ಸಂಭಾಜಿ ಸಾವಿನ ಹಿಂದೆ ಕಾಣದ ಕೈ, ಪುತ್ರಿಯ ಅನುಮಾನಕ್ಕೆ ಕಾರಣವೇನು?

Published : May 18, 2019, 07:34 PM ISTUpdated : May 18, 2019, 07:40 PM IST
ಸಂಭಾಜಿ ಸಾವಿನ ಹಿಂದೆ ಕಾಣದ ಕೈ, ಪುತ್ರಿಯ ಅನುಮಾನಕ್ಕೆ ಕಾರಣವೇನು?

ಸಾರಾಂಶ

ಮಾಜಿ ಶಾಸಕ ಸಂಭಾಜಿ ಪಾಟೀಲ್ ನಿಧನದ ಬಗ್ಗೆ ಅವರ ಪುತ್ರಿ ಅನುಮಾನ ವ್ಯಕ್ತಪಡಿಸಿದ್ದಾರೆ. ಹೃದಯಾಘಾತದಿಂದ ನಿಧನರಾಗಿದ್ದರೂ ಪುತ್ರಿ ಸಂಧ್ಯಾ ಪಾಟೀಲ್ ಮರಣೋತ್ತರ ಶವ ಪರೀಕ್ಷೆಗೆ ಪಟ್ಟು ಹಿಡಿದಿದ್ದರು.

ಬೆಳಗಾವಿ[ಮೇ. 18] ಮಾಜಿ ಶಾಸಕ ಸಂಭಾಜಿ ಪಾಟೀಲ್ ಸಾವಿನ ಬಗ್ಗೆ ಅವರ ಪುತ್ರಿ ಅನುಮಾನ ವ್ಯಕ್ತಪಡಿಸಿದ್ದಾರೆ. ತಂದೆ ಸಾವು ಅಸ್ವಾಭಾವಿಕ ಎಂದು ಸಂಶಯ ವ್ಯಕ್ತಪಡಿಸಿದ ಸಂಧ್ಯಾ ಪಾಟೀಲ್ ಎಪಿಎಂಸಿ‌ ಠಾಣೆಯಲ್ಲಿ  ತಂದೆ ಸಾವಿನ ಬಗ್ಗೆ ತನಿಖೆಯಾಗಬೇಕು ಎಂದು ದೂರು ದಾಖಲಿಸಿದ್ದಾರೆ.

ದೂರಿನ‌ ಹಿನ್ನಲೆಯಲ್ಲಿ ಕೆಎಲ್ಇ ವೈದ್ಯರಿಂದ ಸಂಭಾಜಿ ಪಾಟೀಲ್ ಪಾರ್ಥಿವ ಶರೀರದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಶುಕ್ರವಾರ ರಾತ್ರಿ 8.50  ಕ್ಕೆ ಕೆಎಲ್ಇ ‌ಆಸ್ಪತ್ರೆಯಲ್ಲಿ ಹೃದಯಾಘಾತದಿಂದ  ಸಂಭಾಜಿ ನಿಧನರಾಗಿದ್ದರು.

ಮಾಜಿ ಶಾಸಕ ಸಂಭಾಜಿ ಪಾಟೀಲ್ ಇನ್ನಿಲ್ಲ

ಆದ್ರೆ ತಡರಾತ್ರಿ ಆಸ್ಪತ್ರೆಗೆ ಬಂದ ಪುತ್ರಿ ಶವ ಒಯ್ಯಲು ಬಿಡದೇ ಮರಣೋತ್ತರ ಪರೀಕ್ಷೆಗೆ ಪಟ್ಟು ಹಿಡಿದಿದ್ದರು. ಮರಣೋತ್ತರ ‌ಪರೀಕ್ಷೆ ಬಳಿಕ  ಶವ ಹಸ್ತಾಂತರ ಮಾಡಲಾಗಿದ್ದು ಶನಿವಾರ ಸಂಜೆ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.

 

PREV
click me!

Recommended Stories

ಮಂಡ್ಯ: 11 ತಿಂಗಳ ಬಂಡೂರು ಕುರಿ ದಾಖಲೆಯ 1.35 ಲಕ್ಷ ರೂಗೆ ಮಾರಾಟ! ಬೆಂಗಳೂರು ಟೆಕ್ಕಿ ಖರೀದಿಸಿದ್ಯಾಕೆ?
ಗದಗ: ಲಕ್ಕುಂಡಿಯ ಎರಡನೇ ದಿನ ಉತ್ಖನನದಲ್ಲಿ ಶಿವಲಿಂಗದ ಪೀಠ ಪತ್ತೆ! ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