KSRTC ಸಿಬ್ಬಂದಿಗೆ ಸಂತಸದ ಸುದ್ದಿ ನೀಡಿದ ಸಾರಿಗೆ ಸಚಿವ ರಾಮುಲು

By Kannadaprabha News  |  First Published Jan 2, 2022, 11:58 AM IST

*    ಸಾರಿಗೆ ಸಿಬ್ಬಂದಿಗೆ ಇನ್ಮುಂದೆ ಪ್ರತಿ ತಿಂಗಳೂ ವೇತನ
*    ಉಕ ಭಾಗದ ಹಳೆ ಬಸ್‌ ಮರಳಿ ಪಡೆದು ಶೀಘ್ರ ಹೊಸ ಬಸ್‌ ನೀಡಲಾಗುವುದು
*    ಯುವಕರಿಗೆ ಉಚಿತವಾಗಿ ವಾಹನದ ಪರವಾನಗಿ ನೀಡಬೇಕು 
 


ಜಮಖಂಡಿ(ಜ.02): ಸಾರಿಗೆ ಇಲಾಖೆಯ ವೇತನ ನೀಡಲು ಮೊದಲು ತೊಂದರೆ ಇತ್ತು. ಈಗ ಎಲ್ಲ ಸರಿಪಡಿಸಲಾಗಿದೆ. ಇನ್ನು ಮುಂದೆ ಪ್ರತಿ ತಿಂಗಳು ವೇತನ ನೀಡಲಾಗುತ್ತದೆ ಎಂದು ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ಶ್ರೀರಾಮಲು(B Sriramulu) ಹೇಳಿದ್ದಾರೆ. 

ಇಲ್ಲಿನ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಆವರಣದಲ್ಲಿ ನೂತನ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥದ ಅಡಿಗಲ್ಲು ಸಮಾರಂಭ ಭೂಮಿ ಪೂಜೆ ಮಾಡಿ ಮಾತನಾಡಿದ ಅವರು, ಸಾರಿಗೆ ಇಲಾಖೆ(Transport Department) ನೌಕರ ವರ್ಗ ಮುಷ್ಕರದಲ್ಲಿ(Strike) ತೊಡಗಬೇಡಿ. ಇದರಿಂದ ನಿಮಗೆ ತೊಂದರೆ ಉಂಟಾಗುತ್ತದೆ. ಇನ್ನು 4 ವಾರಗಳಲ್ಲಿ ವರ್ಗಾವಣೆ(Transfer) ಸೇರಿದಂತೆ ವಿವಿಧ ಶಿಕ್ಷೆಗೆ ಒಳಪಟ್ಟವರನ್ನು ಮರಳಿ ತೆಗೆದುಕೊಳ್ಳಲಾಗುವುದು ಎಂದ ಅವರು, ಉತ್ತರ ಕರ್ನಾಟಕ(North Karnataka) ಭಾಗದಲ್ಲಿ ಹಳೆ ಬಸ್‌ಗಳನ್ನು ಮರಳಿ ಪಡೆದು ಒಳ್ಳೆಯ ಬಸ್‌ಗಳನ್ನು ಶೀಘ್ರದಲ್ಲೇ ಓಡಿಸಲಾಗುತ್ತದೆ ಎಂದು ಹೇಳಿದರು.

Latest Videos

undefined

Mekedatu Politics: ಡಿ.ಕೆ.ಶಿವಕುಮಾರ್‌ ಫೋಟೋ ಶೂಟ್ ಬಗ್ಗೆ ವ್ಯಂಗ್ಯವಾಡಿದ ಶ್ರೀರಾಮುಲು

ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಸಿದ್ದು ಸವದಿ(Siddu Savadi) ಮಾತನಾಡಿ, ವಾಹನವನ್ನು ಖರೀದಿಸಿದವರಿಗೆ ಕಡ್ಡಾಯವಾಗಿ ವಾಹನ ಪರವಾನಗಿ ಮಾಡಿಕೊಡಬೇಕು. ಹೆಚ್ಚು ಲೋಡ್‌ ತೆಗೆದುಕೊಂಡು ಸಂಚರಿಸುವವರಿಗೆ ಹೊಸ ಕಾನೂನು ಜಾರಿಗೆ ತರಬೇಕು. ಅದನ್ನು ಬಿಟ್ಟು ವಾಹನ ಸವಾರರಿಗೆ ಅಧಿಕಾರಿಗಳು ಕಿರುಕುಳ ಮಾಡಬಾರದು. ಈ ಭಾಗದಿಂದ ಬೆಂಗಳೂರಿಗೆ(Bengaluru) ಹೋಗಲು ಎರಡು ಹೊಸ ಬಸ್‌ ಪ್ರಾರಂಭಿಸಬೇಕು. ರಬಕವಿ-ಬನಹಟ್ಟಿಯ ಬಸ್‌ ನಿಲ್ದಾಣ ಬೀಳುವ ಹಂತದಲ್ಲಿವೆ. ಕೂಡಲೇ ಹೊಸ ಬಸ್‌ನಿಲ್ದಾಣ ನಿರ್ಮಾಣಕ್ಕೆ ಮಂಜೂರಾತಿ ನೀಡಬೇಕು ಎಂದು ಹೇಳಿದರು.

