ಬಸವನಬಾಗೇವಾಡಿ: ಪ್ರವಚನದಲ್ಲಿಯೇ ಮನಸು ಒಂದುಗೂಡಿಸುತ್ತಿದ್ದ ಸಿದ್ದೇಶ್ವರ ಶ್ರೀ

By Kannadaprabha News  |  First Published Jan 5, 2023, 10:30 PM IST

2015ರ ನವೆಂಬರ್‌ ತಿಂಗಳ ಕಾಲ ಜರುಗಿದ ಶ್ರೀಗಳ ಪ್ರವಚನ, ಪ್ರವಚನ ಆರಂಭವಾಗುವ ಮುನ್ನವೇ ನಸುಕಿನ 4 ಗಂಟೆಯಿಂದಲೇ ಜನರು ಪ್ರವಚನಕ್ಕೆ, ಪಟ್ಟಣ ಸೇರಿದಂತೆ ವಿವಿಧೆಡೆಗಳಿಂದ ಅಪಾರ ಸಂಖ್ಯೆಯ ಜನರ ಆಗಮನ. 


ಬಸವರಾಜ ನಂದಿಹಾಳ

ಬಸವನಬಾಗೇವಾಡಿ(ಜ.05):  ವಿಶ್ವಗುರು ಬಸವೇಶ್ವರರು ಜನಿಸಿದ ಬಸವನಬಾಗೇವಾಡಿ ಪುಣ್ಯನೆಲದಲ್ಲಿ ಪ್ರಥಮ ಬಾರಿಗೆ 2015ರ ನವೆಂಬರ್‌ ಒಂದು ತಿಂಗಳ ಕಾಲ ಸಿದ್ದೇಶ್ವರ ಶ್ರೀಗಳು ಪ್ರವಚನ ನೀಡಿದ್ದರು. ಪಟ್ಟಣದ ಬಿಎಲ್‌ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಆವರಣದಲ್ಲಿ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಪ್ರವಚನ ಆರಂಭವಾಗುತ್ತಿತ್ತು. ಪ್ರವಚನ ಆರಂಭವಾಗುವ ಮುನ್ನವೇ ನಸುಕಿನ 4 ಗಂಟೆಯಿಂದಲೇ ಜನರು ಪ್ರವಚನ ನಡೆಯುವ ಸ್ಥಳಕ್ಕೆ ಹೆಜ್ಜೆ ಹಾಕುತ್ತಿದ್ದರು. ಪಟ್ಟಣ ಸೇರಿದಂತೆ ವಿವಿಧೆಡೆಗಳಿಂದ ಅಪಾರ ಸಂಖ್ಯೆಯ ಜನರು ಪ್ರವಚನ ಕೇಳಲು ಆಗಮಿಸುತ್ತಿದ್ದರು.

Tap to resize

Latest Videos

ಪ್ರವಚನ ಮುಕ್ತಾಯವಾದ ನಂತರ ಶ್ರೀಗಳು ವಾಸ್ತವ್ಯ ಮಾಡಿದ್ದ ಇವಣಗಿ ರಸ್ತೆಯಲ್ಲಿರುವ ಮಡಿವಾಳೇಶ್ವರ ಶಾಲೆಯಲ್ಲಿ ನಿತ್ಯವೂ ದಾಸೋಹ ಸೇವೆ ನಡೆಯುತ್ತಿತ್ತು. ಪ್ರತಿನಿತ್ಯ ನಡೆಯುತ್ತಿದ್ದ ದಾಸೋಹ 12ನೇ ಶತಮಾನದಲ್ಲಿ ಬಸವಕಲ್ಯಾಣದಲ್ಲಿ ನಡೆಯುತ್ತಿದ್ದ ದಾಸೋಹವನ್ನು ನೆನಪಿಸುವಂತೆ ಇರುತ್ತಿರುವುದು ಸ್ಮರಣೀಯವಾಗಿದೆ. ಶ್ರೀಗಳು ಬಸವ ನೆಲದಲ್ಲಿ ಪ್ರವಚನ ನಡೆಯುತ್ತಿರುವ ಸಂದರ್ಭದಲ್ಲಿ ನಡೆದ ದಾಸೋಹವನ್ನು ವಿವಿಧೆಡೆ ಪ್ರಸ್ತಾಪ ಮಾಡುತ್ತಿರುವದನ್ನು ನೆನಪಿಸಿಕೊಳ್ಳಬಹುದು.

