
ವರದಿ: ಪುಟ್ಟರಾಜು. ಆರ್.ಸಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ
ಚಾಮರಾಜನಗರ (ನ.26): ಇಂದಿನ ದಿನದಲ್ಲಿ ಅಕ್ರಮ ಎಂಬುದು ಎಲ್ಲ ಕಡೆ ಹಾಸೊದ್ದು ಮಲಗಿದೆ. ಎಲ್ಲೆಂದರಲ್ಲಿ ಅಕ್ರಮ ಮಾಡುವ ಜನರೇ ಇದ್ದಾರೆ. ಅದರಲ್ಲೂ ಸರ್ಕಾರಿ ಜಾಗವನ್ನೇ ನಕಲಿ ಹಕ್ಕುಪತ್ರದ ಮೂಲಕ ಕಬಳಿಸಿ ಮಾರಾಟ ಮಾಡುತ್ತಿರುವ ಜಾಲ ಬೆಳಕಿಗೆ ಬಂದಿದೆ. ಇದರಲ್ಲಿ ಸರ್ಕಾರಿ ಅಧಿಕಾರಿಗಳು ಕೈ ಜೋಡಿಸಿದ್ದಾರೆ ಅನ್ನೋ ಗಂಭೀರ ಆರೋಪ ಕೇಳಿಬಂದಿದೆ. ಇದೆಲ್ಲಿ ಅಂತೀರಾ ಹಾಗಾದ್ರೆ ಈ ಸುದ್ದಿ ನೋಡಿ.
ಮೈಸೂರು- ಚಾಮರಾಜನಗರ ಅವಿಭಜಿತ ಜಿಲ್ಲೆ ಬೇರ್ಪಟ್ಟು 25 ವರ್ಷ ಕಳೆದಿದೆ. 1997ರಲ್ಲಿ ಚಾಮರಾಜನಗರ, ಕೊಳ್ಳೇಗಾಲ, ಹನೂರು, ಗುಂಡ್ಲುಪೇಟೆ ತಾಲೂಕುಗಳನ್ನು ನೂತನ ಜಿಲ್ಲೆಗೆ ಸೇರಿಸಲಾಯ್ತು. ಆದ್ರೆ ಖದೀಮರು ಸೃಷ್ಟಿ ಮಾಡಿರುವ ನಕಲಿ ಹಕ್ಕು ಪತ್ರದಲ್ಲಿ 2011ನೇ ಸಾಲಿನಲ್ಲೂ ಕೂಡ ಹನೂರು ಮೈಸೂರು ಜಿಲ್ಲೆಗೆ ಸೇರಿದೆ. ಹೌದು! ಇದು ಆಶ್ಚರ್ಯವಾದ್ರೂ ಸತ್ಯ. ಹನೂರಿನಿಂದ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳುವ ರಸ್ತೆಯಲ್ಲಿರುವ ಆರ್.ಎಸ್. ದೊಡ್ಡಿ ಹುಲ್ಲೇಪುರದ ಸರ್ವೇ ನಂಬರ್ 145/A ಮತ್ತು 145/B ನಲ್ಲಿ ಸುಮಾರು 7 ಎಕರೆಯಷ್ಟು ಎಲ್ಎಫ್ ರಸ್ತೆ,ಹಳ್ಳದ ರಸ್ತೆಯ ಜಾಗವಿದೆ.
ಹಿಂದೂಗಳು ಸಂಘಟನೆಯಾಗದಿದ್ದರೆ ಧರ್ಮಕ್ಕೇ ಅಪಾಯ: ಪ್ರಮೋದ್ ಮುತಾಲಿಕ್
ಈ ಜಾಗವನ್ನು ರಸ್ತೆಗೆ ಬಿಟ್ಟು ಬೇರೆ ಉದ್ದೇಶಕ್ಕೆ ಬಳಸುವಂತಿಲ್ಲ ಅನ್ನೋ ನಿಯಮವಿದೆ. ಆದರೂ ಸಹ ಖದೀಮರು ಇದೇ ಜಾಗವನ್ನು ಬಡವರಿಗೆ ನೀಡುವ ನಿವೇಶನಕ್ಕೆ ಮಂಜೂರಾಗಿದೆ ಎಂದು ಕರ್ನಾಟಕ ಸರ್ಕಾರದಿಂದ ಆಶ್ರಯ ಯೋಜನೆಯಡಿ ನೀಡುವ ನಿವೇಶನ ಹಕ್ಕು ಪತ್ರವನ್ನೆ ನಕಲಿ ಹಕ್ಕು ಪತ್ರ ಸೃಷ್ಟಿ ಮಾಡಿದ್ದಾರೆ. ಸುಮಾರು 138 ಕ್ಕೂ ಹೆಚ್ಚು ನಿವೇಶನದ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿದ್ದಾರೆ. ಇದೇ ವೇಳೆ ಈ ಮೂಲ ದಾಖಲೆಗಳನ್ನು ಪರಿಶೀಲನೆ ನಡೆಸಲು ಹೊರಟರೆ ಇಡೀ ಜಾಗಕ್ಕೆ ಮೂಲ ದಾಖಲೆಗಳಿಲ್ಲವೆಂಬುದು ಆಶ್ಚರ್ಯಕರ ಸಂಗತಿ. ಇನ್ನು ಈ ಜಾಗದಲ್ಲಿರುವ 138 ನಿವೇಶನಗಳ ಪೈಕಿ 69 ಖಾಲಿ ನಿವೇಶನಗಳಿವೆ.
