Haveri ಕಟೀಲ್ ಗೆ ಕೆಪಿಸಿಸಿ ಕಾರ್ಯದ್ಯಕ್ಷ ಸಲೀಂ ಅಹ್ಮದ್ ವಾರ್ನಿಂಗ್

Published : May 09, 2022, 02:40 PM IST
Haveri ಕಟೀಲ್ ಗೆ  ಕೆಪಿಸಿಸಿ ಕಾರ್ಯದ್ಯಕ್ಷ ಸಲೀಂ ಅಹ್ಮದ್ ವಾರ್ನಿಂಗ್

ಸಾರಾಂಶ

ಅರ್ಕಾವತಿ ಡಿ ನೊಟಿಫಿಕೇಶನ್ ಪ್ರಕರಣ ಓಪನ್ ಮಾಡಿದರೆ  ಸಿದ್ದರಾಮಯ್ಯ ಜೀವನ ಪೂರ್ತಿ ಜೈಲಲ್ಲಿರಬೇಕಾಗುತ್ತೆ ಎಂಬ ನಳೀನ್ ಕುಮಾರ್ ಕಟೀಲ್ ಹೇಳಿಕೆಗೆ  ಸಲೀಂ ಅಹ್ಮದ್ ಕಿಡಿ ಕಾರಿದ್ದಾರೆ. 

ವರದಿ- ಪವನ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್

ಹಾವೇರಿ(ಮೇ.9): ಅರ್ಕಾವತಿ ಡಿ ನೊಟಿಫಿಕೇಶನ್ (Arkavati d notification) ಪ್ರಕರಣ ಓಪನ್ ಮಾಡಿದರೆ ವಿಪಕ್ಷ  ನಾಯಕ ಸಿದ್ದರಾಮಯ್ಯ (siddaramaiah) ಜೀವನ ಪೂರ್ತಿ ಜೈಲಲ್ಲಿರಬೇಕಾಗುತ್ತೆ ಎಂಬ ನಳೀನ್ ಕುಮಾರ್ ಕಟೀಲ್ (nalin kumar kateel ) ಹೇಳಿಕೆಗೆ  ಸಲೀಂ ಅಹ್ಮದ್ (saleem ahmed) ಕಿಡಿ ಕಾರಿದ್ದಾರೆ. ಹಾವೇರಿಯ ಸರ್ಕ್ಯೂಟ್ ಹೌಸ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸಲೀಂ ಅಹ್ಮದ್ ಕಟೀಲ್ ಅವರೇ ಹೆದರಿಸೋ‌ ತಂತ್ರ ಮಾಡಬೇಡಿ. ನಾವು ಯಾವ ತನಿಖೆಗೂ ತಯಾರಿದ್ದೇವೆ. ಮೊದಲು 40% ಕಮಿಷನ್ ನಿಲ್ಲಿಸಿ. ಶಾಂತಿ ಸೌಹಾರ್ದತೆ ಕಾಪಾಡಿ ಮೊದಲು  ಆದರೆ ಆ ಯೋಗ್ಯತೆ ನಿಮಗೆ ಇಲ್ಲ.ಆಧಾರ ಇಲ್ಲದ ಮಾಹಿತಿ ನೀಡೋದು ಬಿಡಿ. ರಾಜ್ಯದ ಅಭಿವೃದ್ದಿಗಿಂತ ಭ್ರಷ್ಟಾಚಾರದ ಅಭಿವೃದ್ಧಿ ಮಾಡಿದಿರಾ? ನಿಮಗೆ ನಾಚಿಕೆ ಆಗಬೇಕು ಅಂತ ಕಿಡಿ ಕಾರಿದರು.