ಸಿದ್ದೇಶ್ವರ ಸ್ವಾಮೀಜಿಗಳ ಚಿತಾಭಸ್ಮ ಭಕ್ತರಿಗೆ ಕೊಡುವುದಿಲ್ಲ: ಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ಸ್ಪಷ್ಟನೆ

ಪ್ರವಚನ ಆರಂಭವಾಗುವ ಮುನ್ನ ಆಗಿನ ತಹಸೀಲ್ದಾರ್‌ರಾಗಿದ್ದ ಎಂ.ಎನ್‌.ಚೋರಗಸ್ತಿ, ಪುರಸಭೆ ಮುಖ್ಯಾಧಿಕಾರಿ ಬಿ.ಎ.ಸೌದಾಗರ ಅವರು ಶಾಸಕ ಶಿವಾನಂದ ಪಾಟೀಲ ಮಾರ್ಗದರ್ಶನದಲ್ಲಿ ಮುರ್ತುವರ್ಜಿ ವಹಿಸಿ ಇಡೀ ಪಟ್ಟಣದಲ್ಲಿ ಸ್ವಚ್ಛತಾ ಕಾರ್ಯಕೈಗೊಂಡಿದ್ದರು. ಶ್ರೀಗಳ ಪ್ರವಚನ ನಡೆಯುವ ಮಾರ್ಗದಲ್ಲಿ ಸದಾ ಸ್ವಚ್ಛತೆ ಇರುವಂತೆ ನೋಡಿಕೊಂಡಿದ್ದರು. ವಿಜಯಪುರ ರಸ್ತೆಯಲ್ಲಿರುವ ಮಹಿಳೆಯರ ಬಯಲು ಶೌಚಾಲಯ ಮುಂಭಾಗ ತಗಡು ಬಡಿದು ಮರೆ ಮಾಡಲಾಗಿತ್ತು. ಇದೀಗ ಇದೇ ಸ್ಥಳದಲ್ಲಿ ಭವ್ಯ ಬಸವ ಭವನ ತಲೆ ಎತ್ತಿ ನಿಂತಿದೆ. ಬಸವ ಭವನವನ್ನು ಸಿದ್ದೇಶ್ವರ ಶ್ರೀಗಳು ವೀಕ್ಷಣೆ ಮಾಡಿ ಶ್ಲಾಘಿಸಿದ್ದರು.

