ನೇಹಾ ಕೊ*ಲೆ ಹಿಂದೆಯೂ ಇದೇ ಸಮೀರ್? ಅಪ್ಪನ ಶಾಕಿಂಗ್​ ಹೇಳಿಕೆ- ಜಿಮ್​ಗಳೇ Love Jihad ಸೆಂಟರ್​?

Published : Apr 09, 2026, 08:38 PM IST
Neha Hiremath Case

ಸಾರಾಂಶ

ಹುಬ್ಬಳ್ಳಿ ನೇಹಾ ಹಿರೇಮಠ ಹ*ತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಲವ್ ಜಿಹಾದ್ ಆರೋಪ ಎದುರಿಸುತ್ತಿರುವ ಜಿಮ್ ಟ್ರೈನರ್ ಸಮೀರ್ ಮುಲ್ಲಾನಿಗೂ ಈ ಹತ್ಯೆಗೂ ಸಂಬಂಧವಿದೆ ಎಂದು ನೇಹಾ ತಂದೆ ನಿರಂಜನ್ ಹಿರೇಮಠ ಆರೋಪಿಸಿದ್ದಾರೆ. ಹಂತಕ ಫಯಾಜ್ ಕೂಡ ಅದೇ ಜಿಮ್‌ನಲ್ಲಿದ್ದ ಮತ್ತು ತಮ್ಮನ್ನು ಬಲೆಗೆ ಬೀಳಿಸುವ ಸಂಚು ನಡೆದಿತ್ತು ಎಂದು ಅವರು ಹೇಳಿದ್ದಾರೆ.

ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣ ಏಪ್ರಿಲ್ 2024ರಲ್ಲಿ ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿತ್ತು. ಆರೋಪಿ ಫಯಾಜ್‌ನಿಂದ ಹತ್ಯೆಗೀಡಾದ ನೇಹಾಳ ಪ್ರಕರಣವು ಲವ್ ಜಿಹಾದ್ ಶಂಕೆ ಮತ್ತು ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿತ್ತು. ನೇಹಾಳ ತಂದೆ ನಿರಂಜನ್ ಹಿರೇಮಠ ಲವ್ ಜಿಹಾದ್ ಆಯಾಮದಡಿ ತನಿಖೆಗೆ ಒತ್ತಾಯಿಸಿದ್ದರು. ಈ ಪ್ರಕರಣವು ದೊಡ್ಡ ರಾಜಕೀಯ ವಿವಾದವಾಗಿ ಮಾರ್ಪಟ್ಟಿತ್ತು, ಬಿಜೆಪಿ ನಾಯಕರು ತನಿಖೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು. ನೇಹಾಳ ಕುಟುಂಬದ ಅಳಲು ಮತ್ತು ಲವ್ ಜಿಹಾದ್ ಆರೋಪಗಳ ಕುರಿತಾಗಿ ಏಷ್ಯಾನೆಟ್​ ಸುವರ್ಣ ನ್ಯೂಸ್​ ನಿರಂತರ ಅಪ್​ಡೇಟ್​ ಒದಗಿಸಿದ್ದು ನೆನಪಿರಬಹುದು. ಇದೀಗ ಈ ಪ್ರಕರಣ ಮತ್ತಷ್ಟು ಮುನ್ನೆಲೆಗೆ ಬರಲು ಕಾರಣ, ಹುಬ್ಬಳ್ಳಿಯಲ್ಲಿ ಈಗ ಭಾರಿ ಸಂಚಲನ ಮೂಡಿಸಿರುವ ಜಿಮ್​ ಟ್ರೈನರ್​ಗಳಾದ ಸಮೀರ್​ ಮುಲ್ಲಾ ಮತ್ತು ಮುಫೀಸ್ ಮಿಯಾನ್ನಾವರ್​.

