ಗ್ರಾಮಗಳ ಅಭಿವೃದ್ಧಿಗೆ ಸರ್ಕಾರ ಕೋಟಿಗಟ್ಟಲೇ ಅನುದಾನ ನೀಡ್ತಿದೆ. ಆದ್ರೆ ಗ್ರಾಮಗಳ ಅಭಿವೃದ್ಧಿಗೆ ಪೂರಕವಾಗಬೇಕಾದ ಹಣ ಗ್ರಾಮ ಪಂಚಾಯ್ತಿ ಅಧಿಕಾರಿಗಳ ಜೇಬು ಸೇರ್ತಿದೆಯಂತೆ ಎಂಬ ಆರೋಪ ಕೇಳಿ ಬಂದಿದೆ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ: ಗ್ರಾಮಗಳ ಅಭಿವೃದ್ಧಿಗೆ ಸರ್ಕಾರ ಕೋಟಿಗಟ್ಟಲೇ ಅನುದಾನ ನೀಡ್ತಿದೆ. ಆದ್ರೆ ಗ್ರಾಮಗಳ ಅಭಿವೃದ್ಧಿಗೆ ಪೂರಕವಾಗಬೇಕಾದ ಹಣ ಗ್ರಾಮ ಪಂಚಾಯ್ತಿ ಅಧಿಕಾರಿಗಳ ಜೇಬು ಸೇರ್ತಿದೆಯಂತೆ ಎಂಬ ಆರೋಪ ಕೇಳಿ ಬಂದಿದೆ. ಗ್ರಾಮಗಳು ಅಭಿವೃದ್ಧಿಯಾದ್ರೆ ದೇಶ ಅಭಿವೃದ್ದಿಯಾದಂತೆ ಎಂದು ಭಾವಿಸಿರುವ ಸರ್ಕಾರ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಕೋಟಿಗಟ್ಟಲೇ ಅನುದಾನ ನೀಡ್ತಿದೆ. ಇದನ್ನು ಸದುಪಯೋಗ ಪಡಿಸಿಕೊಂಡು ಗ್ರಾಮೀಣ ಪ್ರದೇಶವನ್ನು ಅಭಿವೃದ್ಧಿ ಪಡಿಸಬೇಕಾದ ಗ್ರಾಮ ಪಂಚಾಯ್ತಿ ಅಧಿಕಾರಿಗಳು ನರೇಗಾ ಹಾಗೂ 15 ನೇ ಹಣಕಾಸು ಯೋಜನೆಯಡಿ ಬಿಡುಗಡೆಯಾದ 2 ಕೋಟಿಗೂ ಅಧಿಕ ಹಣವನ್ನು ನುಂಗಿ ಹಾಕಿದ್ದಾರೆಂಬ ಗಂಭೀರ ಆರೋಪ ಚಿತ್ರದುರ್ಗ (chitradurga) ತಾಲೂಕಿನ ಬ್ಯಾಲಹಾಳ್ ಗ್ರಾಮ ಪಂಚಾಯ್ತಿಯಲ್ಲಿ (Byalahal gram panchayath) ಕೇಳಿ ಬಂದಿದೆ.
undefined
ಚೆಕ್ ಡ್ಯಾಂ ಹಾಗೂ ಬ್ಯಾರೇಜ್ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಮಾಡದೇ, ಕಾಮಗಾರಿ ನೆಪದಲ್ಲಿ ಬಿಲ್ ಮಾಡಿಕೊಂಡು ಹಣವನ್ನು ಅಧಿಕಾರಿಗಳೇ ನುಂಗಿದ್ದಾರೆಂದು ಸಾಮಾಜಿಕ ಹೋರಾಟಗಾರ (Social Activist) ಸತೀಶ್ (Sathish) ಆರೋಪಿಸಿದ್ದಾರೆ. ಅಲ್ಲದೇ ಈ ಕಾಮಗಾರಿಯ ವಿವರ ಹಾಗೂ ಅನುದಾನದ ಬಗ್ಗೆ ಮಾಹಿತಿ ಹಕ್ಕಿನಡಿ ಮಾಹಿತಿ ಕೇಳಿದ್ರು ಕೂಡ ಅಧಿಕಾರಿಗಳು ಪ್ರತಿಕ್ರಿಯಿಸದೇ ಮೌನವಹಿಸಿದ್ದಾರೆ. ಅಲ್ಲದೇ ಅಧಿಕಾರಿಗಳ ಹಿಂಬಾಲಕರಿಂದ ದೌರ್ಜನ್ಯ ವೆಸಗಿ, ಅರ್ಜಿದಾರನಿಗೆ ಧಮ್ಕಿ ಹಾಕಿದ್ದಾರೆ. ಹೀಗಾಗಿ ಈ ವಿಚಾರವನ್ನು ತಾಲೂಕು ಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯ್ತಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನಾವಾಗಿಲ್ಲವೆಂದು ಸತೀಶ್ ಅಸಮಾಧಾನ ಹೊರಹಾಕಿದ್ದಾರೆ. ಹಾಗೆಯೇ ಈ ಅವ್ಯವಹಾರದ (scam) ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಮೇಲಾಧಿಕಾರಿಗಳಿಗೆ ಆಗ್ರಹಿಸಿದ್ದಾರೆ.
