PSI Recruitment Scam: ತನಿಖಾಧಿಕಾರಿಗಳ ವಿರುದ್ಧ ಆರ್‌ಟಿಐ ಕಾರ್ಯಕರ್ತ ಹಿರೇಮಠ ದೂರು

By Kannadaprabha News  |  First Published Jan 27, 2023, 1:16 PM IST
  • ಪಿಎಸ್‌ಐ ಹಗರಣದ ತನಿಖಾಧಿಕಾರಿಗಳ ವಿರುದ್ಧ ಆರ್‌ಟಿಐ ಕಾರ್ಯಕರ್ತ ಹಿರೇಮಠ ದೂರು
  • ಅಕ್ರಮದಲ್ಲಿ ಹೆಸರು ಕೇಳಿಬಂದರೂ ಹಲವರನ್ನು ತನಿಖೆಗೊಳಪಡಿಸದೆ ಸಿಐಡಿ ಅಧಿಕಾರಿಗಳಿಂದ ಕರ್ತವ್ಯಲೋಪ ಆರೋಪ

ಕಲಬುರಗಿ (ಜ.27) : ಪಿಎಸ್‌ಐ ಹಗರಣ ತನಿಖೆ ವಿಚಾರದಲ್ಲಿ ಕಳೆದ 3 ದಿನದಿಂದ ಆರೋಪ- ಪ್ರತ್ಯಾರೋಪಗಳು ಕಳಿಬರಲಾರಂಭಿಸಿವೆ. ಕೇಸಿಂದ ಬಚಾವ್‌ ಆಗಲು ಸಿಐಡಿ ತನಿಖಾಧಿಕಾರಿಗಳೇ ಹಣ ನೀಡಿದ್ದಾಗಿ ಕಿಂಗ್‌ಪಿನ್‌ ಆರ್‌ಡಿ ಪಾಟೀಲ್‌ ಆರೋಪದ ಬೆನ್ನಲ್ಲೇ ಸದರಿ ಹಗರದಲ್ಲಿ ಶಾಸಕರು, ಸಂಬಂಧಿಕರ ಹೆಸರು ಕೇಳಿ ಬಂದರೂ ಅವರನ್ನು ವಿಚಾರಣೆಗೆ ಒಳಪಡಿಸದೆ ಸಿಐಡಿ ಕರ್ತವ್ಯಲೋಪ ಎಸಗಿದೆ ಎಂದು ಇಲ್ಲಿನ ಮಾಹಿತಿ ಹಕ್ಕು ಅಧ್ಯಯನ ಕೇಂದ್ರದ ಆರ್‌ಟಿಐ ಕಾರ್ಯಕರ್ತ ಸಿದ್ರಾಮಯ್ಯ ಹಿರೇಮಠ ದೂರಿದ್ದಾರೆ.

ಮುಖ್ಯಮಂತ್ರಿ ಬೊಮ್ಮಾಯಿ(CM Basavaraj Bommai) ಹಾಗೂ ಸಿಐಡಿ ಆರ್ಥಿಕ ಅಪರಾಧ ವಿಭಾಗದ ಪೊಲೀಸ್‌ ಮಹಾ ನಿರ್ದೇಶಕರಿಗೆ ಲಿಖಿತವಾಗಿಯೇ ದೂರನ್ನು ಸಲ್ಲಿಸಿರುವ ಇವರು ಚೌಕ್‌ ಠಾಣೆಯಲ್ಲಿ ಕಳೆದ ಏ. 24ರಂದು ದಾಖಲಾಗಿದ್ದ 48/ 2022 ಪ್ರಕರಣದಲ್ಲಿ ಸಲ್ಲಿಕೆಯಾಗಿರುವ ದೋಷಾರೋಪಣೆ ಪಟ್ಟಿಯ 1911 ರಿಂದ 1913 ರ ವರೆಗಿನ 3 ಪುಟಗಳಲ್ಲಿನ ಮಾಹಿತಿಗಳು, ಆರೋಪಿಗಳ ಹೇಳಿಕೆ ಗಳನ್ನು ಉಲ್ಲೇಖಿಸಿ ತಮ್ಮ ಲಿಖಿತ ದೂರು ಸಲ್ಲಿಸಿ ವಿಚಾರಣೆಗೆ ಆಗ್ರಹಿಸಿದ್ದಾರಲ್ಲದೆ ಸಿಐಡಿ ತನಿಖಾಧಿಕಾರಿಗಳಾದ ಡಿವೈಎಸ್ಪಿ ಶಂಕರಗೌಡ ಪಾಟೀಲ್‌, ಪ್ರಕಾಶ ರಾಠೋಡರ ವಿರುದ್ಧ ಶಿಸ್ತು ಕ್ರಮಕ್ಕೂ ಒತ್ತಾಯಿಸಿದ್ದಾರೆ. ಇದರ ಜೊತೆಗೇ ಕಳೆದ ಆಗಸ್ಟ್‌ನಲ್ಲಿ ದಾಖಲಾಗಿರುವ 0182/ 2022 ಅಪರಾಧ ಸಂಖ್ಯೆಯ ಪ್ರಕರಣದಲ್ಲಿನ ಹಲವು ಸಂಗತಿಗಳನ್ನೂ ತಮ್ಮ ದೂರು ಪತ್ರದಲ್ಲಿ ಉಲ್ಲೇಖಿಸಿ ಗಮನ ಸೆಳೆದಿದ್ದಾರೆ.