ನೀವು ಹೇಳಿಕೆಗಳ ಮೂಲಕ ಪಕ್ಷ , ಸರ್ಕಾರ ನಡೆಸುತ್ತಿದ್ದೀರಿ. ಇದೊಂದು ತಂತ್ರ ಅಲ್ಲ ಕುತಂತ್ರ, ಈಶ್ವರಪ್ಪನ ಬಂಧಿಸಿ ಅಂದರೆ ಬಂದಿಸಿಲ್ಲ. ಸಿಎಂ ಹಾಗೂ ಸರ್ಕಾರ ಆರ್ ಎಸ್ ಎಸ್ ಹಿಡಿತದಲ್ಲಿದೆ ಎಂದು ಸಲೀಂ ಅಹ್ಮದ್ ವಾಗ್ದಾಳಿ ನಡೆಸಿದರು. ಸಿಎಂ ಬೊಮ್ಮಾಯಿಯವರೇ ಸಂತ ಶಿಶುನಾಳ ಷರೀಫರ ನಾಡಿನ ನೀವು ಸೌಹಾರ್ದತೆ ಕಾಪಾಡಿ ಎಂದು  ಸಲೀಂ ಅಹ್ಮದ್ ಆಗ್ರಹಿಸಿದ್ದು, ಅಜಾನ್ ವರ್ಸಸ್ ಸುಪ್ರಭಾತ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಲೀಂ ಅಹ್ಮದ್, ಜನರ ಅಟೆಂನ್ಷನ್ ಡೈವರ್ಟ್ ಮಾಡೋ‌ ಕೆಲಸ ಮಾಡ್ತಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ದ ಹರಿಹಾಯ್ದರು.

Davangere ಕಳೆದ ಮುಂಗಾರು ಹಂಗಾಮಿನಲ್ಲಿ ಮಾಡಿಸಿದ ವಿಮಾ ಹಣ ಬಾಕಿ

ಕರ್ನಾಟಕ ಬ್ರಷ್ಟಾಚಾರದ ರಾಜಧಾನಿ ಆಗಿದೆ.ಇಡೀ ದೇಶದ ಮುಂದೆ ತಲೆ ತಗ್ಗಿಸೋ ಹಾಗಾಗಿದೆ.ಈ ಸರ್ಕಾರದಲ್ಲಿ ಹಣ ಕೊಟ್ಟೇ ಪೋಸ್ಟಿಂಗ್ ತಗೊಬೇಕಿದೆ. ಬಿಜೆಪಿಯವರಿಗೆ ಭ್ರಷ್ಟಾಚಾರದ ಬಗ್ಗೆ ಮಾತಾಡೋ ನೈತಿಕತೆ ಇಲ್ಲ. ಸಿಎಂ ಆಗಬೇಕಾದರೆ 2500 ಕೋಟಿ ಕೊಡಬೇಕು ಅಂತ ಬಿಜೆಪಿ ಹಿರಿಯ ಮುಖಂಡರೇ ಹೇಳಿದ್ದಾರೆ.ಜನರ ಅಭಿವೃದ್ದಿಗಿಂತ ಭ್ರಷ್ಟಾಚಾರದ ಅಭಿವೃದ್ಧಿ ಆಗ್ತಾ ಇದೆ.ಜನ ಬಿಜೆಪಿಯಿಂದ ನೊಂದಿದ್ದಾರೆ. ಕಾನೂನು ಸುವ್ಯವಸ್ಥೆ‌ ಸಂಪೂರ್ಣ ವಿಫಲವಾಗಿದೆ.

ನಿರಂತರವಾಗಿ ಸಮಾಜ ಒಡೆಯೋ‌ ಕೆಲಸ‌ ಮಾಡ್ತಾ ಇದಾರೆ.ಸಿಎಂ ಅವರೇ ಕೋಮು ಸಾಮರಸ್ಯಕ್ಕೆ ಹೆಸರಾದ ಶಿಶುನಾಳ ಷರೀಫ, ಗೋವಿಂದ ಭಟ್ಟರ‌ ನಾಡಿ‌ನಿಂದ ಬಂದ ನೀವು ಇಂಥವುಗಳಿಗೆ ಅವಕಾಶ ಕೊಡಬಾರದು. ಕ್ರಮ ತಗೊಳ್ದೇ ಇದ್ರೆ ತಮ್ಮ ಮೇಲೂ ಅಪಾದನೆ ಬರುತ್ತೆ. ದಿನ ನಿತ್ಯ ಹೇಳಿಕೆ ನೀಡುವಂತ ಸಂಘಟನೆಗಳು, ವ್ಯಕ್ತಿಗಳನ್ನು ಬಂಧಿಸಿ ಎಂದು ಸಲೀಂ ಅಹ್ಮದ್ ಆಗ್ರಹಿಸಿದರು. 

