ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿಗೆ ಮೆಟ್ರೋ ರೈಲು ಸಂಚಾರ ಇನ್ನಷ್ಟು ತಡ, ಟೆಕ್ಕಿಗಳಿಗೆ ಭಾರೀ ನಿರಾಸೆ!

By Kannadaprabha News  |  First Published Dec 18, 2024, 7:59 AM IST

ಜನವರಿಗೆ ಎರಡನೇ ರೈಲಿನ ಆರು ಬೋಗಿಗಳು ಪ್ರತ್ಯೇಕವಾಗಿ ರಸ್ತೆ ಮಾರ್ಗದ ಮೂಲಕ ಬೆಂಗಳೂರಿಗೆ ಬರಲಿದ್ದು, ಇಲ್ಲಿನ ಹೆಬ್ಬಗೋಡಿ ಡಿಪೋದಲ್ಲಿ ಅವುಗಳನ್ನು ಜೋಡಿಸಲಾಗುವುದು. ಇನ್ನು, ಮತ್ತೊಂದು ರೈಲು ಇನ್ನೂ ನಿರ್ಮಾಣ ಹಂತದಲ್ಲಿದ್ದು, ಮುಗಿಯಲು ಕೆಲ ಸಮಯ ಹಿಡಿಯಲಿದೆ. 
 


ಬೆಂಗಳೂರು(ಡಿ.18):  ಅಗತ್ಯದಷ್ಟು ರೈಲುಗಳು ಲಭ್ಯವಿಲ್ಲದ ಕಾರಣ ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ ನಮ್ಮ ಮೆಟ್ರೋ ಹಳದಿ ಮಾರ್ಗ ಆರಂಭ ಪ್ರಕ್ರಿಯೆಯು (19.156. ಮೀ.) ಮಾರ್ಚ್ ಬಳಿಕ ಅಂದರೆ 2025ರ ಎರಡನೇ ತ್ರೈಮಾಸಿಕಕ್ಕೆ ಮುಂದೂಡಲ್ಪಟ್ಟಿದ್ದು. ಈ ಭಾಗದ ಟೆಕ್ಕಿಗಳು, ಜನತೆಗೆ ನಿರಾಸೆಯಾಗಿದೆ. 

ಈ ಮಾರ್ಗದ ಕಾಮಗಾರಿ ಮುಗಿದು ವರ್ಷ ಕಳೆದಿದ್ದು, ಹತ್ತು ತಿಂಗಳ ಹಿಂದೆಯೇ ಚಾಲಕ ರಹಿತವಾಗಿ ಓಡಿಸಬಹುದಾದ ರೈಲು ಚೀನಾದಿಂದ ಬಂದು ತಲುಪಿದೆ. ಆದರೆ, ಕೋಲ್ಕತ್ತಾದಿಂದ ಬರಬೇಕಾದ ಅಗತ್ಯ ರೈಲುಬೋಗಿ ಸೆಟ್ ಇನ್ನೂ ಬಂದಿಲ್ಲ, ಹೀಗಾಗಿ ಪ್ರಯಾಣಿಕರ ಸೇವೆ ಮುಂದಕ್ಕೆ ಹೋಗುತ್ತಲೇ ಇದೆ. 

Tap to resize

Latest Videos

undefined

ನಮ್ಮ ಮೆಟ್ರೋ 2ನೇ ಹಂತದ ಯೋಜನೆಗಾಗಿ ಬಿಎಂಆರ್‌ಸಿಎಲ್ 3000 ಕೋಟಿ ಸಾಲದ ಒಪ್ಪಂದ

ಕೋಲ್ಕತ್ತಾದ ತೀತಾಘರ್ ರೈಲ್ ಸಿಸ್ಟಮ್ಸ್ ಲಿಮಿಟೆಡ್‌ನಿಂದ ಬರಬೇಕಾದ ರೈಲು ಡಿಸೆಂಬರ್‌ಗೆ ಅಲ್ಲಿಂದ ಹೊರಟು ಜನವರಿ ಅಂತ್ಯಕ್ಕೆ ಬೆಂಗಳೂರು ತಲುಪುವ ಸಾಧ್ಯತೆಯಿದೆ. ಇದು ಆರ್.ವಿ.ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ಓಡಾಡಲಿರುವ ಎರಡನೇ ರೈಲಾಗಲಿದೆ. ಪೂರ್ಣ ವಾಣಿಜ್ಯ ಸಂಚಾರಕ್ಕೆ ಇನ್ನೊಂದು ರೈಲು ಅಗತ್ಯವಿದ್ದು, ಅದು ಬಂದ ಮೇಲಷ್ಟೇ ವಾಣಿಜ್ಯ ಸಂಚಾರದ ರೂಪುರೇಷನ್ನು ಬಿಎಂಆರ್‌ಸಿಎಲ್ ಸಿದ್ಧಪಡಿಸಿಕೊಳ್ಳಬೇಕಿದೆ. 