Latest Videos

undefined

ಕಲಬುರಗಿಯಲ್ಲಿ ಸಿಎಂ ಬೊಮ್ಮಾಯಿಗೆ ಸ್ವಾಗತ ಕೋರಿ ಆರ್‌.ಡಿ ಪಾಟೀಲ್‌ ಬ್ಯಾನರ್‌

ಅಲಕ್ಷ್ಯ ಯಾಕೆ?

ಸಿಐಡಿ ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಅನೇಕ ಸಂಗತಿಗಳು ಗೊಂದಲಮಯವಾಗಿವೆ. ಚೌಕ್‌ ಠಾಣೆಯ ಪ್ರಕರಣದಲ್ಲಿ ಸುರೇಶ ಕಾಟೆಗಾಂವ್‌, ಕಾಳಿದಾಸ್‌, ಸದ್ದಾವåರನ್ನು ಸಿಐಡಿ ವಶಕ್ಕೆ ಪಡೆದು ಜೈಲಿಗೆ ತಳ್ಳಿತ್ತು.

ಆದರೆ ಇದೇ ಪ್ರಕರಣದಲ್ಲಿ ಸಿಐಡಿ ವಿಚಾರಣೆ ಮುಂದುವರಿಸಿ ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿನ ಪುಟ ಸಂಖ್ಯೆ 1911 ರಿಂದ 1913 ರಲ್ಲಿ ಆರೋಪಿತ ರುದ್ರಗೌಡ ಪಾಟೀಲ್‌ ಹೇಳಿಕೆಯಲ್ಲಿ ಅಫಜಲ್ಪುರ ಶಾಸಕರಾದ ಎಂವೈ ಪಾಟೀಲ್‌ ಅವರ ಪುತ್ರ, ಜಿಪಂ ಮಾಜಿ ಸದಸ್ಯ ಅರುಣ ಪಾಟೀಲ ತಮ್ಮ ತಂದೆ ಅಂಗರಕ್ಷಕ ಹೈಯ್ಯಾಳಿ ದೇಸಾಯಿ ಪಿಎಸ್‌ಐ ಪರೀಕ್ಷೆ ಹಾಕಿದ್ದು ಅವರನ್ನು ಪಿಎಸ್‌ಐ ಮಾಡಿಸುವಂತೆ ಕೇಳಿಕೊಂಡಿದ್ದಕ್ಕೆ, ಇವರ ಹಣ ಯಾರು ಕೊಡುತ್ತಾರೆಂಬ ಪ್ರಶ್ನೆಗೆ ತಮ್ಮ ಚಿಕ್ಕಪ್ಪ ಎಸ್‌.ವೈ. ಪಾಟೀಲರು (ಶಾಸಕ ಎಂವೈಪಿ ಸಹೋದರರು) 10 ಲಕ್ಷ ರು ಮುಂಗಡ ನೀಡಿರುತ್ತಾರೆಂದು ತಿಳಿಸಲಾಗಿದೆ.

ಈ ಸಂಗತಿ ಆರೋಪ ಪಟ್ಟಿಯಲ್ಲಿ ದಾಖಲಾಗಿದ್ದರೂ ಸಿಐಡಿ ತನಿಖಾಧಿಕಾರಿಗಳಾದ ಶಂಕರಗೌಡ ಪಾಟೀಲ್‌ ಹಾಗೂ ಪ್ರಕಾಶ ರಾಠೋಡ ಇವರು ಶಾಸಕರ ಪುತ್ರ, ಸಹೋದರರನ್ನು ತನಿಖೆಗೆ ಒಳಪಡಿಸದೆ ಕರ್ತವ್ಯ ಲೋಪ ಎಸಗಿದ್ದಾರೆ.

