ಗಣಪತಿ ಕೆರೆಗೆ ಕಾಯಕಲ್ಪ, ಹಾಲಪ್ಪ-ಕಾಗೋಡು ಜತೆಯಾದ್ರಪ್ಪ!

By Suvarna News  |  First Published Jan 12, 2020, 10:25 PM IST

ಸರ್ಕಾರದ ಅನುದಾನಕ್ಕೆ ಕಾಯದ ಶಾಸಕ|  ಕೆರೆಯ ಹೂಳೆತ್ತಿದ ಹಾಲಪ್ಪ| ಶಾಸಕರಿಗೆ ಸಾರ್ವಜನಿಕರ ಸಹಕಾರ| ಹಾಲಪ್ಪ ಮತ್ತು ಕಾಗೋಡು ತಿಮ್ಮಪ್ಪ ಜಂಟಿ ಕಾರ್ಯಾಚರಣೆ


ಶಿವಮೊಗ್ಗ(ಜ. 12)  ಸ್ವಚ್ಛ ಭಾರತ ಅಭಿಯಾನದ ಹೆಸರಿನಲ್ಲಿ ಮಾಧ್ಯಮಗಳ ಕ್ಯಾಮರ ಮುಂದೆ ಪೋಸ್  ಕೊಟ್ಟು ಸ್ವಚ್ಛತಾ ಕಾರ್ಯ ನಡೆಸಿದ ರಾಜಕಾರಣಿಗಳು ನಾಚುವಂತೆ ಶಾಸಕರೊಬ್ಬರು ತಮ್ಮೂರಿನ ಪ್ರಸಿದ್ಧ ಕುಡಿಯುವ ನೀರಿನ ಕೆರೆಯನ್ನು ಸರ್ಕಾರದ ಅನುದಾನಕ್ಕೆ ಕಾಯದೇ ಸಾರ್ವಜನಿಕರ ಶ್ರಮದಾನದ ಮೂಲಕ ಹೂಳೆತ್ತಿ ಪರಿಶುದ್ಧವನ್ನಾಗಿಸಿದ್ದಾರೆ.  ಇದು ಎಲ್ಲಂತೀರಾ? ಯಾರು ಈ ಶಾಸಕ ಎಂಬ ಕುತೂಹಲವೇ?. ಹಾಗಾದ್ರೆ ಈ ವರದಿ ನೋಡಿ 

ಕೇವಲ ಪ್ರಚಾರದ ಉದ್ದೇಶದಿಂದ ಕ್ಯಾಮರಾ ಮುಂದೆ ಸ್ವಚ್ಛತೆ ನಡೆಸಿದಂತೆ ಮಾಡಿ ಕಣ್ಮರೆಯಾದ ರಾಜಕಾರಣಿಗಳ ನಡವಳಿಕೆ ಕಂಡು ಬೇಸರ ಮೂಡುವುದು ಸಹಜ . ಹೀಗಿರುವಾಗ ಸರ್ಕಾರದ ಅನುದಾನಕ್ಕೆ ಕಾಯದೇ ಶಾಸಕರೊಬ್ಬರು ಸಾರ್ವಜನಿಕರ ಶ್ರಮದಾನದ ಮೂಲಕ ತಮ್ಮೂರಿನ ಕೆರೆಯ ಹೂಳೆತ್ತಿ ಪರಿಶುದ್ಧವನ್ನಾಗಿಸುವ ಕೈಂಕರ್ಯಕ್ಕೆ ಮುನ್ನುಡಿ ಬರೆದಿದ್ದಾರೆ.  ಜನಪ್ರತಿನಿಧಿಗಳಿಗೆ ಮಾದರಿಯಾಗುವಂತೆ ಕೆರೆಯ ಪುನಶ್ಚೇತನಕ್ಕೆ ಕೈ ಹಾಕಿದವರು ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ.

ಸಾಗರ ಪಟ್ಟಣದ ಪುರಾಣ ಪ್ರಸಿದ್ಧ ಗಣಪತಿ ಕೆರೆ ಎಂದೇ ಹೆಸರಾಗಿರುವ ಸದಾಶಿವ ಸಾಗರ ಕೆರೆಯ ಅಭಿವೃದ್ಧಿಗೆ ಕೈ ಹಾಕಿದ್ದಾರೆ. ಕೆಳದಿ ಮಹಾರಾಜರ ಕಾಲದಲ್ಲಿ ಕಟ್ಟಿದ ಕೆರೆಯೇ ಈ ಸದಾಶಿವ ಸಾಗರ ಯಾನೆ ಗಣಪತಿ ಕೆರೆ ಈ ಕೆರೆಯ ಮೇಲಿರುವ ಪಟ್ಟಣಧ ಕಾರಣಕ್ಕಾಗಿಯೇ ಸಾಗರ ಪಟ್ಟಣವೆಂದು ಹೆಸರು ಬಂತು ಎನ್ನಲಾಗಿದೆ. ಈ ಗಣಪತಿ ಕೆರೆಗೆ ಅಕ್ಕಪಕ್ಕದ 7 ಕೆರೆಯ ನೀರು ಹರಿದು ಬರುತ್ತದೆ. ಯಾವಾಗ ಕೆರೆ ಬತ್ತುತ್ತದೆಯೋ ಆವಾಗ ಸಾಗರಕ್ಕೆ ಬರ ಬರಲಿದೆ ಎಂಬ ಐತಿಹ್ಯವಿದೆ. ಇಂತಹ ಕೆರೆಯನ್ನು ಶಾಸಕರಾದ ಮೇಲೆ ಹರತಾಳು ಹಾಲಪ್ಪ ಪುನಶ್ಚೇತಕ್ಕೆ ಮುನ್ನುಡಿ ಬರೆದಿದ್ದಾರೆ. 

