ಸಾವಿನಲ್ಲೂ ಒಂದಾದ ಅಣ್ಣ, ತಮ್ಮ: ಗ್ರಾಮದಲ್ಲಿ ನೀರವ ಮೌನ

Suvarna News   | Asianet News
Published : Mar 19, 2021, 10:14 PM ISTUpdated : Mar 20, 2021, 10:20 AM IST
ಸಾವಿನಲ್ಲೂ ಒಂದಾದ ಅಣ್ಣ, ತಮ್ಮ: ಗ್ರಾಮದಲ್ಲಿ ನೀರವ ಮೌನ

ಸಾರಾಂಶ

ಮೃತಪಟ್ಟಿದ್ದ ತಮ್ಮನ ಅಂತಿಮ ವಿಧಿ-ವಿಧಾನ ಕಾರ್ಯ ಮುಗಿಸಿ ವಾಪಸ್ ಮನೆಗೆ ಆಗಮಿಸುತ್ತಿದ್ದ ವೇಳೆ ಅಣ್ಣನೂ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

ಬಳ್ಳಾರಿ, (ಮಾ.19): ತಾಲೂಕಿನ ಹಲಕುಂದಿ ಗ್ರಾಮದಲ್ಲಿ ಸಹೋದರಿಬ್ಬರು ಸಾವಿನಲ್ಲಿ ಒಂದಾದ ದುರಂತ ಘಟನೆ ನಡೆದಿದೆ. ಕೆ.ಸಿದ್ದೇಶ(22) ಎನ್ನುವ ಯುವಕ ಕೈಗಾರಿಕೆ ಇಂಡಷ್ಟ್ರಿಯೊಂದರಲ್ಲಿ ಗುಮಾಸ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಈತನಿಗೆ ಗುರುವಾರ ರಾತ್ರಿ ಆರೋಗ್ಯದಲ್ಲಿ ಏರುಪೇರಾಗಿ ಮೃತಪಟ್ಟಿದ್ದಾನೆ.

ಈ ಸುದ್ದಿ ತಿಳಿದ ಬೆಂಗಳೂರಿನಲ್ಲಿ ಅಭಿಯಂತರನಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಹೋದರ ದೊಡ್ಡಬಸವ(25)ಬೆಳಗ್ಗೆ ಗ್ರಾಮಕ್ಕೆ ಆಗಮಿಸಿದ್ದಾನೆ. ತಮ್ಮನ ವಿಧಿ-ವಿಧಾನ ಕಾರ್ಯ ಮುಗಿಯುವರೆಗೂ ಜತೆಗಿದ್ದು, ಸ್ಮಶಾನದಿಂದ ಮರಳಿ ಮನೆಗೆ ಬರುವ ಸಮಯದಲ್ಲಿ ಈ ಯುವಕನಿಗೆ ಹೃದಯಘಾತವಾಗಿದೆ. ಆದ್ರೆ ಅವರನ್ನ ಬಳ್ಳಾರಿಯ ವಿಮ್ಸ್​ ಆಸ್ಪತ್ರೆಗೆ ದಾಖಲು  ಮಾಡುವಷ್ಟರಲ್ಲಿ ಮೃತಪಟ್ಟಿದ್ದಾನೆ.

ಪತ್ನಿ ಸಾವಿನ ಸುದ್ದಿ ಕೇಳಿ ಪತಿ ಆತ್ಮಹತ್ಯೆ: ಸಾವಿನಲ್ಲೂ ಒಂದಾದ ದಂಪತಿ 

ಗ್ರಾಮದ ಬಸಪ್ಪ ಮತ್ತು ದುರ್ಗಮ್ಮ ದಂಪತಿಗಳ ಮಕ್ಕಳಾಗಿದ್ದು, ಇವರಿಗೆ ಮೂರು ಗಂಡು ಮಕ್ಕಳಿದ್ದಾರೆ.ಈ ಪೈಕಿ ಇವರ ಹಿರಿಯ ಮಗ ಕೆಂಚಪ್ಪ ಎಂಬಂತಾನು ತಮ್ಮಂದಿರನ್ನು ಕಳೆದುಕೊಂಡಿರುವ ದು:ಖದಲ್ಲಿ ಚಿಂತಾಕ್ರಾಂತನಾಗಿದ್ದಾನೆ. ಆರೋಗ್ಯದಲ್ಲಿ ಏರುಪೇರಾಗಿದ್ದು, ಈತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸಹೋದರರಿಬ್ಬರ ಸಾವಿಗೆ ಇಡೀ ಗ್ರಾಮವೇ ಮರುಕ ಪಡುತ್ತಿದೆ. ಅದರಲ್ಲೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ವ್ಯವಸಾಯ ನಂಬಿ ಜೀವನ ಸಾಗಿಸುತ್ತಿರುವ ಈ ದಂಪತಿಗೆ ಮಕ್ಕಳೇ ಆಧಾರವಾಗಿದ್ದರು. ಆದರೆ, ಜವರಾಯ ಮೂವರು ಸಹೋದರಲ್ಲಿ ಇಬ್ಬರನ್ನು ಒಂದೇ ದಿನ ಬಲಿ ಪಡೆದು ಕುಟುಂಬಕ್ಕೆ ಆಘಾತ ನೀಡಿದ್ದಾನೆ.

PREV
click me!

Recommended Stories

30 ವರ್ಷಗಳ ನಂತರ ರಾಮನಗುಡ್ಡ ಭೂತಾಯಿಯ ಒಡಲು ತುಂಬಲು ಬಂದ ಕಾವೇರಿ: ಕುಣಿದಾಡಿದ ರೈತರು
ವಿಜಯಪುರದ ಚಡಚಣದಲ್ಲಿ ಪತ್ತೆಯಾದ ನಿಗೂಢ ರಣಹದ್ದು: ಕಾಲಿನಲ್ಲಿರೋ ವಸ್ತು ನೋಡಿ ಜನರು ಶಾಕ್