ಗೃಹ ಸಚಿವ ಪ್ರಿಯಾಂಕ್ ಖರ್ಗೆ ತವರು ಜಿಲ್ಲೆಯಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಪೊಲೀಸ್ ಅನುಮತಿ

Published : Oct 24, 2026, 12:49 PM IST
Police Approve RSS March Kalaburagi

ಸಾರಾಂಶ

ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತವರು ಜಿಲ್ಲೆ ಕಲಬುರಗಿಯಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಪೊಲೀಸರು ಅನುಮತಿ ನೀಡಿದ್ದಾರೆ. ಆರ್‌ಎಸ್‌ಎಸ್ ಮನವಿ ಪತ್ರ ಆಧರಿಸಿ ಅನುಮತಿ ನೀಡಿದೆ.

ಕಲಬುರಗಿ (ಅ.24) ರಾಜ್ಯದಲ್ಲಿ ಆರ್‌ಎಸ್ಎಸ್ ಪಥಸಂಚಲನ ಭಾರಿ ವಿವಾದಕ್ಕೆ ಕಾರಣವಾಗಿತ್ತು. ವಿಜಯದಶಮಿ ಅಂಗವಾಗಿ ಪ್ರತಿ ವರ್ಷದಂತೆ ಆರ್‌ಎಸ್‌ಎಸ್ ಪಥಸಂಚಲನ ನಡೆಸಲು ಮುಂದಾಗಿತ್ತು. ಆದರೆ ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಈ ಕುರಿತು ಮಹತ್ವದ ಹೇಳಿಕೆ ನೀಡಿದ್ದರು.ಬಾಯಿ ಮಾತಿನಲ್ಲಿ ಹೇಳಿದರೆ ಸಾಧ್ಯವಿಲ್ಲ, ಪಥಸಂಚಲನಕ್ಕೆ ಅನುಮತಿ ಕಡ್ಡಾಯ ಎಂದು ಸೂಚಿಸಿದ್ದರು. ಇದೀಗ ಆರ್‌ಎಸ್‌ಎಸ್ ಮುಖಂಡರು ನೀಡಿದ್ದ ಮನವಿ ಆಧರಿಸಿ ಉಪ ಪೊಲೀಸ್ ಕಮಿಷನರ್ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ನೀಡಿದ್ದಾರೆ. ಅನುತಿ ಹಿನ್ನಲೆಯಲ್ಲಿ ಇದೀಗ ಆರ್‌ಎಸ್‌ಎಸ್ ಮುಖಂಡರು ನಾಳೆ (ಅ.25) ಮಧ್ಯಾಹ್ನ 3 ಗಂಟೆಯಿಂದ ಪಥಸಂಚಲನ ನಡೆಸಲು ತಯಾರಿ ಆರಂಭಿಸಿದ್ದಾರೆ.

ಷರತ್ತು ಬದ್ದ ಅನುಮತಿ ನೀಡಿದ ಪೊಲೀಸ್

ಕಲಬುರಗಿಯಲ್ಲಿ ಆರ್‌ಎಸ್‌ಎಸ್ ಪಥಸಂಚಲನ ನಡೆಸಲು ನಾಯಕರಿಗೆ ಷರತ್ತುಬದ್ದ ಅನುಮತಿಯನ್ನು ಪೊಲೀಸ್ ನೀಡಿದೆ. ಪ್ರಚೋದನಕಾರಿ ಬ್ಯಾನರ್ ಅಳವಡಿಸದಂತೆ ಎಚ್ಚರಿಕೆ ವಹಿಸಬೇಕು, ಜನ ಸಂದಣಿ ನಿಯಂತ್ರಣಕ್ಕೆ ಸ್ವಯಂ ಸೇವಕರ ನಿಯೋಜನೆ ಮಾಡಿಕೊಳ್ಳಬೇಕು, ಅಶ್ಲಿಲ ಭಾಷೆ, ಅಶ್ಲೀಲ ಹಾಡು, ಅಶ್ಲೀಲ ನೃತ್ಯ ಇಲ್ಲದಂತೆ ನೋಡಿಕೊಳ್ಳಬೇಕು ಎನ್ನುವುದು ಸೇರಿ 18 ಶರತ್ತು ವಿಧಿಸಿ ಅನುಮತಿ ನೀಡಲಾಗಿದೆ.

