ಮಣ್ಣಲ್ಲಿ ಮಣ್ಣಾದ ಶ್ರೀಶೈಲಪ್ಪ ಬಿದರೂರು ಸಾಹುಕಾರ್: ಮಾಜಿ‌ ಶಾಸಕರಿಗೆ ಭಾವಪೂರ್ಣ ವಿದಾಯ

By Govindaraj SFirst Published Nov 26, 2022, 8:26 PM IST
Highlights

ಹಿರಿಯ ನಾಯಕ ಶ್ರೀಶೈಲಪ್ಪ ಬಿದರೂರು ಅಂತ್ಯ ಸಂಸ್ಕಾರವನ್ನ ಹುಟ್ಟೂರು ಸೂಡಿಯಲ್ಲಿ‌ ನೆರವೇರಿಸಲಾಯ್ತು. ಅಪಾರ ಅಭಿಮಾನಿಗಳು ಅಗಲಿದ ನಾಯಕನಿಗೆ ಅಂತಿನ ನಮನ ಸಲ್ಲಿಸಿದ್ರು. ಬೆಂಗಳೂರಿನಿಂದ ಬೆಳಗ್ಗೆ ಮೂರು ಗಂಟೆ ಸುಮಾರಿಗೆ ಪಾರ್ಥೀವ ಶರೀರ ಗದಗ ನಗರಕ್ಕೆ ಆಗಮಿಸಿತು.

ಗದಗ (ನ.26): ಹಿರಿಯ ನಾಯಕ ಶ್ರೀಶೈಲಪ್ಪ ಬಿದರೂರು ಅಂತ್ಯ ಸಂಸ್ಕಾರವನ್ನ ಹುಟ್ಟೂರು ಸೂಡಿಯಲ್ಲಿ‌ ನೆರವೇರಿಸಲಾಯ್ತು. ಅಪಾರ ಅಭಿಮಾನಿಗಳು ಅಗಲಿದ ನಾಯಕನಿಗೆ ಅಂತಿನ ನಮನ ಸಲ್ಲಿಸಿದ್ರು. ಬೆಂಗಳೂರಿನಿಂದ ಬೆಳಗ್ಗೆ ಮೂರು ಗಂಟೆ ಸುಮಾರಿಗೆ ಪಾರ್ಥೀವ ಶರೀರ ಗದಗ ನಗರಕ್ಕೆ ಆಗಮಿಸಿತು. ವಿಧಿ ವಿಧಾನಗಳನ್ನ ಮುಗಿಸಿ ಶ್ರೀಶೈಲ ಬಿದರೂರು ಅವರ ನಿವಾಸದಲ್ಲೇ ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು. 11 ಗಂಟೆಯ ನಂತರ ಪಬ್ಲಿಕ್ ಸ್ಕೂಲ್ ಆವರಣಕ್ಕೆ ಪಾರ್ಥೀವ ಶರೀರವನ್ನ ಶಿಫ್ಟ್ ಮಾಡಲಾಯ್ತು. ಸಂಸ್ಥೆಯ ಸಿಬ್ಬಂದಿ, ಅಭಿಮಾನಿಗಳು ಪಾರ್ಥೀವ ಶರೀರದ ದರ್ಶನ ಪಡೆದರು.