ಪ್ರತಿನಿತ್ಯ ನಡೆಯುತ್ತಿದ್ದ ದಾಸೋಹದಲ್ಲಿ ಮಾಡುತ್ತಿದ್ದ ತಿಂಡಿಗಳನ್ನು ಸವಿದ ಜನರು ಇಂದಿಗೂ ಮರೆತಿಲ್ಲ. ಒಂದು ತಿಂಗಳ ಕಾಲ ನಡೆದ ಪ್ರವಚನದ ಸಾರವನ್ನು ಓದುಗರಿಗೆ ಕನ್ನಡಪ್ರಭ ನೀಡಿದ್ದು ಸ್ಮರಣೀಯವಾಗಿದೆ. ಬಸವ ನೆಲದಲ್ಲಿ ಸಿದ್ದೇಶ್ವರ ಶ್ರೀಗಳು ಪ್ರವಚನ ಮಾಡಿಲ್ಲ. ಇವರ ಪ್ರವಚನ ಇಲ್ಲಿ ನಡೆಯವಂತಾಗಬೇಕೆಂಬ ಆಶಯದೊಂದಿಗೆ ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ನನ್ನ ಸ್ನೇಹಿತ ಬಸವರಾಜ ಗಚ್ಚಿನವರೊಂದಿಗೆ ಕಲಕೇರಿಯಲ್ಲಿ ನಡೆಯುತ್ತಿದ್ದ ಶ್ರೀಗಳ ಪ್ರವಚನಕ್ಕೆ ಹೋಗಿ ಅಲ್ಲಿನ ಶ್ರೀಗಳೊಬ್ಬರಿಗೆ ಇದರ ಬಗ್ಗೆ ಅರಿಕೆ ಮಾಡಿದಾಗ ನಿಮ್ಮ ಭಾಗದ ಅನೇಕ ಸಂಘಟನೆಗಳ, ವಿವಿಧ ಗಣ್ಯರ, ವಿವಿಧ ಇಲಾಖೆಗಳಿಂದ ಪ್ರವಚನ ಮಾಡುವಂತೆ ಮನವಿ ಪತ್ರ ಬರಬೇಕು. ಮನವಿ ಪತ್ರಗಳೊಂದಿಗೆ ಶಹಾಪುರ ನಡೆಯುತ್ತಿದ್ದ ಪ್ರವಚನ ಕಾರ್ಯಕ್ರಮಕ್ಕೆ ಇಲ್ಲಿನ ಹಿರಿಯರಾದ ಸಂಗಪ್ಪ ಅಡಗಿಮನಿ, ಸಿದ್ದಣ್ಣ ಕಲ್ಲೂರ, ಈರಣ್ಣ ಪಟ್ಟಣಶೆಟ್ಟಿ, ಸಂಗನಗೌಡ ಚಿಕ್ಕೊಂಡ,ಡಿವೈಎಸ್ಪಿ, ತಹಸೀಲ್ದಾರ್‌ ಸೇರಿದಂತೆ ಕೆಲ ಹಿರಿಯರೊಂದಿಗೆ ತೆರಳಿ ಶ್ರೀಗಳಿಗೆ ಪ್ರವಚನ ಮಾಡುವಂತೆ ಮನವಿ ಮಾಡಿದ್ದೇವೆ. ಆದರೂ ದಿನಾಂಕ ಕೊಡಲಿಲ್ಲ. ನಂತರ ನೂರಾರು ಹಿರಿಯೊಂದಿಗೆ ಕೊಲ್ಹಾಪುರಕ್ಕೆ ತೆರಳಿ ದಿನಾಂಕ ನಿಗದಿಪಡಿಸುವಂತೆ ಪದೇ ಪದೇ ಮನವಿ ಮಾಡಿಕೊಳ್ಳಲಾಗಿತ್ತು. ನಂತರ ಹಿರಿಯರೊಂದಿಗೆ ವಿಜಯಪುರಕ್ಕೆ ತೆರಳಿ ಪ್ರವಚನ ಮಾಡುವಂತೆ ಮನವಿ ಮಾಡಿದ ನಂತರ ದಿನಾಂಕ ಕೊಡುವ ಮೂಲಕ ಬಸವ ನೆಲದಲ್ಲಿ ಪ್ರವಚನ ನಡೆದಿರುವುದು ಐತಿಹಾಸಿಕವಾಗಿದೆ ಎಂದು ಶಿವಾನಂದ ತೊಳನೂರ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಒಂದು ತಿಂಗಳ ಕಾಲ ಜರುಗಿದ ಸಿದ್ದೇಶ್ವರಶ್ರೀಗಳ ಪ್ರವಚನ ಕಾರ್ಯಕ್ರಮದಲ್ಲಿ ಸೇವೆ ಮಾಡುವ ಸೌಭಾಗ್ಯ ನಮಗೆ ಸಿಕ್ಕಿರುವುದು ನನ್ನ ಭಾಗ್ಯ ಅಂತ ಹಿರಿಯರು ಸಂಗಪ್ಪ ವಾಡೇದ ತಿಳಿಸಿದ್ದಾರೆ. 

click me!