ಜನವರಿಗೆ ಎರಡನೇ ರೈಲಿನ ಆರು ಬೋಗಿಗಳು ಪ್ರತ್ಯೇಕವಾಗಿ ರಸ್ತೆ ಮಾರ್ಗದ ಮೂಲಕ ಬೆಂಗಳೂರಿಗೆ ಬರಲಿದ್ದು, ಇಲ್ಲಿನ ಹೆಬ್ಬಗೋಡಿ ಡಿಪೋದಲ್ಲಿ ಅವುಗಳನ್ನು ಜೋಡಿಸಲಾಗುವುದು. ಇನ್ನು, ಮತ್ತೊಂದು ರೈಲು ಇನ್ನೂ ನಿರ್ಮಾಣ ಹಂತದಲ್ಲಿದ್ದು, ಮುಗಿಯಲು ಕೆಲ ಸಮಯ ಹಿಡಿಯಲಿದೆ ಎಂದು ಮೂಲಗಳು ತಿಳಿಸಿವೆ. 

ದರ ಪರಿಷ್ಕರಣೆಗೆ ರಚಿಸಿದ ಸಮಿತಿ ಶೀಘ್ರ ವರದಿ ನೀಡಲಿದೆ. ಯಾವ ರೀತಿ ದರ ನಿಗದಿಯಾಗಲಿದೆ ಎಂಬುದು ವರದಿಯನ್ನು ಆಧರಿಸಿದೆ ಎಂದು ಬಿಎಂಆರ್ ಸಿಎಲ್ ಮಹೇಶ್ವರ್ ರಾವ್ ತಿಳಿಸಿದ್ದಾರೆ. 

10-15% ದರ ಹೆಚ್ಚಳ? 

ಸದ್ಯ 76.95 ಕಿ.ಮೀ. ಉದ್ದದ ನಮ್ಮ ಮೆಟ್ರೋದಲ್ಲಿ ಕನಿಷ್ಠ ದರ ಈ 10 ಹಾಗೂ ಗರಿಷ್ಠ ದರ 60 ಇದೆ-, ಕಾರ್ಡ್ ಮೇಲೆ ಶೇ.5ರಷ್ಟು ರಿಯಾಯಿತಿ ಇದೆ. ಪರಿಷ್ಕೃತ ದರ ಶೇ.10 - 15 ರಷ್ಟಾಗಬಹುದು ಎನ್ನಲಾಗಿದೆ.

ಚಾಲಕ ರಹಿತ ರೈಲಿಗೆ 36 ಬಗೆಯ ತಪಾಸಣೆಗಳು ಪೂರ್ಣ 

ಹಳದಿ ಮಾರ್ಗಕ್ಕಾಗಿ ಕಳೆದ ಫೆಬ್ರವರಿಯಲ್ಲಿ ಚೀನಾ ಶಾಂಫೈನಿಂದ ಚಾಲಕ ರಹಿತವಾಗಿ ಓಡಿಸಬಹುದಾದ ರೈಲುವೊಂದು ಚೆನ್ನೈ ಮೂಲಕ ಹೆಬ್ಬಗೋಡಿಗೆ ಕಳೆದ ಫೆಬ್ರವರಿಯಲ್ಲಿ ಬಂದಿತ್ತು. ವೇಗ, ಬ್ರೇಕ್, ಸಿಗ್ನಲಿಂಗ್, ನಿಲುಗಡೆ ಸೇರಿ 36ಕ್ಕೂ ಹೆಚ್ಚು ಬಗೆಯ ತಪಾಸಣೆಗಳು ನಡೆದಿವೆ. ಅದಾದ ನಂತರ ಸಿಎಂಆರ್‌ಎಸ್, ರೈಲ್ವೆ ಸುರಕ್ಷತಾ ಆಯುಕ್ತರಿಂದ ಒಪ್ಪಿಗೆ ದೊರೆತು ಪ್ರಯಾಣಿಕ ಸೇವೆ ಆರಂಭವಾಗಲು ಕನಿಷ್ಠ ಮೂರು ತಿಂಗಳು ಹಿಡಿಯಲಿದೆ.

