ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ದಿ ನಿಗಮ ನಿಯಮಿತ (ಕೆಎಸ್‌ಎಚ್‌ಡಿಸಿಎಲ್) ಅಡಿಯಲ್ಲಿ ನಿರ್ವಹಿಸುವ ಕಾವೇರಿ ಎಂಪೋರಿಯಂನಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಗಂಧದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ರಾಜಸ್ಥಾನದಿಂದ ಖಾಸಗಿ ವ್ಯಕ್ತಿಗಳಿಂದ ಅಕ್ರಮವಾಗಿ ಗಂಧದ ತುಂಡಗಳು ದಾಸ್ತಾನು ಮಾಡಲಾಗುತ್ತಿತ್ತು ಎನ್ನುವ ಆರೋಪಗಳಿವೆ.
ಬೆಂಗಳೂರು (ಡಿ.18): ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ದಿ ನಿಗಮ ನಿಯಮಿತ (ಕೆಎಸ್‌ಎಚ್‌ಡಿಸಿಎಲ್) ಅಡಿಯಲ್ಲಿ ನಿರ್ವಹಿಸುವ ಕಾವೇರಿ ಎಂಪೋರಿಯಂನಲ್ಲಿಯೇ ಸ್ಮಗ್ಲಿಂಗ್ ಆಗಿರುವ ಗೂಡ್ಸ್‌ಗಳ ಮಾರಾಟ ನಡೆಯುತ್ತಿದೆ ಎನ್ನುವ ಅನುಮಾನ ವ್ಯಕ್ತವಾಗಿದೆ. ಇದಕ್ಕೆ ಕಾರಣ, ಎಂಜಿ ರೋಡ್‌ನ ಕಾವೇರಿ ಎಂಪೋರಿಯಂ ಮೇಲೆ ಅರಣ್ಯ ಇಲಾಖೆಯ ಅಧಿಕಾರಿಗಳು ನಡೆಸಿರುವ ದಾಳಿ. ಕಾವೇರಿ ಎಂಪೋರಿಯಂನಲ್ಲಿ ಕಳಪೆ ಶ್ರೀಗಂಧ ಮಾರಾಟ ಮಾಡುತ್ತಿದ್ದ ಕಾರಣಕ್ಕೆ ಅಧಿಕಾರಿಗಳು ದಾಳಿ ನಡೆಸಿದ್ದಾರ. ಶ್ರೀನಿವಾಸ ಎಂಟರ್ ಪ್ರೈಸಸ್ ಅಜಯ್ ಸಪ್ಲೇ ಗಂಧದ ತುಂಡುಗಳನ್ನು ಸಪ್ಲೈ ಮಾಡುತ್ತಿದ್ದ. ಅರಣ್ಯಾಧಿಕಾರಿಗಳ ಟೀಮ್ ನಿಂದ ಸದ್ಯ ದಾಳಿ ನಡೆಸಲಾಗಿತ್ತು. ಎಲ್ಲಾ ವಸ್ತುಗಳ ಪರಿಶೀಲಿಸಿ ಸೀಲ್ ಮಾಡಲಾಗಿದೆ.
ಇದರ ಬೆನ್ನಲ್ಲಿಯೇ ಸರ್ಕಾರಿ ಅಂಗ ಸಂಸ್ಥೆ ಕಾವೇರಿ ಎಂಪೋರಿಯಂ ನಲ್ಲಿ ಸ್ಮಗ್ಲಿಂಗ್ ನಡೆಯುತ್ತಿತ್ತಾ ಎನ್ನುವ ಅನುಮಾನ ವ್ಯಕ್ತವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳ ಪರಿಶೀಲನೆ ವೇಳೆ ಇದೂ ದೃಢವಾಗಿದೆ ಎಂದು ವರದಿಯಾಗಿದೆ.
undefined
ರಾಜಸ್ಥಾನದಿಂದ ಖಾಸಗಿ ವ್ಯಕ್ತಿಗಳಿಂದ ಅಕ್ರಮವಾಗಿ ಗಂಧದ ತುಂಡಗಳು ದಾಸ್ತಾನು ಮಾಡಲಾಗುತ್ತಿತ್ತು ಎನ್ನುವ ಆರೋಪಗಳಿವೆ. ರೇಡ್ ವೇಳೆ ಪರವಾನಗಿ ಇಲ್ಲದ ವ್ಯಕ್ತಿಯಿಂದ ಅಕ್ರಮವಾಗಿ ಗಂಧದ ತುಂಡು ತರಿಸಿಕೊಂಡಿರೋ ಆರೋಪವನ್ನು ಹೊರಿಸಲಾಗಿದೆ. ಕೆ. ಆರ್ ಪುರಂ ವಲಯ ಅರಣ್ಯಧಿಕಾರಿ ರಘು ವಿ ಮತ್ತು ತಂಡದಿಂದ ಎಂಪೋರಿಯಂ ಮೇಲೆ ದಾಳಿ ನಡೆದಿದೆ.
ವೃದ್ಧನ ಮನವಿ ಸ್ವೀಕಾರಕ್ಕೆ 1 ಗಂಟೆ ಕಾಯಿಸಿದ ಸಿಬ್ಬಂದಿ; ಅಧಿಕಾರಿಗಳಿಗೆ 20 ನಿಮಿಷ ನಿಂತು ಕೆಲಸ ಮಾಡುವ ಶಿಕ್ಷೆ!
ಅಕ್ರಮವಾಗಿ ಸಫ್ಲೈ ಮಾಡುತ್ತಿದ್ದ ವ್ಯಕ್ತಿಯನ್ನ ಕರೆತಂದು ಎಂಪೋರಿಯಂಅನ್ನು ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಎಂಪೋರಿಯಂನಲ್ಲೂ ಅಕ್ರಮವಾಗಿ ದಾಸ್ತನು ಇದ್ದದ್ದು ಪತ್ತೆಯಾಗಿದೆ. ದಾಳಿ ವೇಳೆ ಆಕ್ರಮ ಗಂಧದ ತುಂಡು ದಾಸ್ತಾನು ಇರುವುದು ಗೊತ್ತಾಗಿದೆ. ಎಂಪೋರಿಯಂ ನಿಂದ ಸುಮಾರು 55 ಕೆ.ಜಿ ತೂಕದ ಗಂಧ ವಶಕ್ಕೆ ಪಡೆಯಲಾಗಿದೆ. ರಾಜಸ್ಥಾನದಿಂದ ಅಕ್ರಮವಾಗಿ ಗಂಧದ ತುಂಡುಗಳು ತಂದಿದ್ದ ವ್ಯಕ್ತಿಯನ್ನು ಅರಣ್ಯಧಿಕಾರಿಗಳು ವಶಕ್ಕೆ ಪಡೆದಿದ್ದಾರ.ಸೋಮವಾರ ಮಧ್ಯಾಹ್ನ ಎರಡು ಗಂಟೆಯಿಂದ ದಾಳಿ ನಡೆದಿದೆ.
'ಅಮೆರಿಕದ 4692 ಕೋಟಿ ಬೇಡ..' ಸ್ವಂತ ಹಣದಲ್ಲೇ Colombo Port Project ಮುಗಿಸುವ ನಿರ್ಧಾರಕ್ಕೆ ಬಂದ ಅದಾನಿ!