ಕಲಬುರಗಿಯ ಎಪಿಎಂಸಿ ಬಳಿಯಿಂದ ಮಧ್ಯಾಹ್ನ 3 ಗಂಟೆಗೆ ಆರ್‌ಎಸ್‌ಎಸ್ ಪಥಸಂಚಲನ ಆರಂಭಗೊಳ್ಳಲಿದೆ. ಮಿಜಗುರಿ ಕ್ರಾಸ್, ಚಡ್ಡಿ ಹೋಟೆಲ್, ಗಣೇಶ ಮಂದಿರ, ಜಗತ್ ಸರ್ಕಲ್ ಮಾರ್ಗವಾಗಿ ಶರಣಬಸವೇಶ್ವರರ ಜಾತ್ರಾ ಮೈದಾನದವರೆಗೆ ಪಥ ಸಂಚಲನ ನಡೆಯಲಿದೆ. ವಿಜಯ ದಶಮಿ ಅಂಗವಾಗಿ RSS ನಡೆಸುತ್ತಿರುವ ಪಥ ಸಂಚಲನಕ್ಕೆ ಪೊಲೀಸ್ ಅನುಮತಿ ನೀಡಿದೆ. ಹೀಗಾಗಿ ಸಾವಿರಕ್ಕೂ ಹೆಚ್ಚು ಗಣ ವೇಷಧಾರಿಗಳು ಭಾಗಿಯಾಗಲಿರುವ ಪಥ ಸಂಚಲನದಲ್ಲಿ ಭಾಗಿಯಾಗಲಿದ್ದಾರೆ. ಗಣವೇಷಧಾರಿಗಳು ಮಾತ್ರವಲ್ಲದೇ ಸಾವಿರಾರು ಜನರು ಸಹ ಭಾಗಿಯಾಗುವ ಸಾಧ್ಯತೆ ಇದೆ.

ಗಣವೇಷಧಾರಿಗಳ ಪಥಸಂಚಲನ ಕುರಿತು ಸಂಪೂರ್ಣ ಮಾಹಿತಿಯನ್ನು ಆರ್‌ಎಸ್ಎಸ್ ಮುಖಂಡರು ಪೊಲೀಸರಿಗೆ ನೀಡಿದ್ದಾರೆ. ಎಷ್ಟು ಗಣವೇಷಧಾರಿಗಳು ಭಾಗವಹಿಸುತ್ತಾರೆ, ಸ್ವಯಂ ಸೇವಕರ ಸಂಖ್ಯೆ, ಬ್ಯಾಂಡ್ ಸಂಖ್ಯೆ ಸೇರಿದಂತೆ ಎಲ್ಲಾ ಮಾಹಿತಿಯನ್ನು ಮನವಿ ಪತ್ರದಲ್ಲಿ ನೀಡಲಾಗಿದೆ. ಇದೇ ವೇಳೆ ಸಾರ್ವಜನಿಕರು ದಾರಿಯುದ್ದಕ್ಕೂ ಪಾಲ್ಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಭಿಗಿ ಬಂದೋಬಸ್ತ್ ಮಾಡಿಕೊಳ್ಳಲಾಗುತ್ತಿದೆ.

ಪ್ರಿಯಾಂಕ್ ಖರ್ಗೆ ಸೂಚನೆಯಿಂದ ತೀವ್ರ ಸ್ವರೂಪ ಪಡೆದಿದ್ದ ಪಥಸಂಚಲನ

ಆರ್‌ಎಸ್ಎಸ್ ಯಾವುದೇ ಚಟುವಟಿಕೆಗೂ ಅನುಮತಿ ಪಡೆಯಬೇಕು. ಬಾಯಿ ಮಾತಿನಲ್ಲಿ ಪೊಲೀಸರಿಗೆ ಸೂಚನೆ ನೀಡಿದರೆ ಸಾಲದು. ಇತರರಿಗೆ ಅನ್ವಯವಾಗುವಂತೆ ಎಲ್ಲಾ ಕಾನೂನು ಆರ್‌ಎಸ್ಎಸ್‌ಗೂ ಅನ್ವಯವಾಗಲಿದೆ. ಹೀಗಾಗಿ ಅಧಿಕೃತ ಅನುಮತಿ ಕೇಳಿ ಪೊಲೀಸರಿಗೆ ಮನವಿ ಪತ್ರ ನೀಡಬೇಕು. ಸೂಕ್ತ ಎನಿಸಿದರೆ ಅನುಮತಿ ನೀಡಲಾಗುವುದು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದರು. ಅನುಮತಿ ಇಲ್ಲದೆ ಯಾವುದೇ ಪಥಸಂಚಲನಕ್ಕೆ ಅವಕಾಶ ನೀಡುವುದಿಲ್ಲ, ಕಾನೂನಿನ ಚೌಕಟ್ಟಿನಲ್ಲಿ ಸೂಕ್ತ ಎನಿಸಿದರೆ ಅನುಮತಿ ನೀಡಲಾಗುವುದು ಎಂದು ಪ್ರಿಯಾಂಕ್ ಖರ್ಗೆ ಸೂಚಿಸಿದ್ದರು

PREV
Read more Articles on
click me!

Recommended Stories

ಶಿವಮೊಗ್ಗ ದಸರಾ ಕಹಿ ಘಟನೆ, ಇದು ದೇವಿಯ ಪವಾಡವೇ ಸೈ, ಚಾಮುಂಡೇಶ್ವರಿ ವಿಗ್ರಹ 100% ಸೇಫ್!
Chamarajanagar: ಮಲೆ ಮಹದೇಶ್ವರ ಬೆಟ್ಟದಲ್ಲಿ ಟೋಲ್ ಶುಲ್ಕ ವಸೂಲಿ ವಿರೋಧ, ಡಿಸಿಗೆ ಮನವಿ