ಸಾ.ರಾ. ನಿಧಿ ಗಾರ್ಮೆಂಟ್ಸ್‌ ಕಾರ್ಯಾರಂಭ : ಸಾವಿರ ಮಹಿಳೆಯರಿಗೆ ಉದ್ಯೋಗ

By Kannadaprabha NewsFirst Published Mar 26, 2023, 6:11 AM IST
Highlights

ಮಾ. 27ರಂದು ತಾಲೂಕಿನ ಕೆಗ್ಗೆರೆ ಗ್ರಾಮದಲ್ಲಿ ಸಾ.ರಾ. ನಿಧಿ ಗಾರ್ಮೆಂರ್ಚ್‌ ಕಾರ್ಯಾರಂಭ ಮಾಡಲಿದ್ದು, ಮೊದಲನೇ ಹಂತದಲ್ಲಿ ಒಂದು ಸಾವಿರ ಮಹಿಳೆಯರಿಗೆ ಉದ್ಯೋಗ ನೀಡಲಾಗುವುದು ಎಂದು ಶಾಸಕ ಸಾ.ರಾ. ಮಹೇಶ್‌ ಹೇಳಿದರು.

  ಕೆ.ಆರ್‌. ನಗರ :  ಮಾ. 27ರಂದು ತಾಲೂಕಿನ ಕೆಗ್ಗೆರೆ ಗ್ರಾಮದಲ್ಲಿ ಸಾ.ರಾ. ನಿಧಿ ಗಾರ್ಮೆಂರ್ಚ್‌ ಕಾರ್ಯಾರಂಭ ಮಾಡಲಿದ್ದು, ಮೊದಲನೇ ಹಂತದಲ್ಲಿ ಒಂದು ಸಾವಿರ ಮಹಿಳೆಯರಿಗೆ ಉದ್ಯೋಗ ನೀಡಲಾಗುವುದು ಎಂದು ಶಾಸಕ ಸಾ.ರಾ. ಮಹೇಶ್‌ ಹೇಳಿದರು. ಪಟ್ಟಣದ ಶ್ರೀರಾಮ ಬಡಾವಣೆಯ ಎಚ್‌.ಡಿ. ದೇವೆಗೌಡ ಸಮುದಾಯ ಭವನದಲ್ಲಿ ಶನಿವಾರ ನಡೆದ ತಾಲೂಕು ಸಾವಿತ್ರಿ ಭಾಯಿ ಪುಲೆ ಶಿಕ್ಷಕಿಯರ ಸಂಘದ ವತಿಯಿಂದ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೆ.ಆರ್‌. ನಗರ ಮತ್ತು ಸಾಲಿಗ್ರಾಮ ತಾಲೂಕಿನ ಉಜಿರೆಯಲ್ಲಿದೆ ಹದಿನೆಂಟು ವರ್ಷ ತುಂಬಿದ ಎಲ್ಲ ಮಹಿಳೆಯರನ್ನು ಸಾ.ರಾ. ಗಾರ್ಮೆಂಟ್ಸ್‌ಗೆ ಶಾಶ್ವತ ಷೇರುದಾರರನ್ನಾಗಿ ಮಾಡಲಿದ್ದು, ಅನಂತರ ಬರುವ ಆದಾಯವನ್ನು ಅವರ ಖಾತೆಗೆ ಜಮಾ ಮಾಡಲಾಗುವುದು ಎಂದರು.

ಕಳೆದ ಹದಿನೈದು ವರ್ಷಗಳಿಂದ ಕ್ಷೇತ್ರದ ಜನತೆ ನನಗೆ ನೀಡಿರುವ ಅಧಿಕಾರವನ್ನು ಪ್ರಾಮಾಣಿಕವಾಗಿ ಬಳಕೆ ಮಾಡಿಕೊಂಡು ಅವರ ಸೇವೆ ಮಾಡಿರುವ ತೃಪ್ತಿಯಿದೆ ಎಂದು ಸಂತಸದಿಂದ ನುಡಿದರು.

ಜನತೆ ನಮ್ಮನ್ನು ಆಯ್ಕೆ ಮಾಡುವುದು ಅವರ ಸೇವೆ ಮಾಡುವ ಉದ್ದೇಶದಿಂದ ಆದರೆ ಕೊರೋನಾ ಸಮಯದಲ್ಲಿ ಕಣ್ಣಗೆ ಕಾಣಿಸದ ಕೆಲವು ನಾಯಕರು ಈಗ ಚುನಾವಣಾ ರಾಜಕಾರಣ ಮಾಡಿ ತಮಗಿಂತ ಕಿರಿಯರಾದವರ ಕೈಕಾಲು ಹಿಡಿಯುತ್ತಿದ್ದು, ಇದು ಪ್ರಜಾ ಪ್ರಭುತ್ವಕ್ಕೆ ಮಾಡಿದ ಪ್ರಮಾದವೆಂದವರು ಜರಿದರು.

ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರಾದ ಎಂ.ಟಿ. ಅಣ್ಣೇಗೌಡ, ತಾಲೂಕು ಯುವ ಜೆಡಿಎಸ್‌ ಮಾಜಿ ಅಧ್ಯಕ್ಷ ಎಚ್‌.ಕೆ. ಸುಜಯ…, ಪುರಸಭಾ ಸದಸ್ಯರಾದ ಸರೋಜ ಮಹದೇವ, ಉಮೇಶ್‌, ಬಿಇಓ ಟಿ.ಎನ್‌. ಗಾಯತ್ರಿ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ನಾಗರಾಜು, ಪ್ರಧಾನ ಕಾರ್ಯದರ್ಶಿ ಪ್ರಸನ್ನಕುಮಾರ್‌ ಇದ್ದರು.

ಕಾರ್ಯಕರ್ತರೆ ನಮ್ಮ ಶಕ್ತಿ

  ಸಾಲಿಗ್ರಾಮ :  ಜಾತ್ಯತೀತ ಜನತಾದಳದ ಪ್ರತಿಯೊಬ್ಬ ಕಾರ್ಯಕರ್ತರೇ ನಮ್ಮ ಪಕ್ಷದ ಶಕ್ತಿ ಆ ಶಕ್ತಿಯಿಂದ ಮತ್ತೊಮ್ಮೆ ಎಚ್‌.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಶಾಸಕ ಸಾ.ರಾ. ಮಹೇಶ್‌ ತಿಳಿಸಿದರು.

ಸಾಲಿಗ್ರಾಮ ತಾಲೂಕಿನ ಮಿರ್ಲೆ ಹೋಬಳಿಯ ಪಕ್ಷದ ಸಮಾವೇಶದಲ್ಲಿ ಮಾತನಾಡಿದರು. 2013ರ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನತೆಯ ತಲೆಯ ಮೇಲೆ ಅತಿ ಹೆಚ್ಚು ಸಾಲಮಾಡಿ ಹೋಗಿ ಇಂದು ಡಬಲ್‌ ಎಂಜಿನ್‌ ಸರ್ಕಾರ ಬಿಜೆಪಿಯವರು ಮುಂದುವರಿಸಿ ಅತಿಹೆಚ್ಚು ಸಾಲದ ಸುಳಿಯಲ್ಲಿ ಸಿಲುಕಿಸಿದ್ದಾರೆ. ರಾಜ್ಯದ ರೈತರ ಸಾಮಾನ್ಯರು ಉಳಿಯಬೇಕಾದರೆ ಕುಮಾರಣ್ಣ ಮುಖ್ಯಮಂತ್ರಿ ಆಗಬೇಕು ಎಂದರು.

ಎಚ್‌.ಡಿ. ದೇವೇಗೌಡರು ಹಾರಂಗಿ, ಹೇಮಾವತಿ ನೀರಾವರಿ ಹೀಗೆ ಅನೇಕ ರೈತಪರ ಕಲ್ಯಾಣ ಕಾರ್ಯಕ್ರಮ ನೀಡಲು ಹಂಬಲಿಸುತ್ತಿದ್ದಾರೆ. ಮಾತೆತ್ತಿದರೆ ನಾನು ಐದು ವರ್ಷಗಳ ಮುಖ್ಯಮಂತ್ರಿ ಆಗಿ ಕಾರ್ಯ ನಿರ್ವಹಿಸಿದ್ದೆ ಎಂದು ಹೇಳುವ ಸಿದ್ದರಾಮಯ್ಯ ಅವರೇ ಕ್ಷೇತ್ರದ ಹುಡುಕಾಟದಲ್ಲಿ ಇದ್ದಾರೆ. ಇಂತಹವರಿಂದ ರಾಜ್ಯದ ಅಭಿವೃದ್ಧಿ ಹೇಗೆ? ನಿಮ್ಮನ್ನು ಆಯ್ಕೆ ಮಾಡಿದ ಕ್ಷೇತ್ರದ ಜನರಿಗೆ ಅಭಿವೃದ್ಧಿ ಮಾಡಲಾಗುತ್ತಿಲ್ಲ ಎಂದರು. ಕ್ಷೇತ್ರದ ಮತದಾರರಿಗೆ ಗೊತ್ತಿದೆ ತಮ್ಮ ಕಷ್ಟಸುಖದಲ್ಲಿ ಬಾಗಿ ಆಗಿ ಗ್ರಾಮಗಳ ಅಭಿವೃದ್ಧಿಗೆ ಸ್ಪಂದನೆ ನೀಡುವ ವ್ಯಕ್ತಿಗೆ ಆಯ್ಕೆ ಮಾಡಿ ಕೆಲವರು ಚುನಾವಣೆ ಬರುತ್ತಿದ್ದಂತೆ ಬಹಳ ಸುತ್ತಾಡುತ್ತಾ ನಾನು ಎರಡು ಬಾರಿ ಸೋತಿದ್ದೇನೆ. ಈ ಬಾರಿ ನೀವು ಗೆಲ್ಲಿಸದಿದ್ದರೆ ನಾನು ಇರುವುದಿಲ್ಲ ಎಂದು ಕಣ್ಣೀರು ಹಾಕುತ್ತಾ ಕಾಲಿಗೆ ಬೀಳ್ತಾರೆ. ಇಂತವರ ಬಗ್ಗೆ ಎಚ್ಚರಿಕೆ ವಹಿಸಿ ಎಂದು ಪರೋಕ್ಷವಾಗಿ ರವಿಶಂಕರ್‌ ವಿರುದ್ಧ ಹರಿಹಾಯ್ದರು.

click me!