'HDK ಎಲ್ಲಾ CD ಬಿಡುಗಡೆ ಮಾಡ್ಲಿ ಯಾರು ಬೆತ್ತಲಾಗ್ತಾರೋ ಗೊತ್ತಾಗುತ್ತೆ'

Suvarna News   | Asianet News
Published : Jan 12, 2020, 03:02 PM IST
'HDK ಎಲ್ಲಾ CD ಬಿಡುಗಡೆ ಮಾಡ್ಲಿ ಯಾರು ಬೆತ್ತಲಾಗ್ತಾರೋ ಗೊತ್ತಾಗುತ್ತೆ'

ಸಾರಾಂಶ

ಸಿದ್ದರಾಮಯ್ಯ, ಕುಮಾರಸ್ವಾಮಿ ಮುಖ್ಯಮಂತ್ರಿಗಳಾದ್ದವರು| ದೇವೇಗೌಡ್ರು ಸಿಎಂ ಹಾಗೂ ಪ್ರಧಾನಿಯಾದಂತವರು ಅಂತವರ ಬಾಯಲ್ಲಿ ಇಂತಹ ಮಾತು ಬರಬಾರದಿತ್ತು| ಪೊಲೀಸ್ ಅಧಿಕಾರಿಗಳು ಸರ್ಕಾರಿ ಅಧಿಕಾರಿಗಳು. ಕಾನೂನು ಸುವ್ಯವಸ್ಥೆ ಹದ್ದುಬಸ್ತಿನಲ್ಲಿಡಲು ಕ್ರಮಕೈಗೊಂಡಿದ್ದಾರೆ|  

ಬಾಗಲಕೋಟೆ(ಜ.12): ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಎಲ್ಲಾ ಸಿಡಿಗಳನ್ನು ಮೊದಲು ಬಿಡುಗಡೆ ಮಾಡಲಿ, ಯಾರು ಬೆತ್ತಲಾಗುತ್ತಾರೋ, ಯಾರು ಬಟ್ಟೆ ಉಟ್ಟುಕೊಂಡಿರ್ತಾರೋ ಅನ್ನೋದು ಗೊತ್ತಾಗುತ್ತೆ ಎಂದು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೆಚ್‌ಡಿಕೆ ವಿರುದ್ಧ ಹರಿಹಾಯ್ದಿದ್ದಾರೆ. 

ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರ ಹೇಳಿಕೆಗೆ ಭಾನುವಾರ ನಗರದಲ್ಲಿ ಮಾಧ್ಯಮದರಿಗೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ, ಕುಮಾರಸ್ವಾಮಿ ಮುಖ್ಯಮಂತ್ರಿಗಳಾದ್ದವರು, ದೇವೇಗೌಡರು ಸಿಎಂ ಹಾಗೂ ಪ್ರಧಾನಿಯಾದಂತವರು. ಅಂತವರ ಬಾಯಲ್ಲಿ ಇಂತಹ ಮಾತು ಬರಬಾರದಿತ್ತು. ಪೊಲೀಸ್ ಅಧಿಕಾರಿಗಳು ಸರ್ಕಾರಿ ಅಧಿಕಾರಿಗಳು. ಕಾನೂನು ಸುವ್ಯವಸ್ಥೆ ಹದ್ದುಬಸ್ತಿನಲ್ಲಿಡಲು ಕ್ರಮಕೈಗೊಂಡಿದ್ದಾರೆ. ಪೊಲೀಸರ ನೈತಿಕತೆಯನ್ನು ಪ್ರಶ್ನೆ ಮಾಡಬಾರದು. ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸುವಂತಾಗಬಾರದು. ಏನಾದರೂ ಸಾಕ್ಷಿಗಳಿದ್ದರೆ ನೇರವಾಗಿ ತನಿಖಾ ಆಯೋಗಕ್ಕೆ ಸಾಬೀತು ಪಡಿಸಲಿ ಎಂದು ಹೇಳಿದ್ದಾರೆ.

'ಎಲ್ಲ CDಗಳು ಬಯಲಾದರೆ ಬಿಜೆಪಿಗರು ಬೆತ್ತಲಾಗುತ್ತಾರಷ್ಟೇ' 

ಸಚಿವ ಸಂಪುಟ ಕಸರತ್ತು ನಡೆದಿರುವ ವಿಚಾರದ ಬಗ್ಗೆ ಮಾತನಾಡಿದ ಅವರು, ನಮ್ಮ ರಾಷ್ಟ್ರೀಯ ನಾಯಕರಿಗೆ ಬಿಡುವು ಇರಲಿಲ್ಲ. ಚುನಾವಣೆ, ಸರ್ಕಾರ ರಚನೆ ಮತ್ತೊಂದು ಮಗದೊಂದು ಪುರುಸೊತ್ತು ಇರಲಿಲ್ಲ ಹೀಗಾಗಿ ಜ.18ಕ್ಕೆ ರಾಷ್ಟ್ರೀಯ ಅಧ್ಯಕ್ಷರು ರಾಜ್ಯಕ್ಕೆ ಬರುತ್ತಿದ್ದಾರೆ, ಅಗ ಸಿಎಂ ಈ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಅದೊಂದು ಸಹಜ ಪ್ರಕ್ರಿಯೆ ನಡೆಯುತ್ತೇ ಎಂದರು. 

ಧೈರ್ಯವಿದ್ದರೆ ತಜ್ಞರಿಂದ ನನ್ನ ಸೀಡಿ ಪರೀಕ್ಷೆ ಮಾಡಿಸಿ: ಸಿಎಂ ಎಚ್‌ಡಿಕೆ ಚಾಲೆಂಜ್!

ರಾಜ್ಯದ ಖಜಾನೆ ಖಾಲಿಯಾಗಿದೆ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಹೌದು ಪಾಪ ಅವರು ಖಜಾನೆ ತುಂಬಿಟ್ಟು ಹೋಗಿದ್ದರು. ನಾವು ಖಾಲಿ ಮಾಡಿದ್ದೇವೆ. ಅವರಿಗೆ ಮುಂದಿನ ದಿನಗಳಲ್ಲಿ ಬೀದಿಗಿಳಿದು ಹೋರಾಟ ಮಾಡೋದೆ ಕೆಲಸವಾಗಲಿದೆ. ಸಿದ್ದರಾಮಯ್ಯ ತಿರುಗಿ ಇನ್ನು ಮುಂದೆ ಸಿಎಂ ಕುರ್ಚಿ ಮೇಲೆ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 
 

PREV
click me!

Recommended Stories

ನನಗೆ ಎಚ್ಚರಿಕೆ ಕೊಡೋ ಮುನ್ನ ಹುಷಾರ್, ಕಾಮನ್‌ಸೆನ್ಸ್ ಇಟ್ಟುಕೊಂಡು ಡೀಲ್ ಮಾಡಿ, ಪತ್ರ ಬರೆದವನಿಗೆ ಡಿಕೆಶಿ ವಾರ್ನಿಂಗ್!
5 ಸಾವಿರ ಕೊಡ್ತೀನಿ ರೂಮ್‌ಗೆ ಬಾ ಅಂದ್ರು? ಬ್ರಹ್ಮಾನಂದ ಗುರೂಜಿಯ ವಿಡಿಯೋ ವೈರಲ್