ನಂತರ ಅಲ್ಲಿಂದ ರೋಣ ಮೂಲಕ ಸೂಡಿ ಗ್ರಾಮಕ್ಕೆ ದೇಹವನ್ನ ತರಲಾಯ್ತು. ಶಾಲಾ ಆವರಣದಲ್ಲೇ ದೇವಹನ್ನ ಕೆಲಹೊತ್ತು ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿತ್ತು. ಬಿದರೂರು ಅವರ ತೋಟದಲ್ಲಿ ತಂದೆ ತಾಯಿ‌ ಸಮಾದಿ ಪಕ್ಕದಲ್ಲೇ ಸಮಾಧಿ ಮಾಡ್ಲಾಯ್ತು. ವೀರಶೈವ ಲಿಂಗಾಯತ ಪದ್ಧತಿಯಂತೆ ಅಂತ್ಯಕ್ರಿಯೆ ನಡೆಯಿತು. ಜಿಗೇರಿ ಹಿರೇಮಠದ ಗುರುಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಜಿ ಹಾಗೂ ಕೊಡಗಾನೂರ ಮಠದ ಶೇಖರಯ್ಯಜ್ಜನವರ ನೃತ್ವದಲ್ಲಿ‌ನಡೆದ ದಾರ್ಮಿಕ ವಿಧಿ ನೆರವೇರಿದ್ವು. ಶಾಸಕ ಎಚ್.ಕೆ.ಪಾಟೀಲ, ಶಾಸಕ ಕಳಕಪ್ಪ ಬಂಡಿ, ಮಾಜಿ‌ ಸಚಿವ ಬಿಆರ್ ಯಾವಗಲ್ಲ ಅವರಿಂದ ಅಂತಿಮ ನಮನ ಸಲ್ಲಿಸಲಾಯ್ತು.

ಹೃದಯಾಘಾತದಿಂದ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು ವಿಧಿವಶ

ಕಾಂಗ್ರೆಸ್ ಭದ್ರಕೋಟೆಯಲ್ಲೇ ಅಸ್ಥಿತ್ವ ಕಂಡುಕೊಂಡಿದ್ದ ಬಿದರೂರು: ಸೂಡಿ ಮಂಡಳ ಪಂಚಾಯ್ತಿ ಪ್ರಧಾನರಾಗಿ ರಾಜಕೀಯ ಜೀವನ ಆರಂಭಿಸಿದ್ದ ಬಿದರೂರು ಅವರು 1994 ವಿಧಾನಸಭಾ ಚುನಾವಣೆಯಲ್ಲಿ ರೋಣ ಮತಕ್ಷೇತ್ರದಿಂದ ಜನತಾದಳದಿಂದ ಸ್ಪರ್ಧಿಸಿ ಜಯಗಳಿಸಿದ್ರು. ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್. ಪಾಟೀಲ್ ವಿರುದ್ಧ ಗೆಲುವು ಪಡೆದು ರಾಜಕೀಯಕ್ಕೆ ಮುನ್ನುಡಿ ಹಾಕಿದ್ರು. 1999 ಜನತಾದಳ ಇಬ್ಭಾಗವಾದ ಜೆಡಿಎಸ್ ಸೇರ್ಪಡೆಯಾಗಿ ರೋಣ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ರು, ಆದ್ರೆ ಪರಭವಗೊಳ್ಳಬೇಕಾಯ್ತು. 

ನಂತರ ಬದಲಾದ ರಾಜಕೀಯ ಸನ್ನಿವೇಶದಲ್ಲಿ 2005 ರಲ್ಲಿ ಭಾರತೀಯ ಜನತಾ ಪಕ್ಷ ಸೇರ್ಪಡೆಯಾಗಿ ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷರಾದರು. 2008ರಲ್ಲಿ ಗದಗ ವಿಧಾನಸಭಾ ಮತಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್ ಪಕ್ಷದ ಎಚ್.ಕೆ. ಪಾಟೀಲರವರನ್ನು ಪರಾಭವಗೊಳಿಸಿ ಗೆಲುವು ಪಡೆದರು. ಮಾಜಿ ಸಚಿವ ಎಚ್ ಕೆ ಪಿ ಅವರನ್ನ ಮಣಿಸಿ ಸಂಚಲನ ಮೂಡಿಸಿದ್ರು. ಆದ್ರೆ 2013ರಲ್ಲಿ ಗದಗ ವಿಧಾನಸಭಾ ಮತಕ್ಷೇತ್ರದಿಂದ ಸ್ಪರ್ಧಿಸಿ ಹೀನಾಯವಾಗಿ ಸೋತರು. ನಂತ್ರ ಕಾಂಗ್ರೆಸ್ ಸೇರಿ 2023 ರ ವಿಧಾನಸಭಾ ಚುನಾವಣೆಯಲ್ಲಿ‌ ಗದಗ ಅಥವಾ ರೋಣ ಮತಕ್ಷೇತ್ರದಿಂದ ಸ್ಪರ್ಧಿಸಲು ಯೋಚಿಸಿದರು.

