ಕೋಲಾರ ಜಿಲ್ಲೆಯ ಬಂಗಾರಪೇಟೆ ಶಿಕ್ಷಣ ಇಲಾಖೆಯ ಅಧಿಕಾರಿ ಕಳ್ಳಾಟ ಬಟಾ ಬಯಲಾಗಿದೆ. ಶಾಲಾ ನವೀಕರಣಕ್ಕೆ ಅಧಿಕಾರಿಯೊಬ್ಬ ಲಂಚ ಕೇಳಿದ ಆಡಿಯೋ ರಿಲೀಸ್.
ಕೋಲಾರ(ಜ.25): ಶಿಕ್ಷಣ ಇಲಾಖೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಭ್ರಷ್ಟಾಚಾರವನ್ನ ರುಪ್ಸಾ ಬಯಲು ಮಾಡಿದೆ. ಇಲಾಖೆಯ ಅಧಿಕಾರಿಗಳಿಗೆ ಲಂಚ ಕೊಟ್ಟರಷ್ಟೇ ಶಾಲಾ ನವೀಕರಣ ಮಾಡಲಾಗುತ್ತದೆ. ಇಲಾಖೆಯ ಅಧಿಕಾರಿಗಳ ಭ್ರಷ್ಟಚಾರ ಕುರಿತು ಆಡಿಯೋ, ವೀಡಿಯೋ, ದಾಖಲೆಯನ್ನ ರುಪ್ಸಾ ಬಿಡುಗಡೆ ಮಾಡಿದೆ.
ಈ ಮೂಲಕ ಕೋಲಾರ ಜಿಲ್ಲೆಯ ಬಂಗಾರಪೇಟೆ ಶಿಕ್ಷಣ ಇಲಾಖೆಯ ಅಧಿಕಾರಿ ಕಳ್ಳಾಟ ಬಟಾ ಬಯಲಾಗಿದೆ. ಶಾಲಾ ನವೀಕರಣಕ್ಕೆ ಅಧಿಕಾರಿಯೊಬ್ಬ ಲಂಚ ಕೇಳಿದ ಆಡಿಯೋ ರಿಲೀಸ್ ಆಗಿದೆ.
ಭ್ರಷ್ಟಾಚಾರ ಕುರಿತು ತನಿಖೆ ನಡೆಸಿ: ಸಿದ್ದು ಸವಾಲ್
ಶಾಲಾ ನವೀಕರಣಕ್ಕೆ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬ 15 ಸಾವಿರ ಲಂಚ ಕೇಳಿದರು. ಈ ಕುರಿತು ಎರಡು ಆಡಿಯೋಗಳನ್ನ ರುಪ್ಸಾ ರಿಲೀಸ್ ಮಾಡಿದೆ. ಸರ್ಕಾರಿ ಶಾಲೆಯ ದುರ್ಬಳಕೆ ಮಾಡಿಕೊಂಡ ಮತ್ತೊಂದು ಪ್ರಕರಣ ಕೂಡ ಪ್ರಸ್ತಾಪ ಮಾಡಲಾಗಿದೆ.