ಬೆಳ್ತಂಗಡಿ: ನೇತ್ರಾವದಿ ನದಿಯಲ್ಲಿ ಮುಳುಗಿ ಆರ್‌ಎಸ್‌ಎಸ್‌ ಕಾರ್ಯಕರ್ತ ಸಾವು

By Kannadaprabha News  |  First Published Dec 4, 2024, 10:18 AM IST

ಪ್ರಸಾದ್ ಅವರು ಸಂಘದ ಪ್ರಚಾರಕರಾಗಿ 5 ವರ್ಷ ಕಾರ್ಯನಿರ್ವಹಿಸಿ ಪ್ರಸ್ತುತ ಪುತ್ತೂರು ಜಿಲ್ಲಾ ಧರ್ಮಜಾಗರಣ ಜಿಲ್ಲಾ ಸಂಯೋಜಕರಾಗಿದ್ದರು. ಸ್ವಯಂ ಸೇವಕರಿಗೆ ಪ್ರಸಾದಣ್ಣ ನಿಜಾ ಅರ್ಥದಲ್ಲಿ ಅಣ್ಣನೇ ಆಗಿದ್ದರು.


ಬೆಳ್ತಂಗಡಿ(ಡಿ.04):  ನೇತ್ರಾವದಿ ನದಿಯಲ್ಲಿ ಈಜಾಡಲು ತೆರಳಿ ನೀರುಪಾಲಾಗಿದ್ದ ಬೆಳಾಲು ಗ್ರಾಮದ ಸುರುಳಿ ಕುಂಡಡ್ಕ ನಿವಾಸಿ ಪ್ರಸಾದ್ (38) ಅವರ ಮೃತದೇಹ ಪತ್ತೆಯಾಗಿದೆ. ಇವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿದ್ದರು. 

ಸೋಮವಾರ ನೇತ್ರಾವತಿ ಈಜಾಡಲು ಸಂಜೆ ನದಿಯಲ್ಲಿ ಮೂವರು ಇಳಿದಿದ್ದರು. ಈ ವೇಳೆ ಪ್ರಸಾದ್ ನೀರಿನ ಸೆಳೆತಕ್ಕೆಸಿಲುಕಿ ಮುಳುಗಿ ನಾಪತ್ತೆಯಾಗಿದ್ದರು. ಸೋಮವಾರ ತಡರಾತ್ರಿ ಶವವನ್ನು ಮೇಲೆತ್ತಲಾಗಿದೆ. ಉಳಿದ ಇಬ್ಬರನ್ನು ರಕ್ಷಿಸಲಾಗಿತ್ತು. 

Tap to resize

Latest Videos

ಮಂಗಳೂರು: ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೈಸೂರಿನ ಮೂವರು ಯುವತಿಯರು ಸಾವು

ಬೆಳಾಲು ಗ್ರಾಮದ ಸುರುಳಿ ಕುಂಡಡ್ಕ ಎಂಬಲ್ಲಿಯ ಓಡಿ ಎಂಬವರ ಪುತ್ರ ಪ್ರಸಾದ್ ವಿವಾಹಿತರಾಗಿದ್ದು ಪತ್ನಿ, ಓರ್ವ ಪುತ್ರ ಇದ್ದಾನೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಶೌರ್ಯ ತುರ್ತು ಸ್ಪಂದನ ಘಟಕದ ಸಂಯೋಜಕ ಸುಲೈಮಾನ್, ಕ್ಯಾಪ್ಟನ್ ಸಂತೋಷ್ ಮಾಚಾರ್, ಜಗದೀಶ್, ಸಂಜೀವ ಮೊದಲಾದವರು ಸ್ಥಳಕ್ಕೆ ತೆರಳಿ ಹುಡುಕಾಟ ನಡೆಸಿದರು. ಬಳಿಕ ಅಗ್ನಿಶಾಮಕ ದಳದ ಬೋಟ್ ಬಳಸಿ ನಿರಂತರ ಎರಡು ಗಂಟೆ ಹುಡುಕಾಟ ನಡೆಸಿದ್ದು ರಾತ್ರಿ 11 ಗಂಟೆ ವೇಳೆಗೆ ನದಿ ನೀರಿನ ಆಳದಲ್ಲಿ ಮೃತದೇಹ ಪತ್ತೆಯಾಯಿತು. 

ಕಾಲ ಬೆಳ್ತಂಗಡಿಯ ಮುಳುಗು ತಜ್ಞ ಇಸ್ಮಾಯಿಲ್, ಜೆಸಿಬಿ ಚಾಲಕ ಶಾಕೀರ್, ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರಾದ ಅವಿನಾಶ್ ಭಿಡೆ, ರವೀಂದ್ರ ಉಜಿರೆ, ಕಿರಣ್, ರಮೇಶ್ ಕೂಡಿಗೆ, ಧನೇಶ್ ಉಜಿರೆ ಮತ್ತಿತರರು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು. 