Bidar ದಲಿತರು ಹಿಂದೂಗಳೇ ನಮ್ಮನ್ಯಾಕೆ ನೀವು ಜೊತೆ ಸೇರಿಸಿಕೊಳ್ಳಲ್ಲ; ಖರ್ಗೆ

ಸಿಎಂ ಬೊಮ್ಮಾಯಿಯವರೇ ಸಂತ ಶಿಶುನಾಳ ಷರೀಫರ ನಾಡಿನ ನೀವು ಸೌಹಾರ್ದತೆ ಕಾಪಾಡಿ: ಅಜಾನ್ ವರ್ಸಸ್ ಸುಪ್ರಭಾತ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಲೀಂ ಅಹ್ಮದ್, ಜನರ ಅಟೆಂನ್ಷನ್ ಡೈವರ್ಟ್ ಮಾಡೋ‌ ಕೆಲಸ ಮಾಡ್ತಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ದ ಹರಿಹಾಯ್ದರು. ಕರ್ನಾಟಕ ಬ್ರಷ್ಟಾಚಾರದ ರಾಜಧಾನಿ ಆಗಿದೆ. ಇಡೀ ದೇಶದ ಮುಂದೆ ತಲೆ ತಗ್ಗಿಸೋ ಹಾಗಾಗಿದೆ. ಈ ಸರ್ಕಾರದಲ್ಲಿ ಹಣ ಕೊಟ್ಟೇ ಪೋಸ್ಟಿಂಗ್ ತಗೊಬೇಕಿದೆ. ಬಿಜೆಪಿಯವರಿಗೆ ಭ್ರಷ್ಟಾಚಾರದ ಬಗ್ಗೆ ಮಾತಾಡೋ ನೈತಿಕತೆ ಇಲ್ಲ.

ಸಿಎಂ ಆಗಬೇಕಾದರೆ 2500 ಕೋಟಿ ಕೊಡಬೇಕು ಅಂತ ಬಿಜೆಪಿ ಹಿರಿಯ ಮುಖಂಡರೇ ಹೇಳಿದ್ದಾರೆ. ಜನರ ಅಭಿವೃದ್ದಿಗಿಂತ ಭ್ರಷ್ಟಾಚಾರದ ಅಭಿವೃದ್ಧಿ ಆಗ್ತಾ ಇದೆ. ಜನ ಬಿಜೆಪಿಯಿಂದ ನೊಂದಿದ್ದಾರೆ. ಕಾನೂನು ಸುವ್ಯವಸ್ಥೆ‌ ಸಂಪೂರ್ಣ ವಿಫಲವಾಗಿದೆ. ನಿರಂತರವಾಗಿ ಸಮಾಜ ಒಡೆಯೋ‌ ಕೆಲಸ‌ ಮಾಡ್ತಾ ಇದಾರೆ.ಸಿಎಂ ಅವರೇ ಕೋಮು ಸಾಮರಸ್ಯಕ್ಕೆ ಹೆಸರಾದ ಶಿಶುನಾಳ ಷರೀಫ, ಗೋವಿಂದ ಭಟ್ಟರ‌ ನಾಡಿ‌ನಿಂದ ಬಂದ ನೀವು ಇಂಥವುಗಳಿಗೆ ಅವಕಾಶ ಕೊಡಬಾರದು. ಕ್ರಮ ತಗೊಳ್ದೇ ಇದ್ರೆ ತಮ್ಮ ಮೇಲೂ ಅಪಾದನೆ ಬರುತ್ತೆ. ದಿನ ನಿತ್ಯ ಹೇಳಿಕೆ ನೀಡುವಂತ ಸಂಘಟನೆಗಳು, ವ್ಯಕ್ತಿಗಳನ್ನು ಬಂಧಿಸಿ ಎಂದು ಸಲೀಂ ಅಹ್ಮದ್ ಆಗ್ರಹಿಸಿದರು.

 

PREV
Read more Articles on
click me!

Recommended Stories

ಬೆಂಗಳೂರು ಕಾಲೇಜಿನಲ್ಲಿ ಹಾಜರಾತಿ ಹಗರಣ; ಅಲಯನ್ಸ್ ವಿವಿ ದೂರು, 6 ಜನರ ವಿರುದ್ಧ ಎಫ್‌ಐಆರ್!
ಚಾಮರಾಜನಗರದಲ್ಲಿ 5 ಹುಲಿಗಳ ಹಾವಳಿ: ರೈತರ ಆಕ್ರೋಶ, ಡ್ರೋನ್ ಶೋಧಕ್ಕೆ ಅರಣ್ಯ ಇಲಾಖೆ ಸಿದ್ಧ!