ಇನ್ನುಳಿದ 69 ನಿವೇಶನಗಳಿಗೆ ಪಟ್ಟಣ ಪಂಚಾಯಿತಿಯಿಂದ ಅಕ್ರಮವಾಗಿ ಈ ಸ್ವತ್ತು ಮಾಡಿಕೊಡಲಾಗಿದೆ. ಹನೂರಿನ ಸರ್ದಾರ್ ಎಂಬ ವ್ಯಕ್ತಿ ನಾನು ಸರ್ಕಾರಿ ನೌಕರ ಎಲ್ಲರಿಗೂ ಕೂಡ ಕಡಿಮೆ ದುಡ್ಡಿಗೆ ಸರ್ಕಾರಿ ನಿವೇಶನ ಕೊಡಿಸ್ತೀನಿ ಅಂತಾ ಯಾಮಾರಿಸ್ತಿದ್ದಾನೆ. ನಾನು ಅಧಿಕಾರಿಗಳಿಗೂ ಕೂಡ ಲಂಚ ಕೊಡಬೇಕು. ಆದ್ರಿಂದ ಕಡಿಮೆ ಹಣಕ್ಕೆ ನಿವೇಶನ ಕೊಡಿಸ್ತೀನಿ ಅಧಿಕಾರಿಗಳು ಕೂಡ ನಮ್ಮ ಹತ್ತಿರ ಶಾಮೀಲಾಗಿದ್ದಾರೆ ಅಂತಾ ಮಹಿಳೆಯರನ್ನು ಟಾರ್ಗೆಟ್ ಮಾಡಿ ಮಾರಾಟ ಮಾಡ್ತಿದ್ದಾರೆಂಬ ಆರೋಪ ಮಾಡ್ತಿದ್ದಾರೆ.
ಸುಮಾರು 54 ಜನರ ಆಸ್ತಿ ಮಾಲೀಕರುಗಳಿಗೆ ಪಟ್ಟಣ ಪಂಚಾಯ್ತಿ ವತಿಯಿಂದ ಅನ್ಯಕ್ರಾಂತವಾಗದೆ ಮತ್ತು ನಗರ ಯೋಜನಾ ಪ್ರಾಧಿಕಾರದಿಂದ ಅನುಮೋದನೆ ಆಗದೆ ಇರುವ ಜಮೀನುಗಳನ್ನು ನೇರವಾಗಿ ಖಾತಾ ವಹಿಗೆ ದಾಖಲಿಸಿಕೊಂಡು ಇ-ಸ್ವತ್ತು ಪ್ರಮಾಣಪತ್ರಗಳನ್ನು ನಿಡಿರುವ ಪಟ್ಟಣ ಪಂಚಾಯ್ತಿ ಅಧಿಕಾರಿಯನ್ನು ನಕಲಿ ಹಕ್ಕುಪತ್ರದ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದ್ರೆ ಅವರು ಆರೋಪ ಮಾಡ್ತಿರೋದು ಎಲ್ಲಾ ಸುಳ್ಳು. ದಾಖಲೆ ಕೊಟ್ಟ ನಂತರ ನಾವೂ ಈ ಸ್ವತ್ತು ಮಾಡಿಕೊಟ್ಟಿದ್ದೇವೆ. ಒಂದು ವೇಳೆ ಯಾರಾದರೂ ಅಕ್ರಮ ಮಾಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ತೇವೆ ಅಂತಾರೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮೂರ್ತಿ.
ದಲಿತೆ ನೀರು ಕುಡಿದಿದ್ದಕ್ಕೆ ಟ್ಯಾಂಕ್ ಸ್ವಚ್ಛ, ಗ್ರಾಮಕ್ಕೆ ತೆರಳಿ ಎಲ್ಲಾ ದಲಿತರಿಗೆ ನೀರು ಕುಡಿಸಿದ ಅಧಿಕಾರಿ
ಈ ಬಗ್ಗೆ ಚಾಮರಾಜನಗರ ಜಿಲ್ಲಾಧಿಕಾರಿ ಅವರನ್ನು ಸಂಪರ್ಕಿಸಿದ್ರೆ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಶೀಲನೆ ನಡೆಸುತ್ತೇನೆ ಎಂದು ಹಾರಿಕೆ ಉತ್ತರ ನೀಡುತ್ತಾರೆ. ಒಟ್ಟಾರೆ ಸರ್ಕಾರದ ಹಕ್ಕು ಪತ್ರವನ್ನೆ ನಕಲಿ ಮಾಡಿ ಸರ್ಕಾರದ ಜಾಗವನ್ನೇ ಅಕ್ರಮವಾಗಿ ನಿವೇಶನ ಸೃಷ್ಟಿಸಿದವರ ವಿರುದ್ಧ ಮೇಲೆ ಕ್ರಮ ಕೈಗೊಳ್ಳಲಿ. ಆ ಮೂಲಕ ಕೋಟ್ಯಾಂತರ ರೂಪಾಯಿ ಮೌಲ್ಯದ ಸರ್ಕಾರಿ ಹಳ್ಳ ಎಲ್‌ಎಫ್ ರಸ್ತೆಯನ್ನು ಅಳತೆ ಮಾಡಿ ಜಾಗವನ್ನು ಉಳಿಸಿಕೊಳ್ಳಲಿ ಅಂತಾ ಸಾರ್ವಜನಿಕರು ಆಗ್ರಹಿಸ್ತಿದ್ದಾರೆ.