ಜಿಮ್​ ಟ್ರೈನರ್ ​ಸಮೀರ್ ಮುಲ್ಲಾ

ಹುಬ್ಬಳ್ಳಿ ಜಿಮ್ ಟ್ರೈನರ್​ ಸಮೀರ್ ಮುಲ್ಲಾ, ಹಿಂದೂ ಯುವತಿಯರನ್ನು ಪ್ರೀತಿಯ ನಾಟಕವಾಡಿ ವಂಚಿಸುತ್ತಿದ್ದ ಪ್ರಕರಣ ಬಯಲಾಗಿದೆ. ಆತನ ಮೊಬೈಲ್​ನಲ್ಲಿ ಹಿಂದೂ ಯುವತಿಯರ ಫೋಟೋಗಳು ಪತ್ತೆಯಾಗಿದ್ದು, ಇದೇ ವೇಳೆ ಆತನ ಸಹಚರನ ಮೇಲೂ ಲವ್ ಜಿಹಾದ್ ಆರೋಪ ಕೇಳಿಬಂದಿದೆ. ಈ ಕೇಸ್​ ಇನ್ನೂ ನಡೆಯುತ್ತಿರುವಾಗಲೇ ಇನ್ನೊಂದು ಲವ್​ ಜಿಹಾದ್​ ಪ್ರಕರಣ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಮುಫೀಸ್ ಮಿಯಾನ್ನಾವರ್ ಎಂಬಾತ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆತನ ಮೇಲೆ ಯುವತಿ ದೂರು ದಾಖಲು ಮಾಡಿದ್ದಾಳೆ. ಈತ ಕೂಡ ಇನ್ನೊಂದು ಜಿಮ್​ನಲ್ಲಿ ಕೆಲಸ ಮಾಡುತ್ತಿದ್ದಾನೆ. ಯುವತಿ ಹೇಳಿರುವ ಪ್ರಕಾರ, ಈತ ತನ್ನನ್ನು ಪ್ರೀತಿಸುವುದಾಗಿ ಹೇಳಿದ್ದ. ಆಮೇಲೆ ಅದು ನಾಟಕ ಎನ್ನುವುದು ಗೊತ್ತಾಯಿತು. ಈತ ಪ್ರೀತಿಸಿರುವುದಾಗಿ ನಂಬಿಕ ರೇ*ಪ್​ ಮಾಡಿದ್ದಾನೆ ಎಂದಿದ್ದಾಳೆ.

ಯುವತಿಯರಿಂದಲೇ ಪರಿಚಯ

ಇಂಥ ಹಲವು ಲವ್​ ಜಿಹಾದ್ ಎನ್ನುವ ಪ್ರಕರಣಗಳಲ್ಲಿ ಒಂದೇ ಒಂದು ಸಾಮ್ಯತೆ ಇರುವುದು ಯಾವುದೋ ಒಬ್ಬಳು ಈ ಯುವಕರನ್ನು ಪರಿಚಯ ಮಾಡಿಸುವುದು! ನನ್ನ ಸ್ನೇಹಿತೆಯೊಬ್ಬಳು ಈತನನ್ನು ಪರಿಚಯ ಮಾಡಿಸಿದ್ಲು. ಅಲ್ಲಿಂದ ಲವ್​ ಶುರುವಾಯ್ತು. ಆಮೇಲೆ ಪ್ರೀತಿ ಮಾಡ್ತೇನೆ ಎಂದಿದ್ದ. ನಾನೂ ನಂಬಿದ್ದೆ ಎನ್ನುವುದು ಪ್ರತಿಯೊಂದು ಯುವತಿಯರ ಮಾತು. ಥಿಯೇಟ್​ ಈ ಎಲ್ಲಾ ಪ್ರಕರಣಗಳಲ್ಲಿ ಆಗಿರುವುದು ದಿ ಕೇರಳ ಸ್ಟೋರಿ ಮಾದರಿಯದ್ದೇ ಘಟನೆ. ಆದರೆ ಇದೀಗ ಇನ್ನೊಂದು ಶಾಕಿಂಗ್ ವಿಷಯ ಬಹಿರಂಗಗೊಂಡಿದೆ. ಅದೇನೆಂದರೆ, ತಮ್ಮ ಮಗಳನ್ನು ಲವ್​ ಜಿಹಾದ್​ ಎಂದು ಮೊದಲಿನಿಂದಲೂ ಹೇಳಿಕೊಂಡೇ ಬಂದಿರುವ ನೇಹಾ ಹಿರೇಮಠ ಅವರ ತಂದೆ ನಿರಂಜನ ಹಿರೇಮಠ ಇದೀಗ ತಮ್ಮ ಮಗಳ ಸಾವಿಗೂ ಸಮೀರ್ ಮುಲ್ಲಾಗೂ ಸಂಬಂಧಿ ಇದೆ ಎನ್ನುತ್ತಿದ್ದಾರೆ.

