ಯಾರು ಕೂಡ ಜಿಲ್ಲೆಗೆ ಒಂದು ವಿಶ್ವವಿದ್ಯಾಲಯವನ್ನು ಮಾಡಿ ಎಂದು ಕೇಳಿರಲಿಲ್ಲ. ದೇಶ ವಿದೇಶಗಳ ಎಲ್ಲಾ ವಿದ್ಯಾರ್ಥಿಗಳು ಓದುವುದಕ್ಕಾಗಿ ಮೈಸೂರು ವಿವಿಯನ್ನು ಕೇಂದ್ರಿಯ ವಿವಿ ಮಾಡಬೇಕಿತ್ತು. ಆದರೆ, ಜಿಲ್ಲೆಗೊಂದು ವಿವಿ ಮಾಡುವ ಮೂಲಕ ಈಗ ಮೈಸೂರು ವಿವಿಯನ್ನು ಗುಬ್ಬಚ್ಚಿ ಗೂಡಿನಂತೆ ಮಾಡಲಾಗಿದೆ ಎಂದು ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಬೇಸರ ವ್ಯಕ್ತಪಡಿಸಿದರು.
ಮೈಸೂರು: ಯಾರು ಕೂಡ ಜಿಲ್ಲೆಗೆ ಒಂದು ವಿಶ್ವವಿದ್ಯಾಲಯವನ್ನು ಮಾಡಿ ಎಂದು ಕೇಳಿರಲಿಲ್ಲ. ದೇಶ ವಿದೇಶಗಳ ಎಲ್ಲಾ ವಿದ್ಯಾರ್ಥಿಗಳು ಓದುವುದಕ್ಕಾಗಿ ಮೈಸೂರು ವಿವಿಯನ್ನು ಕೇಂದ್ರಿಯ ವಿವಿ ಮಾಡಬೇಕಿತ್ತು. ಆದರೆ, ಜಿಲ್ಲೆಗೊಂದು ವಿವಿ ಮಾಡುವ ಮೂಲಕ ಈಗ ಮೈಸೂರು ವಿವಿಯನ್ನು ಗುಬ್ಬಚ್ಚಿ ಗೂಡಿನಂತೆ ಮಾಡಲಾಗಿದೆ ಎಂದು ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಬೇಸರ ವ್ಯಕ್ತಪಡಿಸಿದರು.
ಮೈಸೂರಿನ ವಿಜಯನಗರದಲ್ಲಿರುವ ಜಿಲ್ಲಾ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಲಿಖಿತ್ ಪ್ರಕಾಶನವು ಶನಿವಾರ ಆಯೋಜಿಸಿದ್ದ ಡಾ.ಎನ್.ಆರ್. ಚಂದ್ರೇಗೌಡ ಅವರ ‘ರಾಜಕೀಯ ಮುತ್ಸದಿ ಮತ್ತು ನೀರಾವರಿ ತಜ್ಞ: ಎಚ್.ಎನ್. ನಂಜೇಗೌಡರು’ ಹಾಗೂ ‘ವಿಲೋಕನ’ ಹಾಗೂ ಡಾ. ಅವರೆಕಾಡು ವಿಜಯಕುಮಾರ್ ಅವರ ‘ಮರೆಯದ ಮಾಣಿಕ್ಯ’ ಕೃತಿಗಳನ್ನು ಅವರು ಬಿಡುಗಡೆಗೊಳಿಸಿ ಮಾತನಾಡಿದರು.
undefined
ಮೈಸೂರು ವಿವಿ ಅಧೀನದಲ್ಲಿದ್ದ ಮಂಡ್ಯ, , ಹಾಸನಗಳಲ್ಲೂ ವಿಶ್ವವಿದ್ಯಾನಿಲಯಗಳನ್ನು ಮಾಡುವ ಮೂಲಕ ಶತಮಾನ ಪೂರೈಸಿರುವ ಮೈಸೂರು ವಿವಿಯಲ್ಲಿ ವಿದ್ಯಾಭ್ಯಾಸ ಮಾಡಲು ಮೈಸೂರಿಗೆ ಬರಬೇಕೆಂಬ ಹಲವಾರು ವಿದ್ಯಾರ್ಥಿಗಳ ಆಸೆಗೆ ತಣ್ಣೀರು ಎರಚಿದಂತೆ ಆಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಮಟ್ಟದಲ್ಲಿ ಈಗ ಮಾಡಲಾಗಿರುವ ವಿವಿಗಳಿಗೆ ಈ ವರ್ಷ . 2 ಕೋಟಿ ಸರ್ಕಾರ ನೀಡುತ್ತದೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ನೀಡುವ ಶುಲ್ಕದಿಂದಲೇ ವಿವಿ ನಡೆಸಬೇಕೆಂದು ಹೇಳಿದೆ. ಪ್ರತಿ ವರ್ಷ ಶೇ.10 ಶುಲ್ಕವನ್ನು ಹೆಚ್ಚಿಸಲಾಗುತ್ತದೆ. ಹೀಗಾದರೆ, ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳ ಕಥೆ ಏನಾಗಬೇಕು? ಕೊನೆ ಪಕ್ಷ ಐದು ವರ್ಷಗಳ ಕಾಲ ಪ್ರತಿ ವಿವಿಗೂ . 100 ಕೋಟಿ ನೀಡಬೇಕು ಎಂದು ಅವರು ಆಗ್ರಹಿಸಿದರು.
ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಸಚಿವ ಪ್ರೊ.ಕೆ.ಎಲ್.ಎನ್. ಮೂರ್ತಿ ಮಾತನಾಡಿ, ಪ್ರಸ್ತುತ ಕೃತಿ ಬರೆಯುವವರು ಮತ್ತು ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ. ತಾಂತ್ರಿಕ ಯುಗದಲ್ಲಿ ಪುಸ್ತಕ ಖರೀದಿಸಲು ಮನಸ್ಸು ಮಾಡುತ್ತಿಲ್ಲ. ವಿವಿ, ಕಾಲೇಜುಗಳಲ್ಲೂ ಪುಸ್ತಕ ಓದುವವರ ಸಂಖ್ಯೆ ಕಡಿಮೆ ಇದೆ. ಹೀಗಾಗಿ, ಪುಸ್ತಕ ಓದುವವರ ಮತ್ತು ಬರೆಯುವವರ ಸಂಖ್ಯೆ ಹೆಚ್ಚಾಗಬೇಕು. ಪೋಷಕರು ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸಬೇಕು ಎಂದು ಕರೆ ನೀಡಿದರು.
ರಾಜಕೀಯ ಮುತ್ಸದಿ ಮತ್ತು ನೀರಾವರಿ ತಜ್ಞ: ಎಚ್.ಎನ್. ನಂಜೇಗೌಡರು ಪುಸ್ತಕದ ಕುರಿತು ಲೇಖಕ ಅರ್ಜುನಹಳ್ಳಿ ಪ್ರಸನ್ನಕುಮಾರ್, ವಿಲೋಕನ ಕೃತಿ ಕುರಿತು ಕೆ.ಆರ್. ನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ಪ್ರಾಧ್ಯಾಪಕ ಡಾ. ಮೈಸೂರು ಕೃಷ್ಣಮೂರ್ತಿ, ಮರೆಯದ ಮಾಣಿಕ್ಯ ಕೃತಿ ಕುರಿತು ಮಹಾರಾಜ ಕಾಲೇಜು ಕನ್ನಡ ಪ್ರಾಧ್ಯಾಪಕ ಡಾ.ಟಿ.ಕೆ. ಕೆಂಪೇಗೌಡ ಮಾತನಾಡಿದರು. ಇದೇ ವೇಳೆ ಮಾಜಿ ಸಚಿವ ಎಚ್.ಎನ್. ನಂಜೇಗೌಡರ ಸೊಸೆ ರೇಖಾ ಪುರುಷೋತ್ತಮ್ ಅವರನ್ನು ಸನ್ಮಾನಿಸಲಾಯಿತು.
ಕಸಾಪ ಮಾಜಿ ಜಿಲ್ಲಾಧ್ಯಕ್ಷ ಡಾ.ವೈ.ಡಿ. ರಾಜಣ್ಣ, ಕೃತಿಗಳ ಕರ್ತೃಗಳಾದ ರಾಜ್ಯ ಮುಕ್ತ ವಿವಿ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ಎನ್.ಆರ್. ಚಂದ್ರೇಗೌಡ, ಸಹಾಯಕ ಭಾಷಾಂತರಕಾರ ಡಾ. ಅವರೆಕಾಡು ವಿಜಯಕುಮಾರ್, ಪ್ರಕಾಶಕ ಕೆ.ಸಿ. ಓಂಕಾರಪ್ಪ ಮೊದಲಾದವರು ಇದ್ದರು.
ಪ್ರಸ್ತುತ ದಿನಗಳಲ್ಲಿ ಸರ್ಕಾರದ ಯೋಜನೆಗಳು, ವಿಶ್ವವಿದ್ಯಾಲಯಗಳ ಕಾರ್ಯವೈಖರಿಗಳು, ಬೋಧನಾ ಕ್ರಮದಿಂದಾಗಿ ಮೌಲ್ಯಯುತ ಶಿಕ್ಷಣ ನೀಡುವ ಬದಲು ಆವಿಷ್ಕಾರದ ಹೆಸರಿನಲ್ಲಿ ದೋಷವನ್ನು ತುಂಬುವ ಕೆಲಸ ಆಗುತ್ತಿದೆ. ಇದಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಸರ್ಕಾರ ಸೇರಿದಂತೆ ಎಲ್ಲರೂ ಕಾರಣ.
- ಮರಿತಿಬ್ಬೇಗೌಡ, ವಿಧಾನಪರಿಷತ್ ಸದಸ್ಯ