಿ ಸುಟ್ಟು ಹಾಕಬೇಕು. ಇದಕ್ಕೆ ನೆರವಾಗುವಂತೆ ಕೇಳಿದ್ದಾನೆ. 

ಸ್ನೇಹಿತ ಇದು ಕಷ್ಟದ ಕೆಲಸ ಎಂದು ಹೇಳಿ ಹೋಟೆಲ್ ವಿಳಾಸ ತಿಳಿದುಕೊಂಡು. ಮತ್ತೊಬ್ಬ ಸ್ನೇಹಿತನ ಜತೆ ಹೋಟೆಲ್‌ಗೆ ಅವರ ರೂಮ್ ಬಾಗಿಲು ತೆಗೆಸಿದಾಗ ಪ್ರೇಯಸಿಯನ್ನು ಹತ್ಯೆ ಮಾಡಿದ ಲೋಕೇಶ್ ಸಹ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಹೆಬ್ಬಾಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
click me!

Recommended Stories

ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ: ಸಂಸದ ಜಗದೀಶ್ ಶೆಟ್ಟರ್
ಗೆಳೆಯರ ಜೊತೆ ಟ್ರಿಪ್ ಹೋಗಿದ್ದ ಬೆಂಗಳೂರು ನಿವಾಸಿ ಗೋವಾ ನೈಟ್ ಕ್ಲಬ್ ದುರಂತದಲ್ಲಿ ಮೃತ