ತಳಕು ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವಂತೆ ಬೀದಿಗಿಳಿದ ಗ್ರಾಮಸ್ಥರು
ಇನ್ನು ಈ ಅವ್ಯವಹಾರ, ವ್ಯವಸ್ಥಿತವಾಗಿ ನಡೆದಿದೆ. ಅಕ್ರಮದ ವಾಸನೆ ಎಲ್ಲರ ಮೂಗಿಗೂ ಬೀರಿದೆ. ಆದರೆ ಜನಪ್ರತಿನಿಧಿಗಳು ಹಾಗೂ ಮೇಲಾಧಿಕಾರಿಗಳು ಮಾತ್ರ ಈವರೆಗೆ ಅಕ್ರಮದ ಬಗ್ಗೆ ಧ್ವನಿ ಎತ್ತದೇ ಜಾಣ ಕುರುಡುತನ ಪ್ರದರ್ಶಿಸುತಿದ್ದಾರೆ.ಈ ಅಕ್ರಮದ ಬಗ್ಗೆ ಗ್ರಾಮ ಪಂಚಾಯ್ತಿ ಪಿಡಿಒ (PDO) ಅವರನ್ನು ಕೇಳಿದ್ರೆ, ಅರ್ಜಿದಾರರು, ಮಾಹಿತಿ ಹಕ್ಕಿನ ಡಿಡಿಯನ್ನು ವಾಟ್ಸಪ್ ನಲ್ಲಿ (Whatsapp) ನನಗೆ ಹಾಕಿದ್ದಾರೆ. ಹೀಗಾಗಿ ಅವರಿಗೆ ಮಾಹಿತಿ ನೀಡಿಲ್ಲ. ನಮ್ಮ ಪಂಚಾಯ್ತಿಯಲ್ಲಿ ಯಾವುದೇ ಅವ್ಯವಹಾರ ಮಾಡಿಲ್ಲ. ಅವರ ಆರೋಪಗಳೆಲ್ಲಾ ಸುಳ್ಳು ಎಂದು ಬ್ಯಾಲಾಳ್ ಗ್ರಾ.ಪಂ ಪಿಡಿಒ ಅಸ್ಮಾ ಹಾರಿಕೆ ಉತ್ತರ ನೀಡಿದ್ದಾರೆ.
ಕೋಟೆನಾಡಿಗೆ ಮೆಡಿಕಲ್ ಕಾಲೇಜ್ ಬಂದ್ರೆ 200 ವಿದ್ಯಾರ್ಥಿಗಳಷ್ಟೇ ಹೆಲ್ಪ್ ಆಗೋದು: ಮುರುಗ ಶರಣರು
ಒಟ್ಟಾರೆ ಗ್ರಾಮಾಭಿವೃದ್ಧಿಗೆ ಬಿಡುಗಡೆಯಾದ ಹಣ, ಅಭಿವೃದ್ಧಿಗೆ ಸಹಕಾರಿಯಾಗದೇ ಅಧಿಕಾರಿಗಳ ಜೇಬು ಸೇರಿದೆ ಎಂಬ ಆರೋಪ ದಟ್ಟವಾಗಿದೆ. ಹೀಗಾಗಿ ಸಂಬಂಧಪಟ್ಟವರು ಈ ಬ್ಯಾಲಾಳ್ ಗ್ರಾಮ ಪಂಚಾಯ್ತಿ ಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ಸೂಕ್ತ ತನಿಖೆ ನಡೆಸಿ, ಸರ್ಕಾರದ (Govt) ಹಣ ನುಂಗಿರುವವರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಮತ್ತೆ ಇಂತಹ ಅಕ್ರಮ ನಡೆಯದಂತೆ ಕಟ್ಟೆಚ್ಚರ ವಹಿಸಬೇಕಿದೆ.