ಈಗ ಮತ್ತೋರ್ವ ಐಎಎಸ್ ಅಧಿಕಾರಿ ವಿರುದ್ಧ ಸಾ ರಾ ಅಸಮಾಧಾನ

By Kannadaprabha NewsFirst Published Sep 5, 2021, 4:18 PM IST
Highlights
  • ಸಾ.ರಾ. ಚೌಲ್ಟ್ರಿ ಸುತ್ತಮುತ್ತಲಿನ ಜಾಗವನ್ನು ಮತ್ತೆ ಅಳತೆ ಮಾಡಿ ಹತ್ತು ದಿನದೊಳಗೆ ವರದಿ ನೀಡುವಂತೆ ಆದೇಶ
  • ಈ ಹಿಂದಿನ ಅಳತೆ ಸರಿಯಾಗಿದ್ದು, ಈಗ ನಾನು ಜಾಗವನ್ನು ಜರುಗಿಸಿ ಒತ್ತುವರಿ ಮಾಡಲು ಸಾಧ್ಯವೇ? ಎಂದ ಸಾರಾ

ಮೈಸೂರು (ಸೆ.05):  ಸಾ.ರಾ. ಚೌಲ್ಟ್ರಿ ಸುತ್ತಮುತ್ತಲಿನ ಜಾಗವನ್ನು ಮತ್ತೆ ಅಳತೆ ಮಾಡಿ ಹತ್ತು ದಿನದೊಳಗೆ ವರದಿ ನೀಡುವಂತೆ ಭೂ ದಾಖಲೆಗಳ ಇಲಾಖೆಯ ಆಯುಕ್ತರು ಹೊರಡಿಸಿರುವ ಆದೇಶಕ್ಕೆ ಉತ್ತರಿಸಿದ ಸಾ ರಾ ಮಹೇಶ್ ಅವರು, ಈ ಹಿಂದಿನ ಅಳತೆ ಸರಿಯಾಗಿದ್ದು, ಈಗ ನಾನು ಜಾಗವನ್ನು ಜರುಗಿಸಿ ಒತ್ತುವರಿ ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದರು.

ಪಟ್ಟಣದ ತೋಟಗಾರಿಕೆ ಇಲಾಖೆಯ ಕಚೇರಿ ಆವರಣದಲ್ಲಿ ಶನಿವಾರ 2021-22ನೇ ಸಾಲಿನ ರಾಷ್ಟ್ರೀಯ ತೋಟಗಾರಿಕಾ ಮಿಷನ್‌ ಯೋಜನೆಯಡಿ ಹಣ್ಣು ಮತ್ತು ತರಕಾರಿ ಮಾರಾಟ ಗಾಡಿಗಳನ್ನು ವಿತರಿಸಿದ ನಂತರ ಅವರು ಮಾತನಾಡಿದರು.

ಕೊಟ್ಯಂತರ ರು. ಹಗರಣ : ಸಿಂಧೂರಿ ವಿರುದ್ಧ ಸಾರಾ ಮತ್ತೊಂದು ಗಂಭೀರ ಆರೋಪ

ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ಆದೇಶ ಹೊರಡಿಸಿರುವ ಆಯುಕ್ತರು, ಸರ್ಕಾರಿ ಜಾಗವನ್ನು ಸಂರಕ್ಷಣೆ ಮಾಡುವ ಉದ್ದೇಶದಿಂದ ಅಳತೆ ಮಾಡಲಾಗುತ್ತದೆ ಎಂದಿರುವ ಮನೀಷ್‌ ಮೌದ್ಗಿಲ್‌ ಅವರಿಗೆ ಟಾಂಗ್‌ ನೀಡಿ, ಮೊದಲು ಸರ್ಕಾರಿ ಜಾಗಗಳು ಎಲ್ಲೆಲ್ಲಿ ಒತ್ತುವರಿಯಾಗಿದೆ ಎಂಬುದರ ವರದಿ ತರಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಸರ್ಕಾರಿ ಜಾಗಗಳ ಒತ್ತುವರಿ ತೆರವು ಮಾಡಲು ಹೊರಡಿಸುವ ಆದೇಶಗಳು ಮತ್ತು ಸಮಿತಿಗಳ ನೇಮಕಕ್ಕೆ ನನ್ನ ಸ್ವಾಗತವಿದೆ, ಆದರೆ ಯಾರದೋ ಹಿತಾಸಕ್ತಿಗೆ ಒಳಗಾಗಿ ನನ್ನ ಚೌಲ್ಟಿ್ರಯ ಮರು ಅಳತೆಗೆ ಸೂಚಿಸಿರುವುದಕ್ಕೆ ನಾನು ಸೊಪ್ಪು ಹಾಕುವುದಿಲ್ಲ ಎಂದರು.

click me!