417 ವರ್ಷಗಳ ಐತಿಹಾಸಿಕ ವಜ್ರಮುಷ್ಠಿ ಕಾಳಗಕ್ಕೆ ತಡೆಯೊಡ್ಡಿದ್ದು ಪೊಲೀಸ್, ಪತ್ರಿಕಾಗೋಷ್ಠಿಯಲ್ಲಿ ಜಟ್ಟಿಗಳ ಆರೋಪ

Published : Oct 24, 2026, 12:02 PM IST
Vajra Mushti Kalaga

ಸಾರಾಂಶ

ಮೈಸೂರು ದಸರಾ ಇತಿಹಾಸದಲ್ಲಿಯೇ ಮೊದಲ ಬಾರಿಗೆ 417 ವರ್ಷಗಳ ಐತಿಹಾಸಿಕ ವಜ್ರಮುಷ್ಠಿ ಕಾಳಗ ರದ್ದಾಗಿದೆ. ಅರಮನೆ ಎಸಿಪಿ ಮತ್ತು ಪೊಲೀಸರು ಸಕಾಲದಲ್ಲಿ ಪ್ರವೇಶ ನೀಡದೆ ಅಸಹಕಾರ ತೋರಿದ್ದೇ ಇದಕ್ಕೆ ಕಾರಣ ಎಂದು ಜಟ್ಟಿಗಳು ಆರೋಪಿಸಿದ್ದಾರೆ. ಈ ಬಗ್ಗೆ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಲು ಜಟ್ಟಿಗಳು ನಿರ್ಧರಿಸಿದ್ದಾರೆ.

ಮೈಸೂರು: ಈ ಬಾರಿ ಅರಮನೆಯಲ್ಲಿ ಜಟ್ಟಿ ಕಾಳಗ ನಡೆಯದೇ ಹೋದುದರ ಹಿಂದೆ ಜಟ್ಟಿಗಳ ತಪ್ಪೇನಿಲ್ಲ, ಬದಲಾಗಿ ಅರಮನೆ ಎಸಿಪಿ ಸಹಕರಿಸದೇ ವಿಳಂಬವಾಗಿ ಅರಮನೆ ಪ್ರವೇಶಿಸುವಂತೆ ಮಾಡಿದುದೇ ಕಾರಣ ಎಂದು ಜಟ್ಟಿಗಳು ಅಳಲು ತೋಡಿಕೊಂಡಿದ್ದಾರೆ.

ಕಾಳಗದಲ್ಲಿ ಪಾಲ್ಗೊಳ್ಳುವ ಜಟ್ಟಿಗಳೆಲ್ಲ ಬೆಳಗ್ಗೆ 8ರ ಮುನ್ನವೇ ಅರಮನೆ ಪ್ರವೇಶಿಸಿ, ಸ್ಥಳಕ್ಕೆ ಆಗಮಿಸಬೇಕೆಂದು ಸೂಚಿಸಿ ತಮಗೆಲ್ಲ ಪಾಸ್ ನೀಡಲಾಗಿತ್ತು. ಅದರಂತೆ ಬೆಳಗ್ಗೆ 8ಕ್ಕೆ ಅರಮನೆಯ ಕರಿಕಲ್ ತೊಟ್ಟಿ ಬಳಿ ಹಾಜರಾದಾಗ ಪೊಲೀಸರು ತಕರಾರು ಮಾಡಿದರು. ಸ್ಕ್ಯಾನ್ ಮಾಡುವ ಯಂತ್ರ ಬಂದಿಲ್ಲ, ಅದರಲ್ಲಿ 9.30ಕ್ಕೆ ಸ್ಕ್ಯಾನ್ ಮಾಡಿ ಎಂದಿದೆ ಎಂದು ಕಾರಣ ನೀಡಿದರು. ಆಗ ನಾವು ಕಾಳಗದಲ್ಲಿ ಪಾಲ್ಗೊಳ್ಳುವ ಜಟ್ಟಿಗಳಾಗಿದ್ದೇವೆ, ಮುಹೂರ್ತದ ಸಮಯಕ್ಕೆ ಸರಿಯಾಗಿ ಅಲ್ಲಿರಬೇಕೆಂದು ಪರಿಪರಿಯಾಗಿ ಕೇಳಿಕೊಂಡರೂ ಬಿಡಲಿಲ್ಲ ಎಂದು ಬಾಲಾಜಿ ಜಟ್ಟಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಈ ವೇಳೆ ಅರಮನೆ ಎಸಿಪಿ ಚಂದ್ರಶೇಖರ್ ಗೆ ದೂರವಾಣಿ ಕರೆ ಮಾಡಿ ಸಮಸ್ಯೆ ವಿವರಿಸಿದೆವು. ಆದರೆ, ಅವರು ನೆರವಿಗೆ ಬರಲಿಲ್ಲ. ಕಳೆದ ಬಾರಿ ಸಹ ಇದೇ ಪರಿಸ್ಥಿತಿ ಎದುರಾಗಬೇಕಾಗಿದ್ದಾಗ ರಾಜವಂಶಸ್ಥರೊಬ್ಬರು ನೆರವಿಗೆ ಬಂದರು. ಆದರೆ, ಈ ಎಸಿಪಿ ಯಾವಾಗಲೂ ಸಹಕರಿಸುವುದಿಲ್ಲ, ಅರಮನೆ ಎಸಿಪಿ ಚಂದ್ರಶೇಖರ್ ನಾಲಾಯಕ್ ಸಾಕಷ್ಟು ವರ್ಷದಿಂದ ಬಕೆಟ್ ಹಿಡಿದುಕೊಂಡು ನಿಂತಿದ್ದಾನೆ‌ ಎಂದು ದೂರಿದರು.