ಬಿಜೆಪಿ, ಕಾಂಗ್ರೆಸ್ ಜೆಡಿಎಸ್ ಪಕ್ಷದಲ್ಲಿ ಪ್ರಭಾವ ಹೊಂದಿದ್ದ ನಾಯಕ: ಅಜಾತ ಶತ್ರು, ಸಾಹುಕಾರ್ ಅಂತಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಶ್ರೀಶೈಲಪ್ಪ ಬಿದರೂರು ಮೂರೂ ಪಕ್ಷದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಜನತಾ ದಳದಿಂದ ರಾಜಕೀಯಕ್ಕೆ ಎಂಟ್ರಿಯಾಗಿ ತಮ್ಮದೆ ಛಾಪನ್ನ ಮೂಡಿಸಿದ್ರು. ಜನತಾ ಪರಿವಾರದ ರಾಮಕೃಷ್ಣ ಹೆಗಡೆ, ಎಸ್‌.ಆರ್‌.ಬೊಮ್ಮಾಯಿ ಅವರೊಂದಿಗೆ ಸಂಪರ್ಕ ಹೊಂದಿದ್ರು. ಬಿಜೆಪಿಯಲ್ಲಿದ್ದಾಗ ಯಡಿಯೂರಪ್ಪ ಅವರ ಜೊತೆಗೂ ಅತ್ಯಂತ ಆಪ್ತರಾಗಿದ್ದವರು, 2012 ರಲ್ಲಿ ಕೆಜೆಪಿ ಹಾವೇರಿ ಸಭೆಯಲ್ಲಿ ಕಾಣಿಸಿಕೊಂಡಿದ್ದರೂ ಭಾರತೀಯ ಜನತಾ ಪಕ್ಷದಲ್ಲೇ ಉಳಿದರು.

ಪಂಚಮಸಾಲಿಗೆ 2ಎ ಮೀಸಲಾತಿ ನಂತರವೇ ಹರಜಾತ್ರೆ ಆಚರಣೆ: ವಚನಾನಂದ ಶ್ರೀ

ಬಿಎಸ್‌ವೈ ಜೊತೆ ಒಳ್ಳೆಯ ಬಾಂಧವ್ಯ ಹೊಂದಿದ್ದರು. ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ಪ್ರಭಾವಿ ನಾಯಕರೊಂದಿಗೂ ಒಡನಾಟ ಹೊಂದಿದ್ದರು. 60 ವರ್ಷದ ಶ್ರೀಶೈಲಪ್ಪ ಬಿದರೂರು ತಂಬು ಸಂಸಾರವನ್ನು ಅಗಲಿದ್ದಾರೆ. ‌ಪತ್ನಿ ಮಹೇಶ್ವರಿ, ಪುತ್ರರಾದ ವಿಕ್ರಮ, ಅಕ್ಷಯ, ಸಹೋದರ, ನಾಲ್ವರು ಸಹೋದರಿಯರನ್ನು ಅಗಲಿದ್ದಾರೆ.. ಅಗಲಿದ ನಾಯಕನಿಗೆ ಸಚಿವ ಸಿ ಸಿ ಪಾಟೀಲ್, ಶಾಸಕ ಎಚ್ ಕೆ ಪಾಟೀಲ್, ಶಿವಾನಯ ಮಠದ ಶ್ರೀಗಳು, ಮುಕ್ತಿ ಮಂದಿರದ ಶ್ರೀಗಳು, ಸೇರಿದಂತೆ ಸಾವಿರಾರು ಜನರು ಅಂತಿಮ ಗೌರವ ಸಲ್ಲಿಸಿದ್ದಾರೆ.

click me!