ಭಾರೀ ಮಳೆಗೆ : ಯಲ್ಲಮ್ಮ ದೇಗುಲ ಮುಳುಗಡೆ

Kannadaprabha News   | Asianet News
Published : Oct 15, 2020, 07:40 AM IST
ಭಾರೀ ಮಳೆಗೆ :  ಯಲ್ಲಮ್ಮ ದೇಗುಲ ಮುಳುಗಡೆ

ಸಾರಾಂಶ

ರಾಜ್ಯದ ದೊಡ್ಡ ದೇವಾಲಯವಾದ  ಯಲ್ಲಮ್ಮ ದೇವಿ ದೇಗುಲ ಮಳೆಯಿಂದಾಗಿ ಮುಳುಗಿ ಹೋಗಿದೆ. 

 ಅಥಣಿ (ಅ.15):  ಅಥಣಿ ತಾಲೂಕಿನಾದ್ಯಂತ ಕಳೆದ 24 ಗಂಟೆಗಳ ಧಾರಾಕಾರವಾಗಿ ಮಳೆ ಸುರಿದಿದೆ. ವರುಣನ ಆರ್ಭಟದಿಂದಾಗಿ ತಾಲೂಕಿನ ಹಲವೆಡೆ ಮನೆಗಳು ಕುಸಿದರೆ ಮತ್ತೆ ಕೆಲವೆಡೆ ಕೈಗೆ ಬಂದ ಬೆಳೆ ಕೂಡ ನಾಶವಾಗಿದೆ.

 ಕರ್ನಾಟಕ ಮಹಾರಾಷ್ಟ್ರ ಗೋವಾ ರಾಜ್ಯಗಳಲ್ಲಿ ಲಕ್ಷಾಂತರ ಭಕ್ತರನ್ನು ಹೊಂದಿರುವ ತಾಲೂಕಿನ ಕೊಕಟನೂರ ಯಲ್ಲಮ್ಮ ದೇವಸ್ಥಾನ ಇದೆ. ಇದಕ್ಕೆ ಸವದತ್ತಿ ನಂತರ ರಾಜ್ಯದಲ್ಲಿ ಎರಡನೇ ಅತಿ ದೊಡ್ಡ ಯಲ್ಲಮ್ಮ ದೇವಸ್ಥಾನ ಇದಾಗಿದೆ. ಈಗ ಸುರಿದ ಮಳೆಗೆ ದೇವಸ್ಥಾನ ಜಲಾವೃತವಾಗಿದೆ. ಗರ್ಭಗುಡಿಯಲ್ಲಿ ನೀರು ನುಗ್ಗಿದೆ. ಗುಡಿ ಸುತ್ತಲಿನ ಎಲ್ಲ ಪ್ರದೇಶದಲ್ಲಿ ಮಳೆ ನೀರು ತುಂಬಿ ಹರಿಯುತ್ತಿದೆ.

ಸವದತ್ತಿ ಯಲ್ಲಮ್ಮ ದೇವಸ್ಥಾನ ವದಂತಿ ನಂಬಬೇಡಿ: ಆತಂಕದಲ್ಲಿ ಭಕ್ತರು ..

ತಾಲೂಕಿನ ವಿವಿಧ ಕಡೆ ಮಳೆ ಬಿದ್ದಿರುವ ವರದಿಯಾಗಿದೆ. ಈಗ ಅಧಿಕೃತವಾಗಿ ತಾಲೂಕಿನ ಸತ್ತಿ ಗ್ರಾಮದಲ್ಲಿ ಒಂದು ಮನೆ ಕುಸಿದಿದೆ. ಕಳೆದ ವರ್ಷ ನೆರೆ ಹಾವಳಿಯಿಂದಾಗಿ ರೈತರು ಭಾರಿ ನಷ್ಟಅನುಭವಿಸಿದ್ದರು. ಈ ಬಾರಿಯೂ ನಷ್ಟಅನುಭವಿಸುವ ಸಾಧ್ಯತೆ ಇದೆ. ಹೀಗಾಗಿ ರಾಜ್ಯ ಸರ್ಕಾರ ತಕ್ಷಣ ಸರ್ವೆ ಮಾಡಿ ರೈತರಿಗೆ ಪರಿಹಾರ ನೀಡಬೇಕು ಎಂದು ಪ್ರಭಾಕರ ಚವ್ಹಾಣ ಒತ್ತಾಯಿಸಿದ್ದಾರೆ.

PREV
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