ಮೈಸೂರು- ವಿಜಯಪುರ ನಡುವೆ ವಿಶೇಷ ರೈಲು

Published : Aug 29, 2019, 10:38 AM IST
ಮೈಸೂರು- ವಿಜಯಪುರ ನಡುವೆ ವಿಶೇಷ ರೈಲು

ಸಾರಾಂಶ

ಮೈಸೂರು ಹಾಗೂ ವಿಜಯಪುರದ ನಡುವೆ ವಿಶೇಷ ರೈಲು ಸೇವೆ ಆರಂಭವಾಗುತ್ತಿದೆ. ಗಣೇಶ್ ಹಬ್ಬದ ನಿಮಿತ್ತ ವಿಶೇಷ ರೈಲು ಚಲಿಸಲಿದೆ. 

ಮೈಸೂರು (ಆ.29): ಗೌರಿ- ಗಣೇಶ ಹಬ್ಬದ ಪ್ರಯುಕ್ತ ಮೈಸೂರು- ವಿಜಯಪುರ- ಮೈಸೂರು ನಡುವೆ ವಿಶೇಷ ರೈಲು ಸಂಚಾರ ಆರಂಭಿಸಿದ್ದು, ವಿಶೇಷ ದರವನ್ನೂ ನಿಗದಿಪಡಿಸಲಾಗಿದೆ.

ರೈಲುಗಾಡಿ ಸಂಖ್ಯೆ 06583 ಆ. 30ರಂದು ಮಧ್ಯಾಹ್ನ 12.30ಕ್ಕೆ ಮೈಸೂರಿನಿಂದ ಹೊರಟು ಆ. 31ರ ಬೆಳಗ್ಗೆ 10.20ಕ್ಕೆ ವಿಜಯಪುರ ತಲುಪಲಿದೆ. ಇದೇ ಗಾಡಿ ಸೆ. 2ರ ಸಂಜೆ 6 ಗಂಟೆಗೆ ವಿಜಯಪುರದಿಂದ ಹೊರಟು ಸೆ. 3ರ ಮಧ್ಯಾಹ್ನ 1.05ಕ್ಕೆ ಮೈಸೂರಿಗೆ ಆಗಮಿಸಲಿದೆ. ಈ ಗಾಡಿಯು ಮಂಡ್ಯ, ರಾಮನಗರ, ಬೆಂಗಳೂರು, ಯಶವಂತಪುರ, ತುಮಕೂರು, ಅರಸೀಕೆರೆ, ಚಿಕ್ಕಜಾಜೂರು, ಚಿತ್ರದುರ್ಗ, ರಾಯದುರ್ಗ, ಬಳ್ಳಾರಿ, ತೋಮಗಲ್‌, ಹೊಸಪೇಟೆ, ಕೊಪ್ಪಳ, ಗದಗ್‌, ಹೊಳೆ ಆಲೂರು, ಬಾದಾಮಿ, ಬಾಗಲಕೋಟೆ, ಆಲಮಟ್ಟಿ, ಬಸವನ ಬಾಗೇವಾಡಿ, ವಿಜಯಪುರ ಮಾರ್ಗವಾಗಿ ಸಂಚರಿಸಲಿದೆ.

ಮನೆಗೆ ರೈಲು ಓಡಿಸಿಕೊಂಡ್ರೆ ಅನ್ಯರು ಮನೆಗೆ ಹೋಗೋದ್ಯಾಗೆ ಅಂಗಡಿಯವರೇ?

ರೈಲು ಸಂಚಾರ ರದ್ದು :  ಮೈಸೂರು- ಧಾರವಾಡ- ಮೈಸೂರು ಎಕ್ಸ್‌ಪ್ರೆಸ್‌ ರೈಲು ಗಾಡಿಯು ಆ. 29 ರಿಂದ ಸೆ. 5 ರವರೆಗೆ ಹುಬ್ಬಳ್ಳಿ- ಧಾರವಾಡ ನಡುವೆ ಸಂಚರಿಸುವುದಿಲ್ಲ. ಈ ಮಾರ್ಗದಲ್ಲಿ ಎಂಜಿನಿಯರಿಂಗ್‌ ಕೆಲಸ ನಡೆಯುತ್ತಿರುವುದರಿಂದ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

PREV
click me!

Recommended Stories

ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!
Uttara Kannada: ಆಸ್ಪತ್ರೆಗೆ ಹೋಗಿದ್ದ ಗರ್ಭಿಣಿ ಹುಟ್ಟುಹಬ್ಬದಂದೇ ಸಾವು; ಹೊಟ್ಟೆಯಲ್ಲೇ ಅಸುನೀಗದ ಮಗು!