ಘಟನೆಯ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಸಾದ್ ಅವರು ಸಂಘದ ಪ್ರಚಾರಕರಾಗಿ 5 ವರ್ಷ ಕಾರ್ಯನಿರ್ವಹಿಸಿ ಪ್ರಸ್ತುತ ಪುತ್ತೂರು ಜಿಲ್ಲಾ ಧರ್ಮಜಾಗರಣ ಜಿಲ್ಲಾ ಸಂಯೋಜಕರಾಗಿದ್ದರು. ಸ್ವಯಂ ಸೇವಕರಿಗೆ ಪ್ರಸಾದಣ್ಣ ನಿಜಾ ಅರ್ಥದಲ್ಲಿ ಅಣ್ಣನೇ ಆಗಿದ್ದರು.

ಮಂಗಳೂರು ಬರ್ಕಜೆ ಡ್ಯಾಮ್ ದುರಂತ: ಮೂವರು ಯುವಕರು ನೀರುಪಾಲು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ನೈಸರ್ಗಿಕ ಸೌಂದರ್ಯವನ್ನು ನೋಡಲು ನೆಂಟರ ಮನೆಗೆ ಬಂದಿದ್ದ ಮೂವರು ಯುವಕರು ಬರ್ಕಜೆ ಡ್ಯಾಮ್‌ನಲ್ಲಿ ಈಜಲು ಹೋಗಿ ನೀರಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿದ ಘಟನೆ ನ.27 ರಂದು ನಡೆದಿತ್ತು. 

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಮೂಡುಕೋಡಿ ಗ್ರಾಮದ ಬರ್ಕಜೆ ಡ್ಯಾಂ ನಲ್ಲಿ ಘಟನೆ ನಡೆದಿದೆ. ಡ್ಯಾಮ್‌ನ ಹಿನ್ನೀರಿನಲ್ಲಿ ಸ್ನಾನ ಮಾಡಲು ಹೋದ ಮೂವರು ಯುವಕರು ನೀರುಪಾಲು ಆಗಿದ್ದಾರೆ. ಎಡಪದವಿನ ಲಾರೆನ್ಸ್(20), ಮಡಂತ್ಯಾರಿನ ಸೂರಜ್ (19), ವಗ್ಗದ ಜೈಸನ್(19) ನದಿಯಲ್ಲಿ ಮುಳುಗಿದ ಯುವಕರಾಗಿದ್ದಾರೆ. ಇವರು ಮೂಡುಕೋಡಿ ವಾಲ್ಟರ್ ಎಂಬವರ ಮನೆಗೆ ಬಂದಿದ್ದರು. ಮಧ್ಯಾಹ್ನದ ಊಟ ಮುಗಿಸಿ ನದಿಯಲ್ಲಿ ಸ್ನಾನ ಮಾಡಲು ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿತ್ತು. 

ಹಾವೇರಿ: ಕುಮದ್ವತಿ ನದಿಯಲ್ಲಿ ಮುಳುಗಿ ವೃದ್ಧೆ ಸಾವು, ಜೀವದ ಹಂಗು ತೊರೆದು ರಕ್ಷಿಸಲು ಮುಂದಾದ ಬಸ್‌ ಚಾಲಕ..!

ಇನ್ನು ನದಿಗೆ ಈಜಲು ತೆರಳಿದ್ದವರು ಈ ವೇಳೆ ನೀರಿನ ರಭಸ ಹೆಚ್ಚಾಗಿ ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಒಬ್ಬರು ಇನ್ನೊಬ್ಬರ ಕೈಯನ್ನು ಹಿಡಿದುಕೊಂಡು ರಕ್ಷಣೆಗೆ ಮುಂದಾಗಿ ಇದೀಗ ಮೂವರೂ ಒಟ್ಟಿಗೆ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಸ್ಥಳೀಯರು ಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಬೆನ್ನಲ್ಲಿಯೇ ಸ್ಥಳಕ್ಕೆ ವೇಣೂರು ಪೊಲೀಸರು ಬಂದು ಸ್ಥಳ ಪರಿಶೀಲನೆ ನಡೆಸಿ ಅಗ್ನಿಶಾಮಕ ದಳ ಹಾಗೂ ಮುಳುಗು ತಜ್ಞರ ಸಹಾಯದ ಮೂಲಕ ಮೃತ ದೇಹಗಳನ್ನು ಹೊರಗೆ ತೆಗೆದಿದ್ದರು. 

ಮೂವರೂ ವಿದ್ಯಾರ್ಥಿಗಳು ಮಂಗಳೂರಿನ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ. ಇನ್ನು ವಾಲ್ಟರ್ ಎಂಬುವವರ ಮನೆಯಲ್ಲಿದ್ದ ಕಾರ್ಯಕ್ರಮವೊಂದಕ್ಕೆ ಬಂದಿದ್ದ ವಿದ್ಯಾರ್ಥಿಗಳು ಒಟ್ಟಿಗೆ ಈಜಾಡಲು ತೆರಳಿ ಇದೀಗ ದುರಂತ ಅಂತ್ಯ ಕಂಡಿದ್ದರು. 

click me!