ಈ ಬಾರಿ ಜಟ್ಟಿ ಕಾಳಗ ಮೈಸೂರು ದಸರಾ ಇತಿಹಾಸದಲ್ಲಿ ಇದೇ ಮೊದಲ ಬಾರಿ ಎಂಬಂತೆ ರದ್ದಾಗಿದೆ. ಈ ಕಪ್ಪು ಚುಕ್ಕೆ ಉಂಟಾಗಲು ಈ ಅಧಿಕಾರಿಗಳೇ ಕಾರಣರಾಗಿದ್ದಾರೆ. ಬೇಕಿದ್ದರೆ ಆ ವೇಳೆಯ ಸಿಸಿಟಿವಿ ದೃಶ್ಯಾವಳಿ ಯಾರಾದರೂ ಪರಿಶೀಲಿಸಲಿ. ಈ ಬಗ್ಗೆ ತಾವೆಲ್ಲ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡುತ್ತಿದ್ದೇವೆ ಎಂದರು. ಜಟ್ಟಿಗಳಾದ ಮಾಧವ ಜಟ್ಟಿ, ಕೃಷ್ಣ ಜಟ್ಟಿ, ಬಲರಾಂ ಜಟ್ಟಿ ಇದ್ದರು.

417 ವರ್ಷಗಳ ಐತಿಹಾಸಿಕ ಕಾಳಗ

ಮೈಸೂರು ರಾಜವಂಶಸ್ಥರು 417 ವರ್ಷಗಳಿಂದಲೂ ದಸರಾ ಆಚರಿಸಿಕೊಂಡು ಬಂದ ಸಂಪ್ರದಾಯದ ವಿಜಯದಶಮಿ ಮೆರವಣಿಗೆಗೂ ಮುನ್ನಾ ಜಟ್ಟಿ ಕಾಳಗ ನಡೆಯಬೇಕು. ಆದರ ವಜ್ರಮುಷ್ಠಿ ಕಾಳಗದಲ್ಲಿ ಪಾಲ್ಗೊಳ್ಳಬೇಕಾದ ಜಟ್ಟಿಗಳಿಗೇ ಅರಮನೆ ಪ್ರವೇಶಕ್ಕೆ ಅವಕಾಶ ನೀಡದ ಹಿನ್ನೆಲೆಯಲ್ಲಿ ವಜ್ರಮುಷ್ಠಿ ಕಾಳಗ ರದ್ದಾಯಿತು.

ಜಟ್ಟಿ ಕಾಳಗ ನಡೆಸುವ ಬದಲು ಜಟ್ಟಿಗಳು ಪೊಲೀಸರೊಂದಿಗೆ ಅರಮನೆ ಪ್ರವೇಶಕ್ಕಾಗಿ ಕಾಳಗ ನಡೆಸಬೇಕಾದ ಪ್ರಸಂಗ ಎದುರಾಯಿತು. ಐದು ವರ್ಷಗಳ ಹಿಂದೆ ಕೋವಿಡ್‌ ಸಂದರ್ಭದಲ್ಲಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಅವರ ತಾಯಿ ನಿಧನರಾದ ಹಿನ್ನೆಲೆಯಲ್ಲಿ ವಜ್ರಮುಷ್ಠಿ ಕಾಳಗ ರದ್ದುಪಡಿಸಿ, ಐದು ದಿನಗಳ ಬಳಿಕ ವಜ್ರಮುಷ್ಠಿ ಕಾಳಗ ನಡೆಸಿದ್ದರು.

PREV
Read more Articles on
click me!

Recommended Stories

‘ನಮ್ಮೆಲ್ಲರ ಕಣ್ಣಲ್ಲೂ ನೀರು ತುಂಬಿತ್ತು’.. 16 ವರ್ಷಗಳ ಹಿಂದಿನ ಬೆಂಗಳೂರಿನ ನೆನಪನ್ನು ಬಿಚ್ಚಿಟ್ಟ ಪೋಲೆಂಡ್ ಪ್ರಧಾನಿ!
ಬೆಂಗಳೂರು to ಬಂಡೀಪುರ, ಹಂಪಿ ಸೇರಿ ಪ್ರಮುಖ ತಾಣಕ್ಕೆ ಪ್ರವಾಸಿ ರೈಲು, ಟಿಕೆಟ್ ಬೆಲೆ ಎಷ್ಟು?