ಶಿವಮೊಗ್ಗ ಜಿಲ್ಲೆಯ ಗ್ರಾಮ ಒಂದರಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಪತ್ತೆಯಾಗಿದ್ದು, ಹಾವನ್ನು ಗ್ರಾಮಸ್ಥರೇ ಸೇರಿ ಸೆರೆಹಿಡಿದಿದ್ದಾರೆ.
ರಿಪ್ಪನ್‌ಪೇಟೆ [ನ.17]: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಕಾಳಿಂಗ ಸರ್ಪಗಳು ಮಲೆನಾಡಿನ ಅನೇಕ ಭಾಗದಲ್ಲಿ ಪದೇ ಪದೇ ಕಾಣಿಸುತ್ತಿವೆ.
ಶಿವಮೊಗ್ಗ ಜಿಲ್ಲೆಯ ರಿಪ್ಪನ್ ಪೇಟೆ ಸಮೀಪದ ಅನೆಗದ್ದೆ ಗ್ರಾಮದಲ್ಲಿ ಬೃಹತ್ ಕಾಳಿಂಗ ಸರ್ಪವೊಂದು ಪತ್ತೆಯಾಗಿದೆ.
ಕಾಳಿಂಗ ಸರ್ಪವನ್ನು ಗ್ರಾಮದ ಜನರೇ ಎಲ್ಲರೂ ಸೇರಿ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಬೃಹತ್ ಗಾತ್ರದ ಕಾಳಿಂಗ ಸರ್ಪ ಮನೆಯೊಂದರ ಬಳಿ ಕಾಣಿಸಿಕೊಂಡಿತ್ತು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಆಟವಾಡುತ್ತಿದ್ದ ಮಕ್ಕಳು ಇದನ್ನು ನೋಡಿ ಭಯಗೊಂಡು ಕೂಗಿಕೊಂಡಾದ ಕೂಡಲೇ ಗ್ರಾಮಸ್ದರು ಸ್ಥಳಕ್ಕೆ ಆಗಮಿಸಿ ಕಾಳಿಂಗ ಸರ್ಪ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ನಂತರ ಅರಣ್ಯ ಇಲಾಖೆಯವರಿಗೆ ಸುದ್ದಿ ಮುಟ್ಟಿಸಿದ್ದು, ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿವರ್ಗ ಹಾಗೂ ಗ್ರಾಮಸ್ಥರೊಂದಿಗೆ ಹಾವನ್ನು ಅರಣ್ಯಕ್ಕೆ ಬಿಡಲಾಯಿತು.