ಇದಲ್ಲದೆ ಪಿಎಸ್‌ಐ ಹಗರಣದಲ್ಲಿ ಅಭ್ಯರ್ಥಿಗಳಿಗೆ ಸರಿ ಉತ್ತರ ಪೂರೈಸಿರುವ ತಂಡ, ಉತ್ತರ ಸಿದ್ಧಪಡಿಸಿದವರÜನ್ನು ಬಂಧಿಸದಿರುವುದೂ ಹಲವು ಶಂಕೆಗಳನ್ನು ಹುಟ್ಟು ಹಾಕಿದೆ ಎಂದೂ ಸಿದ್ರಾಮಯ್ಯ ದೂರಿನಲ್ಲಿ ಹೇಳಿದ್ದಾರೆ.

ತಾವು ಪ್ರಕರಣದ ಆರೋಪಿ ದಿವ್ಯಾ ಹಾಗರಗಿಯವರ ಆತ್ಮೀಯನಾಗಿದ್ದೇನೆಂದು ತಮ್ಮನ್ನು ಸಿಐಡಿ ಅಧಿಕಾರಿ ಶಂಕರಗೌಡರು ಹಲವಾರು ಪ್ರಶ್ನೆ ಕೇಳಿದ್ದಾರೆ. ಅವರ ತನಿಖೆಗೆ ತಾವು ಸಹರಕರಿಸಿರೋದಾಗಿ ಹೇಳಿರುವ ಹಿರೇಮಠ, ತಾವು ಹಗರಣದಲ್ಲಿ ಇಲ್ಲದಿದ್ದರೂ ಸಹ ಹಲವರ ಮಾತು ಕೇಳಿ ಸಿಐಡಿ ತಮ್ಮ ವಿಚಾರಣೆ ಮಾಡಿದೆ ಎಂದು ದೂರಿರುವ ಸಿದ್ರಾಮಯ್ಯ ಆರೋಪಿಯೇ ಹೆಸರು ಪ್ರಸ್ತಾಪಿಸಿದ ಶಸಾಕರು, ಅವರ ಸಹೋದರ, ಪುತ್ರನನ್ನು ವಿಚಾರಣೆಗೊಳಪಡಿಸದೆ ಇರೋದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ದೂರಿದ್ದಾರೆ.

ಪಿಎಸ್‌ಐ ಹಗರಣದ ಕಿಂಗ್‌ಪಿಎನ್‌ ಆರ್‌ಡಿ ಪಾಟೀಲ್‌ ಬ್ಯಾನರ್‌, ಕಟೌಟ್‌ ಅಬ್ಬರ!

ಎಂಎಸ್‌ಐ, ನೋಬಲ್‌ ಕಾಲೇಜಿನಲ್ಲಿ ನಡೆದ ಅಕ್ರಮದಲ್ಲಿ ಶ್ಯಾಮೀಲಾದ ಆರೋಪಿಗಳ ಬಂಧನವಾಗಿದೆ. ಕಾಲೇಜು ಆಡಳಿತ ಮಂಡಳಿ ವಿಚಾರಣೆಗೊಳಪಡಿಸದೆ ಇರೋದು ಸಹ ಅನುಮಾನ ಮೂಡುವಂತೆ ಮಾಡಿದೆ. ವಿವಿಧ ಠಾಣೆ ಪ್ರಕರಣದಲ್ಲಿ ಆರೋಪಿಗಳ ಹೆಸರು ನಮೂದಿಸದೆ ಇರೋದು, ಅಲ್ಲಿನ ಕೆಲಸ ಮಾಡಿದ ಸಿಬ್ಬಂದಿಗೆ ವಿಚಾಣೆಗೊಳಪಡಿಸದಿರೋದು ಸಹ ಸಂಶಯಗಳಿಗೆ ಕಾರಣವಾಗಿದೆ ಎಂದು ದೂರಿನಲ್ಲಿ ಹಿರೇಮಠ ವಿವರಿಸಿ ಕ್ರಮಕ್ಕೆ ಆಗ್ರಹಿಸಿದ್ದಾರೆ.

click me!