ಶಾಸಕ ಆನಂದ ನ್ಯಾಮಗೌಡ(Anand Nyamagouda) ಮಾತನಾಡಿ, ಜಮಖಂಡಿ(Jamakhandi) ನಗರದಲ್ಲಿ 4 ಸಿಟಿ ಬಸ್‌ ಪ್ರಾರಂಭಿಸಬೇಕು. ಸಾವಳಗಿ ಹೋಬಳಿಯಲ್ಲಿ ಬಸ್‌ ನಿಲ್ದಾಣಕ್ಕೆ 3 ಕೋಟಿ ಅನುದಾನ ಬಿಡುಗಡೆ ಮಾಡಿ, ಮಂಜೂರಾತಿ ನೀಡಬೇಕು ಹಾಗೂ ಜಮಖಂಡಿ ಬಸ್‌ ನಿಲ್ದಾಣದ 2ನೇ ಹಂತದ ಅಭಿವೃದ್ಧಿಗೆ 4 ಕೋಟಿ ಅನುದಾನ ನೀಡಬೇಕು.ಯುವಕರಿಗೆ ಉಚಿತವಾಗಿ ವಾಹನದ ಪರವಾನಗಿ ನೀಡಬೇಕು ಎಂದರು.

Karnataka Transport Department : 4 ವಾರದೊಳಗೆ ಸಾರಿಗೆ ನೌಕರರ ಮರುನೇಮಕ

ಸಂಸದ ಪಿ.ಸಿ.ಗದ್ದಿಗೌಡರ(PC Gaddigoudar) ಮಾತನಾಡಿದರು. ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಜಿ.ಎಸ್‌.ನ್ಯಾಮಗೌಡ, ನಗರಸಭೆ ಅಧ್ಯಕ್ಷ ಸಿದ್ದು ಮೀಸಿ, ಯಮನೂರ ಮೂಲಂಗಿ, ರಾಜು ಕಲಕಂಬ, ಅಪರ ಸಾರಿಗೆ ಆಯುಕ್ತ ಮಾರುತಿ ಸಾಂಬ್ರಾಣಿ, ಅಭಿಯಂತರ ಎಚ್‌.ಎಂ.ನಾಗರಾಜಮೂರ್ತಿ, ಎಸಿ ಡಾ.ಸಿದ್ದು ಹುಲ್ಲೋಳ್ಳಿ, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಆರ್‌.ಎಲ್‌. ಹೊಸಮನಿ, ಜಗದೀಶ ಗುಡಗುಂಟಿ ಯೋಗಪ್ಪ ಸವದಿ, ಎಸ್‌.ಎಂ. ತೀರ್ಥ ಅನೇಕರಿದ್ದರು. ಬೆಳಗಾವಿ ವಿಭಾಗದ ಜಂಟಿ ಸಾರಿಗೆ ಆಯುಕ್ತೆ ಎಂ.ಶೋಭಾ ಸ್ವಾಗತಿಸಿ-ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್‌.ವ್ಹಿ. ಅಸ್ಕಿ ನಿರೂಪಿಸಿದರು.

ಡಿ.ಕೆ.ಶಿವಕುಮಾರ್‌ ಫೋಟೋ ಶೂಟ್ ಬಗ್ಗೆ ವ್ಯಂಗ್ಯವಾಡಿದ ಶ್ರೀರಾಮುಲು

ಬಾಗಲಕೋಟೆ: ಮೇಕೆದಾಟು (Mekedatu) ಯೋಜನೆಗೆ ಆಗ್ರಹಿಸಿ ರಾಜ್ಯ ಕಾಂಗ್ರೆಸ್ ಜನವರಿ 9 ರಿಂದ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದೆ. ಈ ಕುರಿತಾಗಿ ಮಾತನಾಡಿರುವ ಸಾರಿಗೆ ಸಚಿವ ಶ್ರೀರಾಮುಲು (Sriramulu) ಡಿಕೆಶಿ ಫೋಟೋ ಶೂಟ್ ಬಗ್ಗೆ ವ್ಯಂಗ್ಯವಾಡಿದ್ದಾರೆ. ಮೇಕೆದಾಟು ಪಾದಯಾತ್ರೆ ಮಾಡಬೇಕು ಅಂತ ಪಾಪ ಎಲ್ಲೋ ಶೂಟಿಂಗ್ ಮಾಡ್ತಿದ್ದರಂತೆ. ಫೇಸ್ಬುಕ್ ವಾಟ್ಸಾಪ್ ನಲ್ಲಿ ಟ್ರೋಲ್ ಮಾಡ್ಕೊಂಡು ಲಾಭ ಪಡಿಬೇಕು ಅಂತ ಶೂಟಿಂಗ್‌ನಲ್ಲಿ ಬ್ಯುಸಿ ಆಗಿದ್ದಾನೆ. ಕೆಲಸ ಇಲ್ಲದ ಟೈಮ್ ನಲ್ಲಿ 2023ಕ್ಕೆ ಅಧಿಕಾರಕ್ಕೆ ಬರಬೇಕು ಅಂತ ಹಗಲು ಕನಸು ಕಾಣುತ್ತಿದ್ದಾರೆ. ಒಂದು ಕಡೆ ಶೂಟಿಂಗ್ ಮಾಡೋರು ಶೂಟಿಂಗ್ ಮಾಡ್ತಿದ್ದಾರೆ. ಇನ್ನೊಬ್ಬರು ಮುಖ್ಯಮಂತ್ರಿ ಆಗ್ತೀನಿ ಅನ್ನೋರು ಯೋಜನೆಗಳ ಮೇಲೆ ಯೋಜನೆ ಘೋಷಣೆ ಮಾಡ್ತಿದ್ದಾರೆ.
 

click me!