ದರ ಪರಿಷ್ಕರಣೆಗೆ ಸಿಂಗಾಪುರ, ಹಾಂಕಾಂಗ್ ಮಾದರಿ ಪರಿಶೀಲಿಸಿದ ಮೆಟ್ರೋ ಸಮಿತಿ

ನಮ್ಮ ಮೆಟ್ರೋ ದರ ಪರಿಷ್ಕರಣಾ ಸಮಿತಿ ಸದಸ್ಯರು ಸಿಂಗಾಪುರ, ಹಾಂಕಾಂಗ್ ತೆರಳಿ ಅಲ್ಲಿನ ಮೆಟ್ರೋದರ ಪರಿಷ್ಕರಣೆ ಕ್ರಮ, ದರ ಹೆಚ್ಚಳವನ್ನು ಅಧ್ಯಯನ ಮಾಡಿಕೊಂಡು ಬಂದಿದೆ. ಇನ್ನೆರಡು ವಾರದಲ್ಲಿ ಅಂತಿಮ ವರದಿಯನ್ನು ಬಿಎಂಆರ್ ಸಿಎಲ್‌ಗೆ ಸಲ್ಲಿಸುವ ಸಾಧ್ಯತೆಯಿದ್ದು, ಬಳಿಕ ತೀರ್ಮಾನ ಆಗಲಿದೆ.

ನಮ್ಮ ಮೆಟ್ರೋ ಫೇಸ್-3: ಬೆಂಗಳೂರಿನಲ್ಲಿ 11 ಸಾವಿರಕ್ಕೂ ಅಧಿಕ ಮರದ ಬುಡಕ್ಕೆ ಕೊಡಲಿ!

ಮದ್ರಾಸ್ ಹೈಕೋರ್ಟ್ ನಿವೃತ್ತ ನ್ಯಾಯಾ ಧೀಶ ಆರ್.ಧರಣಿ, ರಾಜ್ಯದ ಗೃಹ, ನಗರ ವ್ಯವಹಾರ ಇಲಾಖೆ ಸತ್ಯೇಂದ್ರ ಪಾಲ್ ಸಿಂಗ್ ಹಾಗೂ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ ಅವರ ತಂಡವನ್ನು ದರ ಪರಿಷ್ಕರಣೆಗಾಗಿ ಬಿಎಂಆರ್‌ಸಿಎಲ್ ರಚಿಸಿತ್ತು. ಇವರು ಹಾಗೂ ಮೆಟ್ರೋ ಅಧಿಕಾರಿಗಳನ್ನು ಒಳಗೊಂಡ ತಂಡ ಸಿಂಗಾಪುರ, ಹಾಂಗ್ಕಾಂಗ್ ಗೆ ತೆರಳಿ ಬಂದಿದೆ. 

ಅಲ್ಲಿ ಮೆಟ್ರೋ ಸರ್ಕಾರದ್ದೇ ಆದರೂ ಅದನ್ನು ಖಾಸಗೀಯವರು ನಿರ್ವಹಣೆ ಮಾಡುತ್ತಿದ್ದು, ಆಟೋಮೆಟಿಕ್ ವಾರ್ಷಿಕ ದರ ಪರಿಷ್ಕರಣೆ ಪದ್ಧತಿ ಅಳವಡಿಸಿಕೊಳ್ಳಲಾಗಿದೆ. ಆದರೆ, ಇದನ್ನು ನಮ್ಮಲ್ಲಿ ಅನುಷ್ಠಾನಕ್ಕೆ ತರುವುದು ಕಷ್ಟ, ದೆಹಲಿ ಮೆಟ್ರೋದಲ್ಲಿ ಅನಸರಿಸಲಾ ಗುತ್ತಿರುವ ದರ ಪರಿಷ್ಕರಣೆಯನ್ನು ನಾವು ಇಲ್ಲಿ ಜಾರಿಗೊಳಿಸಿಕೊಳ್ಳಬಹುದು ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

click me!