ಬೆಂಗಳೂರು ಗಲಭೆ: 'ಸುಟ್ಟ ಶಾಸಕರ ಮನೆ ನೋಡಿ ಖುಷಿಪಟ್ಟ ಮಾಜಿ ಮೇಯರ್‌’

By Kannadaprabha News  |  First Published Oct 15, 2020, 8:02 AM IST

ಪೊಲೀಸರ ಮುಂದೆ ಕಾರು ಚಾಲಕ ತಪ್ಪೊಪ್ಪಿಗೆ| ಅ.14ರಂದು ಕಾವಲ್‌ ಭೈರಸಂದ್ರದಲ್ಲಿ ಸಿಸಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ಮುಸ್ಲಿಂ ಹುಡುಗರ ಬಂಧನ| ವಾಟರ್‌ ಮೆನ್‌ ಮುಜಾಹಿದ್‌ ಖಾನ್‌ ಅಲಿಯಾಸ್‌ ಮುಜ್ಜುಗೆ ಗಲಭೆ ಜವಾಬ್ದಾರಿ| 


ಬೆಂಗಳೂರು(ಅ.15): ಗಲಭೆಯಲ್ಲಿ ಬೆಂದು ಹೋದ ಶಾಸಕರ ಮನೆ ಮತ್ತು ಕಚೇರಿಯನ್ನು ನೋಡಿ ಮಾಜಿ ಮೇಯರ್‌ ಸಂಪತ್‌ ರಾಜ್‌ ಖುಷಿಪಟ್ಟಿದ್ದರು ಎಂದು ಮಾಜಿ ಮೇಯರ್‌ ಕಾರು ಚಾಲಕ ಸಂತೋಷ್‌ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ.

ಆ.11ರ ರಾತ್ರಿ 7 ಗಂಟೆಗೆ ತಮ್ಮ ಚಾಲಕನಿಗೆ ವಾಟ್ಸ್‌ಆಪ್‌ ಕರೆ ಮಾಡಿ ನವೀನ್‌ ಪೋಸ್ಟ್‌ ವಿಚಾರ ತಿಳಿಸಿದ ಸಂಪತ್‌ ರಾಜ್‌, ಕೂಡಲೇ ಶಾಸಕರ ವಿರುದ್ಧ ಮುಸ್ಲಿಂ ಹುಡುಗರನ್ನು ಗಲಾಟೆಗೆ ಪ್ರಚೋದಿಸುವಂತೆ ಸೂಚಿಸಿದ್ದರು. ಅಂತೆಯೇ ವಾಟರ್‌ ಮೆನ್‌ ಮುಜಾಹಿದ್‌ ಖಾನ್‌ ಅಲಿಯಾಸ್‌ ಮುಜ್ಜುಗೆ ಗಲಭೆ ಜವಾಬ್ದಾರಿ ನೀಡಿದೆ. ಮುಜ್ಜು ಗುಂಪು ಶಾಸಕರ ಮನೆಗೆ ಬೆಂಕಿ ಹಾಕಿ ಸುಟ್ಟ ವಿಷಯವನ್ನು ರಾತ್ರಿ 9.45ಕ್ಕೆ ಸಂಪತ್‌ ರಾಜ್‌ಗೆ ತಿಳಿಸಿದೆ ಎಂದು ಸಂತೋಷ್‌ ಹೇಳಿದ್ದಾನೆ ಎನ್ನಲಾಗಿದೆ.

Latest Videos

undefined

ಎಂಎಲ್‌ಎ ಅಖಂಡ ಮರ್ಡರ್‌ಗೆ ಸ್ಕೆಚ್ ಹಾಕಿದ್ದರು ಡಿಜೆ ಹಳ್ಳಿ ಭಯೋತ್ಪಾದಕರು!

ನಂತರ ನನ್ನ ದ್ವಿಚಕ್ರದಲ್ಲಿ ಸಂಪತ್‌ ರಾಜ್‌ನನ್ನು ಶಾಸಕರ ಮನೆ ಬಳಿಗೆ ಕರೆ ತಂದೆ. ಆ ಬೆಂಕಿಯಲ್ಲಿ ಬೆಂದಿದ್ದ ಶಾಸಕರ ಮನೆ ಮತ್ತು ಕಚೇರಿ ನೋಡಿ ಖುಷಿಪಟ್ಟ ಸಂಪತ್‌ ರಾಜ್‌, ‘ನಾನು ಹೇಳಿದಂತೆ ಮಾಡಿದ್ದೀರಾ. ಯಾರಿಗೂ ಈ ವಿಷಯ ತಿಳಿಸಬೇಡಿ’ ಎಂದು ಅಲ್ಲಿಂದ ಹೊರಟರು. ಅ.14ರಂದು ಕಾವಲ್‌ ಭೈರಸಂದ್ರದಲ್ಲಿ ಸಿಸಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ಮುಸ್ಲಿಂ ಹುಡುಗರನ್ನು ಪೊಲೀಸರು ಬಂಧಿಸುತ್ತಿದ್ದಾರೆ. ತಪ್ಪಿಸಿಕೊಳ್ಳುವಂತೆ 20 ಸಾವಿರ ಕೊಟ್ಟು ಕಳುಹಿಸಿದರು. ಆದರೆ, ನಾನು ಎಲ್ಲಿಯೋ ಹೋಗದೆ ನನ್ನ ಪಾಡಿಗೆ ಮನೆಯಲ್ಲಿದೆ. ಮರು ದಿನ ನನ್ನ ಮನೆಗೆ ಬಂದು ಸಿಸಿಬಿ ಪೊಲೀಸರು ಬಂಧಿಸಿದರು ಎಂದು ಸಂತೋಷ್‌ ವಿವರಿಸಿದ್ದಾನೆ.
 

click me!