ಒನ್‌ ಡೇ ಸಿಇಓ‌ಗಳಾದ ಕೊಪ್ಪಳದ ಗ್ರಾಮೀಣ ವಿದ್ಯಾರ್ಥಿಗಳು

By Gowthami K  |  First Published Mar 9, 2023, 8:37 PM IST

ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯರು ಸಹ ಉನ್ನತ ಹುದ್ದೆಗಳನ್ನು ಹೊಂದಲು ಪ್ರೇರಣೆ ನೀಡುವ ನಿಟ್ಟಿನಲ್ಲಿ ಇಂದು ವಿದ್ಯಾರ್ಥಿನಿಯರಿಬ್ಬರು ಒಂದು ದಿನದ ಮಟ್ಟಿಗೆ ಜಿಲ್ಲಾ ಪಂಚಾಯ್ತಿ ಅಧಿಕಾರೇತರ ಸಿಇಓ ಆಗಿ ಕರ್ತವ್ಯ ನಿರ್ವಹಿಸಿದರು.


ವರದಿ: ದೊಡ್ಡೇಶ್ ಯಲಿಗಾರ್ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಪ್ಪಳ (ಮಾ.9): ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯರು ಸಹ ಉನ್ನತ ಹುದ್ದೆಗಳನ್ನು ಹೊಂದಲು ಪ್ರೇರಣೆ ನೀಡುವ ನಿಟ್ಟಿನಲ್ಲಿ ಇಂದು ವಿದ್ಯಾರ್ಥಿನಿಯರಿಬ್ಬರು ಒಂದು ದಿನದ ಮಟ್ಟಿಗೆ ಜಿಲ್ಲಾ ಪಂಚಾಯ್ತಿ ಅಧಿಕಾರೇತರ ಸಿಇಓ ಆಗಿ ಕರ್ತವ್ಯ ನಿರ್ವಹಿಸಿದರು. ಜಿಲ್ಲಾ ಪಂಚಾಯ್ತಿಯ ಯೋಜನೆಗಳು, ಸಿಇಓ ಅವರ ಕೆಲಸ ಹೇಗಿರುತ್ತದೆ ಎಂಬುದನ್ನು ಆ ಇಬ್ಬರು ವಿದ್ಯಾರ್ಥಿನಿಯರು  ಅಷ್ಟಕ್ಕೂ ಒನ್‌ ಡೇ ಸಿಇಓ ಆಗಿದ್ದವರು ಯಾರು ಅಂತೀರಾ? ಹಾಗಾದ್ರೆ ಈ ವರದಿ ನೋಡಿ.

Tap to resize

Latest Videos

undefined

ಒನ್ ಡೇ ಸಿಇಓ ಆಗಿದ್ದವರು ಯಾರು:
ಹೀಗೆ ಕೊಪ್ಪಳ ಜಿಲ್ಲಾ ಪಂಚಾಯ್ತಿ ಸಿಇಓ ರಾಹುಲ್‌ ರತ್ನಂ ಪಾಂಡೆ ಅವರ ಜೊತೆಗೆ ಇರುವ ಈ ಯುವತಿಯರಿಬ್ಬರು ಯಾವುದೇ ಇಲಾಖೆಯ ಸಿಬ್ಬಂದಿಗಳಲ್ಲ. ಇವರು ಕೊಪ್ಪಳ ನಗರದ ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯದಲ್ಲಿ ಪದವಿ ಹಂತದ ಐದನೇ ಸೆಮಿಸ್ಟರ್‌ ವಿದ್ಯಾರ್ಥಿಗಳು. ಅಷ್ಟಕ್ಕೂ ಈ ಇಬ್ಬರು ವಿದ್ಯಾರ್ಥಿನಿಯರು ಇಂದು ಕೊಪ್ಪಳ ಜಿಲ್ಲಾ ಪಂಚಾಯ್ತಿಯ ಅಧಿಕಾರೇತರ ಸಿಇಓ ಆಗಿ ಕೆಲಸ ಮಾಡಿದರು. ಗವಿಸಿದ್ದೇಶ್ವರ ಮಹಾವಿದ್ಯಾಲಯದ ಶಾಹಿನಾ ಹಾಗೂ ಹನುಮಕ್ಕ ಎಂಬ ಇಬ್ಬರು ವಿದ್ಯಾರ್ಥಿನಿಯರು ಜಿಲ್ಲಾ ಪಂಚಾಯ್ತಿ ಅಧಿಕಾರೇತರ ಸಿಇಓ ಆಗಿ ಕೆಲಸ ಮಾಡಿದರು. 

ಯಾವ ಕಾರಣಕ್ಕೆ ಸಿಇಓ ಆಗಿದ್ದರು?
ವಿಶ್ವ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯ್ತಿ ಸಿಇಓ ರಾಹುಲ್‌ ರತ್ನಂ ಪಾಂಡೆ ಅವರು ವಿಶೇಷವಾಗಿ ಆಚರಣೆ ಮಾಡಬೇಕು ಎಂಬ ಸದಾಶಯವೇ ಈ ಇಬ್ಬರು ವಿದ್ಯಾರ್ಥಿನಿಯರು ಇಂದು ಜಿಲ್ಲಾ ಪಂಚಾಯ್ತಿಯ ಒಂದು ದಿನದ ಅಧಿಕಾರೇತರ ಸಿಇಓ ಆಗಿ ಖುರ್ಚಿಯಲ್ಲಿ ಕೂರುವಂತೆ ಮಾಡಿತು. 

