
ಮಂಡ್ಯ(ಜ.12): ಒಂದು ಸಿನಿಮಾವನ್ನು ಅಬ್ಬಬ್ಬಾ ಅಂದ್ರೆ ಎಷ್ಟು ಸಲ ನೋಡಬಹುದು..? ಫೇವರೇಟ್ ನಟ ಎಂದಾದರೆ ಹತ್ತಿಪ್ಪತ್ತು ಸಲ ನೋಡಬಹುದು. ಅದೂ ಕಷ್ಟವೇ. ಆದರೆ ಮಂಡ್ಯದಲ್ಲಿ ರೌಡಿ ಶೀಟರ್ ಒಬ್ಬ 100 ಬಾರಿ ಜಂಗ್ಲಿ ಸಿನಿಮಾ ವೀಕ್ಷಿಸಿದ್ದಾನೆ.
ಜಂಗ್ಲಿ ಟೈಟಲ್‌ಗಾಗಿ 100 ಬಾರಿ ಜಂಗ್ಲಿ ಸಿನಿಮಾ ನೋಡಿದ ರೌಡಿ ಶೀಟರ್ ಸದ್ಯ ಸೌಂಡ್ ಮಾಡ್ತಿದ್ದಾನೆ. ತನ್ನನ್ನು ಜಂಗ್ಲಿ ಅಣ್ಣ ಎಂದು ಕರೆಯಬೇಕು ಎಂದು ಉದ್ದೇಶಪೂರ್ವಕವಾಗಿ 100 ಬಾರಿ ಸಿನಿಮಾ ವೀಕ್ಷಣೆ ಮಾಡಿದ್ದಾರೆ.
ಮಂಡ್ಯದ ಶ್ರೀರಂಗನಾಥ ದೇವಸ್ಥಾನ ಹುಂಡಿಯಲ್ಲಿ ಅಮೆರಿಕನ್ ಡಾಲರ್..!
ಮಂಡ್ಯ ನಗರ ರೌಡಿ ಶೀಟರ್ ಶೇಖರ್ 100 ಬಾರಿ ಜಂಗ್ಲಿ ಸಿನಿಮಾ ವೀಕ್ಷಣೆ ಮಾಡಿದ ವ್ಯಕ್ತಿ. ಮಂಡ್ಯ ನಗರ ರೌಡಿ ಪೇರಾಡ್‌ನಲ್ಲಿ ಎಸ್‌ಪಿ ಅವರ ಮುಂದೆ ಹೇಳಿದ ಜಂಗ್ಲಿ ಶೇಖರಾ ಈ ಸತ್ಯವನ್ನು ಬಿಚ್ಚಿಟ್ಟಿದ್ದಾನೆ. ಟೈಟಲ್‌ಗಾಗಿ ನೂರು ಸಾರಿ ಸಿನಿಮಾ ನೋಡದ್ದೀಯಾ...? ಏನ್ ತಿಕ್ಕಲರೋ ನೀವು ಎಂದು ಪ್ರಶ್ನಿಸಿದ್ದಾರೆ.
ತಲೆ ಕೆಟ್ಟೋಗಲಿಲ್ವಾ ನೂರು ಸಾರಿ ನೋಡೋಕೆ ಎಂದು ಎಸ್‌ಪಿ ಪರಶುರಾಮ್ ರೌಡಿ ಶೀಟರ್‌ಗೆ ಪ್ರಶ್ನೆ ಮಾಡಿದ್ದಾರೆ. ಎಲ್ಲರೂ ನಿಂಗೆ ಅಣ್ಣ ಅಂತಾ ಕರಿಬೇಕಾ..? ಡಾ.ರಾಜ್‌ಕುಮಾರ್ ಅವರು ಇದ್ದರು. ಅವರು ನಂಗೆ ಯಾರು ಅಣ್ಣ ಕರೀರಿ ಅಂತಾ ಹೇಳಲೇ ಇಲ್ಲ. ಅದ್ರೆ ಎಲ್ಲಾರೂ ಅವರನ್ನ ಅಣ್ಣಾವ್ರು ಅಂತಾರೆ ಎಂದಿದ್ದಾರೆ.
ಉಗ್ರರ ಜೊತೆ ಸಂಪರ್ಕ ಹೊಂದಿದ್ದ ಗ್ಯಾಂಗ್‌ಸ್ಟರ್ ಪರಾರಿ: ಮಂಗಳೂರಲ್ಲಿ ಹೈಅಲರ್ಟ್
ಅಣ್ಣಾವ್ರ ಹಾಗೆ ಬೆಳೆಯಬೇಕು. ಅವರ ರೀತಿ ಎಲ್ಲರಿಗೂ ಮಾದರಿ ಆಗಬೇಕು. ಅದನ್ನು ಬಿಟ್ಟು ಎಲ್ಲರಿಗೂ ಅಣ್ಣ ಅನ್ನು ಅಂತಾ ಹೆದರಿಸುತ್ತೀಯಾ..? ಸರಿಯಾಗಿ ಬದುಕು ಎಂದು ಎಸ್‌ಪಿ ಪರಶುರಾಮ್ ವಾರ್ನಿಂಗ್ ಕೊಟ್ಟಿದ್ದಾರೆ.