ಮೈಸೂರು: 'ಬಿಜೆಪಿ ಓಲೈಸುವುದು ಭೈರಪ್ಪ ಅವರ ಕಾಯಕ'

Published : Aug 29, 2019, 11:00 AM IST
ಮೈಸೂರು: 'ಬಿಜೆಪಿ ಓಲೈಸುವುದು ಭೈರಪ್ಪ ಅವರ ಕಾಯಕ'

ಸಾರಾಂಶ

ಬಿಜೆಪಿಯನ್ನು ಓಲೈಸುವುದೇ ಕಾದಂಬರಿಕಾರ ಡಾ.ಎಸ್‌. ಎಲ್‌. ಭೈರಪ್ಪ ಅವರ ಕಾಯಕವಾಗಿದೆ ಎಂದು ಪ್ರಗತಿಪರ ಚಿಂತಕರ ವೇದಿಕೆ ರಾಜ್ಯಾಧ್ಯಕ್ಷ ಕೆ.ಸಿ. ಪುಟ್ಟಸಿದ್ದ ಶೆಟ್ಟಿಕಿಡಿ ಕಾರಿದರು. ಶ್ರೇಷ್ಠ ಸಾಹಿತಿಗಳಲ್ಲೊಬ್ಬರಾದ ಭೈರಪ್ಪ ಅವರು ಕಾಂಗ್ರೆಸ್‌ ಮುಸ್ಲಿಮರನ್ನು ಓಲೈಸುತ್ತಿದೆ ಎಂದು ಆರೋಪಿಸಿರುವುದು ಪ್ರಗತಿಪರ ಚಿಂತಕರಿಗೆ ಆಘಾತವನ್ನುಂಟು ಮಾಡಿದೆ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮೈಸೂರು(ಆ.29): ಬಿಜೆಪಿಯನ್ನು ಓಲೈಸುವುದೇ ಕಾದಂಬರಿಕಾರ ಡಾ.ಎಸ್‌. ಎಲ್‌. ಭೈರಪ್ಪ ಅವರ ಕಾಯಕವಾಗಿದೆ ಎಂದು ಪ್ರಗತಿಪರ ಚಿಂತಕರ ವೇದಿಕೆ ರಾಜ್ಯಾಧ್ಯಕ್ಷ ಕೆ.ಸಿ. ಪುಟ್ಟಸಿದ್ದ ಶೆಟ್ಟಿಕಿಡಿ ಕಾರಿದರು.

ದೇಶ ವಿಭಜನೆ ವೇಳೆ ಪಾಕಿಸ್ತಾನದ ಹಿಂದೂಗಳು ಭಾರತಕ್ಕೆ, ಭಾರತದಲ್ಲಿನ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗುವಂತೆ ಡಾ.ಬಿ.ಆರ್‌.ಅಂಬೇಡ್ಕರ್‌ ಹೇಳಿದ್ದರು ಎಂದು ಭೈರಪ್ಪ ಹೇಳಿದ್ದಾರೆ. ಇದಕ್ಕೆ ದಾಖಲೆ ನೀಡಲು ಅವರಿಂದ ಸಾಧ್ಯವೇ? ಶ್ರೇಷ್ಠ ಸಾಹಿತಿಗಳಲ್ಲೊಬ್ಬರಾದ ಭೈರಪ್ಪ ಅವರು ಕಾಂಗ್ರೆಸ್‌ ಮುಸ್ಲಿಮರನ್ನು ಓಲೈಸುತ್ತಿದೆ ಎಂದು ಆರೋಪಿಸಿರುವುದು ಪ್ರಗತಿಪರ ಚಿಂತಕರಿಗೆ ಆಘಾತವನ್ನುಂಟು ಮಾಡಿದೆ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮೈಸೂರು: ನಳಿನ್ ಭೇಟಿ, ಅಂತರ ಕಾಯ್ದುಕೊಂಡ ಸಚಿವ ಸ್ಥಾನ ವಂಚಿತ ಶಾಸಕ

ಭೈರಪ್ಪ ಅವರದು ಕೋಮುವಾದಿ ಸಿದ್ಧಾಂತ:

ಭೈರಪ್ಪ ಅವರದ್ದು, ಕೋಮುವಾದಿ ಸಿದ್ಧಾಂತ. ಕೋಮುವಾದಿ ಭಾವನೆ ಕೆರಳಿಸುವಂತೆ ಮಾತನಾಡುತ್ತಿದ್ದಾರೆ. ಮೂಲಭೂತವಾದಿಗಳಂತೆ ಹೇಳಿಕೆ ನೀಡುತ್ತಿದ್ದಾರೆ. ಅವರೊಬ್ಬ ಸಾಹಿತಿಯಾಗಿ ನೆಹರು ಅವರನ್ನು ಟೀಕಿಸುವ ರಾಜಕೀಯ ಮುತ್ಸದ್ದಿತನ ಇದೆಯೇ? ಒಂದು ನಿರ್ದಿಷ್ಟಸಮುದಾಯವನ್ನು ಹೆಸರಿಸಿ ಅವಹೇಳನ ಮಾಡುತ್ತಿರುವುದು ಸರಿಯಲ್ಲ. ಇಂತಹ ಹೇಳಿಕೆ ಭೈರಪ್ಪ ಅವರಿಗೆ ಶೋಭೆ ತರುವುದಿಲ್ಲ ಎಂದು ಅವರು ಟೀಕಿಸಿದರು. ವೇದಿಕೆ ಪದಾಧಿಕಾರಿಗಳಾದ ಬಿ.ಎಸ್‌. ಸಂಪತಕುಮಾರ್‌, ಟಿ.ಕೆ. ಹೊನ್ನಪ್ಪ ತೊಂಡಾಳು, ಬೋರಪ್ಪಶೆಟ್ಟಿಇದ್ದರು.

ಮೈಸೂರು- ವಿಜಯಪುರ ನಡುವೆ ವಿಶೇಷ ರೈಲು

PREV
click me!

Recommended Stories

ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!
Uttara Kannada: ಆಸ್ಪತ್ರೆಗೆ ಹೋಗಿದ್ದ ಗರ್ಭಿಣಿ ಹುಟ್ಟುಹಬ್ಬದಂದೇ ಸಾವು; ಹೊಟ್ಟೆಯಲ್ಲೇ ಅಸುನೀಗದ ಮಗು!