Tap to resize

Latest Videos

undefined

ಹಾಲಪ್ಪ ಏಕಾಂಗಿ ಧರಣಿ ಕುಳಿತಿದ್ದು ಏಕೆ?

ಗಣಪತಿ ಕೆರೆ ಸರಿ ಸುಮಾರು 24 ಎಕರೆ 37 ಗುಂಟೆ ಎಕರೆಯಲ್ಲಿ ಕೆರೆ ಇದೆ. ಕೆರೆಯ ಮಧ್ಯೆ ರಾಷ್ಟ್ರೀಯ ಹೆದ್ದಾರಿ - 206 ಹಾದು ಹೋಗಿ ಅದರಲ್ಲಿನ 6 ಎಕರೆ ಅಭಿವೃದ್ಧಿಯ ಕಾರಣಕ್ಕೆ ಒತ್ತುವರಿಗೊಳಗಾಯಿತು. ನಂತರ ಕೆರೆಯ ಸುತ್ತಮುತ್ತ, ಮೋಟಾರ್ ಸಂಸ್ಥೆ, ಹೋಟೆಲ್ ಗಳಂತಹ ವಾಣಿಜ್ಯ ಸಂಕೀರ್ಣ, ಮಠ ಮಾನ್ಯಗಳು, ಮಸೀದಿಗಳು ಸಹ ಕೆರೆ ಒತ್ತುವರಿ ಮಾಡಿಕೊಂಡಿವೆ ಎಂಬ ಕೂಗು ಕೇಳಿಬರುತ್ತಿದೆ. ಹೀಗಿರುವಾಗ ಕೆರೆಯ "ಜಲದಕಣ್ಣು" ತೆರೆಯಿಸಿ ಇರುವ ಕೆರೆಯ ಕಸ ತೆಗೆದು ಪಟ್ಟಣದ ಕೆಸರುಗಳು ಮಳೆಗಾಲದಲ್ಲಿ ಕೆರೆಗೆ ಸೇರದಂತ ಕೆಲಸ ಮಾಡಲು ಶಾಸಕರು ಫಣತೊಟ್ಟಿದ್ದಾರೆ.

ಕೆರೆ ಅಭಿವೃದ್ಧಿಗೆ ಶಾಸಕರು ಫೋಸ್ ಕೊಡದೆ ಸಾರ್ವಜನಿಕರನ್ನ ಸೇರಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಈ ಕೆರೆಗೆ ಸಾರ್ವಜನಿಕರ ಸಹಭಾಗಿತ್ವ ಅತ್ಯಾಮೂಲ್ಯವಾಗಿದೆ. ಅತ್ಯಾಮೂಲ್ಯದ ಕಾಣಿಕೆ ನೀಡುವ ಹಿನ್ನಲೆಯಲ್ಲಿ ಇಂದು ಪಟ್ಟಣದ ಜನ ಪಕ್ಷ ಜಾತಿ ಮತ ಭೇಧ ಮರೆತು ಕೆರೆ ಅಭಿವೃದ್ಧಿಗೆ ಕೈ ಜೋಡಿಸಿದ್ದಾರೆ. ಮುಂದೆ ಕೆರೆಯಲ್ಲಿ ಬೋಟಿಂಗ್ ವಾಕಿಂಗ್ ಪಾತ್, ಕೆರೆ ಮಣ್ಣು ಸವುಕಳಿ ತಡೆ, ಶಿಥಿಲಿಗೊಂಡ ತೂಬುಗಳನ್ನು ಅಭಿವೃದ್ಧಿ ಪಡಿಸಲು ಸರ್ಕಾರದ ಅನುದಾನ ಇನ್ನಷ್ಟೇ ಬಿಡುಗಡೆಯಾಗ ಬೇಕಿದೆ. 

ಒಟ್ಟಿನಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ಕಾಮಗಾರಿ ನಡೆಸ ಬೇಕಾಗಿದ್ದ ಗಣಪತಿ ಕೆರೆಯನ್ನು ಕೇವಲ ನಾಗರಿಕ ಸಂಘಟನೆಗಳು ಶ್ರಮದಾನದ ಮೂಲಕ ನಯಾಪೈಸೆ ವ್ಯಯ ಮಾಡದೇ ಸ್ವಚ್ಛಗೊಳಿಸಿದ್ದಾರೆ. ಈ ಮೂಲಕ ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಮೂಲವನ್ನು ಪಡೆದುಕೊಂಡು ರಾಜ್ಯದ ಇತರ ಜನಪ್ರತಿನಿಧಿಗಳಿಗೂ ಶಾಸಕ ಹರತಾಳು ಹಾಲಪ್ಪ ಮಾದರಿಯಾಗಿದ್ದಾರೆ.

click me!