ಒನ್ ಡೇ ಸಿಇಓಗಳು ಏನೆಲ್ಲಾ ಮಾಡಿದರು:
ರಾಹುಲ್‌ ರತ್ನಂ ಪಾಂಡೆ ಅವರು ಈ ಇಬ್ಬರು ವಿದ್ಯಾರ್ಥಿನಿಯರನ್ನು ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಯೋಜನೆಗಳ ಪರಿಶೀಲನೆ, ಸಭೆ, ಸ್ವೀಪ್‌ ಮೀಟಿಂಗ್‌, ಗ್ರಾಮ ಪಂಚಾಯ್ತಿ ಭೇಟಿ ಹಾಗೂ ತಮ್ಮ ಕಚೇರಿಯಲ್ಲಿ ಜಲಜೀವನ ಮಿಷನ್‌, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸೇರಿದಂತೆ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ವಿವಿಧ ಯೋಜನೆಗಳ ಬಗ್ಗೆ ಸಿಇಓ ಕಾರ್ಯಗಳ ಬಗ್ಗೆ ಮನವರಿಕೆ ಮಾಡಿದರು. 

ವಿದ್ಯಾರ್ಥಿಗಳಿಗೆ ಉನ್ನತ ಹುದ್ದೆಗಳನ್ನು ಏರಲು ಇಂತಹ ಪ್ರಯತ್ನಗಳು ಸಹಕಾರಿ:
ವಿಶ್ವ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸುವ ಬಗ್ಗೆ ಪ್ರೇರಣೆ ನೀಡುವ ದೃಷ್ಠಿಯಿಂದಾಗಿ ಈ ಇಬ್ಬರು ವಿದ್ಯಾರ್ಥಿನಿಯರನ್ನು ಒಂದು ದಿನದ ಅಧಿಕಾರೇತರ ಜಿಲ್ಲಾ ಪಂಚಾಯ್ತಿ ಸಿಇಓ ಆಗಿ ಕೆಲಸ ಮಾಡಲು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಸಿಇಓ ರಾಹುಲ್‌ ರತ್ನಂ ಪಾಂಡೆ ತಿಳಿಸಿದ್ದಾರೆ.

Bengaluru Crime: ಬ್ರೇಕಪ್‌ ಆಗಿದ್ದಕ್ಕೆ ಮಹಿಳೆಯ ಮುಖಕ್ಕೆ ಚಾಕುವಿನಿಂದ ಕೊಯ್ದ ಪಾಗಲ್‌

ಸಿಕ್ಕ ಅವಕಾಶಕ್ಕೆ ನ್ಯಾಯ ಒದಗಿಸಿದ ವಿದ್ಯಾರ್ಥಿನಿಯರು:
ಇನ್ನು ಜಿಲ್ಲಾ ಪಂಚಾಯ್ತಿಯ ಒಂದು ದಿನದ ಅಧಿಕಾರೇತರ ಸಿಇಓ ಆಗಿ ಕೆಲಸ ಮಾಡಲು ತಮಗೆ ಸಿಕ್ಕ ಅವಕಾಶಕ್ಕೆ ಆ ಇಬ್ಬರು ವಿದ್ಯಾರ್ಥಿನಿಯರು ಸಖತ್‌ ಎಕ್ಸೈಟ್‌ ಆಗಿದ್ದರು. ಅಲ್ಲದೆ, ಜಿಲ್ಲಾ ಪಂಚಾಯ್ತಿ ಯೋಜನೆಗಳು, ಸಿಇಓ ಆವರೊಂದಿಗೆ ಕುಳಿತು ಅಧಿಕಾರಿಗಳಾಗಿ ಕೆಲಸ ಮಾಡಿರೋದು ಖುಷಿ ನೀಡಿದೆ. ಅಲ್ಲದೆ, ನಾವೂ ಸಹ ಉನ್ನತ ಹುದ್ದೆಯನ್ನು ಹೊಂದಬೇಕು ಎಂಬ ಗುರಿ ಮತ್ತಷ್ಟು ಗಟ್ಟಿಯಾಗಿದೆ ಎಂದು ವಿದ್ಯಾರ್ಥಿನಿಯರು ತಿಳಿಸಿದ್ದಾರೆ.

ಎಲ್ಲಿಯ ಸಿಯಾಟ್ಟಲ್‌, ಎಲ್ಲಿಯ ತುಂಗೆ, ಅಮೆರಿಕ ಪುರಾತತ್ವಜ್ಞನ ಅಸ್ಥಿ ಹಂಪಿಯ ತುಂಗಭದ್ರೆಯಲ್ಲಿ ಲೀನ!

ಒಬ್ಬ ವಿದ್ಯಾರ್ಥಿನಿಯನ್ನು ಆಯ್ಕೆ ಮಾಡಿ ಕಳಿಸಿ ಎಂದು ಹೇಳಿದ್ದರೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಇಬ್ಬರು ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಿ ಕಳಿಸಿದ್ದು ಒಂದಿಷ್ಟು ಯಡವಟ್ಟಾದರೂ ಸಹ ಇಬ್ಬರು ವಿದ್ಯಾರ್ಥಿನಿಯರು ಒಂದು ದಿನದ ಮಟ್ಟಿಗೆ ಅಧಿಕಾರೇತರ ಜಿಲ್ಲಾ ಪಂಚಾಯ್ತಿ ಸಿಇಓಗಳಾಗಿ ಕೆಲಸ ಮಾಡಿದ್ದು ಮಾತ್ರ ಪ್ರೇರಣೆ ನೀಡಿದೆ. ಜಿಲ್ಲಾ ಪಂಚಾಯ್ತಿ ಸಿಇಓ ರಾಹುಲ್‌ ರತ್ನಂ ಪಾಂಡೆ ಈ ಕೆಲಸ ನಿಜಕ್ಕೂ ಮೆಚ್ಚುವಂತಹದ್ದು.

click me!