ನೇಹಾ ಸಾಯಿಸಿದವನೂ ಇದೇ ಜಿಮ್​ ಟ್ರೈನರ್​

ತಮ್ಮ ಮಗಳನ್ನು ಸಾಯಿಸಿದವ ಒಂದು ಅದೇ ಜಿಮ್ ಟ್ರೈನರ್‌ ಆಗಿದ್ದ. ಪ್ರಕರಣದಲ್ಲಿ ಈತನ ಕೈವಾಡ ಇದೆ. ನನ್ನ ಮಗಳು ನೇಹಾ ಹಿರೇಮಠ ಅನ್ನು ಸಾಯಿಸಿದ ಫಯಾಜ್ ಖೋಂಡುನಾಕ್ ಅಲ್ಲಿಯೇ ತರಬೇತಿದಾರನಾಗಿದ್ದ. ಘಟನೆ ಬಳಿಕ ನಮ್ಮನ್ನು ಟ್ರ್ಯಾಪ್ ಮಾಡುವ ಪ್ಲಾನ್ ನಡೆದಿತ್ತು ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ. ನಾನು ಕಾರ್ಪೋರೇಟರ್‌ ಇದ್ದ ಹಿನ್ನೆಲೆ ನನ್ನ ವಾರ್ಡ್‌ಗೆ ಸಮೀರ್ ಮುಲ್ಲಾ ಅವರ ತಂದೆ ಪದೇ ಪದೇ ಬಂದು ಬಾಡಿ ಬಿಲ್ಡಿಂಗ್ ಕಾಂಪಿಟೇಷನ್‌ ಮಾಡಲು ಒತ್ತಡ ಹಾಕುತ್ತಿದ್ದರು. ಅವರಿಗೆ ಏನೆಲ್ಲಾ ಸಾಕ್ಷಿ ಬೇಕೋ ಅದನ್ನೆಲ್ಲಾ ರೆಡಿ ಮಾಡಿಕೊಳ್ಳುತ್ತಿದ್ದರು. ಹತ್ತೂ ಅಧಿಕ ಬಾರಿ ನನಗೆ ಕೇಳಿ ಒತ್ತಾಯ ಮಾಡಿದ್ದರು. ನಮ್ಮ ವಾರ್ಡ್‌ನಲ್ಲಿ ದೇವಸ್ಥಾನ, ಮಠಗಳೇ ಇವೆ ಇಂತಹ ಸ್ಪರ್ಧೆಗಳು ಬೇಡ ಎಂದು ಹೇಳಿದ್ದೆ. ನಮ್ಮನ್ನು ಟ್ರ್ಯಾಪ್ ಮಾಡುವ ಪ್ಲಾನ್ ಇದ್ದಿರಬಹುದು ಎಂದು ಸಂಶಯ ಇತ್ತು. ಹೀಗಾಗಿ ಹೋಗಿರಲಿಲ್ಲ ಎಂದಿದ್ದಾರೆ ನಿರಂಜನ್​.

 

PREV
Read more Articles on
click me!

Recommended Stories

ಈಗಲ್‌ಟನ್ ರೆಸಾರ್ಟ್‌ನಲ್ಲಿ ವಿಂಗ್ ಕಮಾಂಡರ್ ದಂಪತಿ ಹತ್ಯಾಕಾಂಡ: 4 ವರ್ಷದ ಬಳಿಕ ಸಿಕ್ಕ ಸುಳಿವು, ಗುಜರಾತ್‌ನಲ್ಲಿ ಆರೋಪಿ ಅರೆಸ್ಟ್!
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೊಸ ಮೈಲಿಗಲ್ಲು, ವಿದೇಶಿ ಪ್ರಯಾಣಕ್ಕೂ ಸ್ಪರ್ಶರಹಿತ ತಂತ್ರಜ್ಞಾನ!