ಭಾವಗೀತೆಗಳ ಕವಿಗೆ ಭಾವನಮನ.. ಮಿಸ್ ಮಾಡದೆ ಆಸ್ವಾದಿಸಿ

Published : Mar 19, 2021, 09:58 PM IST
ಭಾವಗೀತೆಗಳ ಕವಿಗೆ ಭಾವನಮನ.. ಮಿಸ್ ಮಾಡದೆ ಆಸ್ವಾದಿಸಿ

ಸಾರಾಂಶ

ಭಾವಗೀತೆಗಳ ಕವಿ ಲಕ್ಷ್ಮೀನಾರಾಯಣ ಭಟ್ಟರಿಗೆ ಭಾವನಮನ/  ನಾಡಿನ ಹೆಸರಾಂತ ಗಾಯಕಿ ನಾಗಚಂದ್ರಿಕ ಭಟ್ ರಿಂದ ಗೀತ  ನಮನ/ ಯುಟ್ಯೂಬ್ ನಲ್ಲಿ ಕಾರ್ಯಕ್ರಮ ವೀಕ್ಷಣೆ ಮಾಡಬಹುದು

ಬೆಂಗಳೂರು(ಮಾ. 19)  ನೀ ಸಿಗದೇ ಬಾಳೋಂದು ಬಾಳೆ ಕೃಷ್ಣಾ... ಹಿಂದೆ ಹೇಗೆ ಚಿಮ್ಮುತಿತ್ತು ಕಣ್ಣ ತುಂಬಾ ಪ್ರೀತಿ.. ಎಲ್ಲಿ ಜಾರಿತೋ ಮನವೂ.. ನನ್ನ ಇನಿಯನ ನೆಲೆ.. ಹೌದು ಇದೆಲ್ಲ ಸುಗಮ ಸಂಗೀತ, ಭಾವಗೀತೆಗಳ ಲೋಕ. 

ಭಾವಗೀತೆಗಳ ಕವಿ ಡಾ. ಎನ್‌.ಎಸ್. ಲಕ್ಷ್ಮೀನಾರಾಯಣ  ಭಟ್ ಕನ್ನಡ ಸಾಹಿತ್ಯ ಮತ್ತು ಸಂಗೀತ ಲೋಕವನ್ನು ಅಗಲಿದ್ದಾರೆ.  ನಾಡಿನ ಹೆಸರಾಂತ ಗಾಯಕಿ ನಾಗಚಂದ್ರಿಕ ಭಟ್ ಲಕ್ಷ್ಮೀನಾರಾಯಣ ಭಟ್ ವಿರಚಿತ ಭಾವಗೀತೆಗಳ ಮೂಲಕ ಭಾವನಮನ ಸಲ್ಲಿಸಲಿದ್ದಾರೆ.

ಭಾವ ಲೋಕ ಅಗಲಿದ ಭಾವಗೀತೆಗಳ ಕವಿ

ಕಾರ್ಯಕ್ರಮದಲ್ಲಿ ಕವಿ ಬಿ.ಆರ್. ಲಕ್ಷ್ಮಣರಾವ್, ಗಾಯಕ ಗರ್ತಿಕೆರೆ ರಾಘಣ್ಣ, ಸಹ್ಯಾದ್ರಿ ಸಂಘಧ ಅಧ್ಯಕ್ಷ ಕೆವಿಆರ್ ಟ್ಯಾಗೋರ್  ಇರಲಿದ್ದಾರೆ. ಯುಟ್ಯೂಬ್ ನಲ್ಲಿ ಕಾರ್ಯಕ್ರಮ ವೀಕ್ಷಣೆ ಮಾಡಬಹುದು ಶನಿವಾರ ಮಾರ್ಚ್ 20 ರಂದು ಸಂಜೆ 6.45 ರಿಂದ 8.45ರವರೆಗೆ ಕಾರ್ಯಕ್ರಮ ನಡೆಯಲಿದೆ.  

ಕನ್ನಡ ಸಾಹಿತ್ಯಕ್ಷೇತ್ರಕ್ಕೆ ಅಮೂಲ್ಯವಾದ ಹಲವು ಭಾವಗೀತೆಗಳನ್ನು ನೀಡಿರುವ ಲಕ್ಷ್ಮೀನಾರಾಯಣ ಭಟ್ಟರು ಬೆಂಗಳೂರಿನಲ್ಲಿ ಕೊನೆಯುಸಿರೆಳೆದಿದ್ದರು. ಹಲವು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಬನಶಂಕರಿಯ ಆಸ್ಪತ್ರೆಯಲ್ಲಿ ನಿಧನರಾಗಿದ್ದರು.

PREV
click me!

Recommended Stories

ಡೆವಿಲ್ ಬ್ಯಾನರ್‌ನಲ್ಲಿ 'ಡಾ.ಅಂಬೇಡ್ಕರ್ ತಲೆಮೇಲೆ ಕೊಲೆ ಆರೋಪಿ' ಕೂರಿಸಿದ ಅಂದಾಭಿಮಾನಿಗಳು!
ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮೋದಿಯಿಂದ ಬದ್ಧತೆಯ ಕಾರ್ಯ: ಸಂಸದ ಬಿ.ವೈ.ರಾಘವೇಂದ್ರ