ರಂಭಾಪುರಿ ಮಠದಲ್ಲಿ ಕಾಣಿಕೆ ಹಾಕುವಾಗ ಡಿಕೆ ಶಿವಕುಮಾರ್ ಕೈಯಿಂದ ಕೆಳಗೆ ಬಿತ್ತು 500ರ ಕೆಲ ನೋಟು

Published : Sep 19, 2026, 04:21 PM IST
DK Shivakumar at Rambhapuri Mutt

ಸಾರಾಂಶ

ಡಿಕೆ ಶಿವಕುಮಾರ್ ರಂಭಾಪರಿ ಮಠದಲ್ಲಿ ಮಂಗಳಾರಾತಿಗೆ ಕಾಣಿಕೆ ಹಾಕುವಾಗ ಕೈಯಲ್ಲಿದ್ದ 500ರ ಕೆಲ ನೋಟುಗಳು ಕೆಳಗೆ ಬಿದ್ದಿದೆ. ಎಲ್ಲಾ ನೋಟು ಆಯ್ದುಕೊಂಡು ಮಂಗಳಾರತಿ ತಟ್ಟೆಗೆ ಹಾಗೂ ಕಾಣಿಕೆ ಹುಂಡಿಗೆ ಹಾಕಿದ್ದಾರೆ.

ಚಿಕ್ಕಮಗಳೂರು (ಸೆ.19) ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಕಾಫಿನಾಡು ಚಿಕ್ಕಮಗಳೂರಿಗೆ ಆಗಮಿಸಿದ ಡಿಕೆ ಶಿವಕುಮಾರ್ ರಂಭಾಪುರಿ ಮಠಕ್ಕೆ ಆಗಮಿಸಿ ಕ್ಷೇತ್ರನಾಥ ವೀರಭದ್ರಸ್ವಾಮಿ ದರ್ಶನ ಪಡೆದಿದ್ದಾರೆ. ಮಠಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ ಡಿಕೆ ಶಿವಕುಮಾರ್‌ಗೆ ಮಠದ ಶ್ರೀಗಳಿಂದ ಪ್ರಸಾದ ಸ್ವೀಕರಿಸಿದ್ದಾರೆ. ಈ ವೇಳೆ ಮಂಗಳಾರತಿ ತಟ್ಟೆಗೆ ಕಾಣಿಕೆ ಹಾಕಲು ಜೇಬಿನಿಂದ ನೋಟು ತೆಗೆದಿದ್ದಾರೆ. ಕಂತೆಯಿಂದ ನೋಟು ಎಳೆಯುವಾಗ ಕೆಲ 500ರ ನೋಟುಗಳು ಕೆಳಕ್ಕೆ ಬಿದ್ದಿದೆ.

ಎಲ್ಲಾ ನೋಟುಗಳ ಆಯ್ದುಕೊಂಡ ಡಿಕೆಶಿ

ಮಂಗಳಾರತಿ ಬಳಿಕ ಆರತಿ ತಂದಾಗ ಮುಖ್ಯಮಂತ್ರಿ ಡಿಕೆ ಶಿವಕುಮಾರ್ 500ರ ನೋಟಿಗಳ ಕಂತೆಯಿಂದ ನೋಟು ಎಳೆದು ಮಂಗಳರಾತಿ ತಟ್ಟೆಗೆ ಹಾಕಲು ಮುಂದಾಗಿದ್ದಾರೆ. ಆದರೆ ನೋಟು ಎಳೆಯುವಾಗ ಕೆಲ 500ರ ನೋಟುಗಳು ಕೆಳಕ್ಕೆ ಬಿದ್ದಿದೆ. ಬಳಿಕ ಎಲ್ಲಾ ನೋಟುಗಳನ್ನು ಡಿಕೆ ಶಿವಕುಮಾರ್ ಆಯ್ದುಕೊಂಡಿದ್ದಾರೆ. ಗರ್ಭ ಗುಡಿಯೊಳಕ್ಕೆ ಬಿದ್ದ ನೋಟನ್ನು ಶ್ರೀಗಳು ಎತ್ತಿ ನೀಡಿದ್ದಾರೆ.

ಕೆಳಕ್ಕೆ ಬಿದ್ದ ನೋಟು, ಕಂತೆಯಿಂದ ಕೈಯಲ್ಲಿ ಹಿಡಿದ ಒಂದಷ್ಟು 500 ರೂಪಾಯಿಯ ನೋಟುಗಳನ್ನು ಮಂಗಳಾರತಿ ತಟ್ಟೆಯಲ್ಲಿ ಕಾಣಿಕೆಯಾಗಿ ನೀಡಿದ್ದಾರೆ. ಬಳಿಕ ತೀರ್ಥ ಹಾಗೂ ಪ್ರಸಾದ ಸ್ವೀಕರಿಸಿದ್ದಾರೆ. ಇನ್ನು ಕೈಯಲ್ಲಿದ್ದ ಕೆಲ 500ರ ನೋಟುಗಳನ್ನು ರಂಭಾಪುರಿ ಮಠದ ಕಾಣಿಕೆ ಹುಂಡಿಗೆ ಹಾಕಿದ್ದಾರೆ.

ವೀರ ಗಂಗಾಧರ ಅಜ್ಜಯ್ಯನವರ ಪರಮ ಭಕ್ತ

ಡಿಕೆ ಶಿವುಕಮಾರ್ ಚಿಕ್ಕಮಗಳೂರಿನ ಎನ್ಆರ್ ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ರಂಭಾಪುರಿ ಮಠದ ಭಕ್ತರಾಗಿದ್ದಾರೆ. ಮಠದ ವೀರ ಗಂಗಾಧರ ಅಜ್ಜಯ್ಯನವರ ಪರಮ ಭಕ್ತರಾಗಿದ್ದಾರೆ.ವೀರ ಗಂಗಾಧರ ಅಜ್ಜಯ್ಯ ರಂಭಾಪುರಿ ಮಠದ 119ನೇ ಜಗದ್ಗುರುವಾಗಿದ್ದಾರೆ. ಚಿಕ್ಕಮಗಳೂರು ಪ್ರವಾಸದ ಹಿನ್ನಲೆಯಲ್ಲಿ ರಂಭಾಪುರಿ ಮಠಕ್ಕೆ ಆಗಮಿಸಿದ ಡಿಕೆ ಶಿವಕುಮಾರ್ ಕ್ಷೇತ್ರನಾಥ ವೀರಭದ್ರಸ್ವಾಮಿ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ. ದರ್ಶನ ಬಳಿಕ ರಂಭಾಪುರಿ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ಇದೇ ವೇಳೆ ರಂಭಾಪುರಿ ಮಠದ ಶಾಖಾ ಮಠಗಳ ಶ್ರೀಗಳ ಆಶೀರ್ವಾದವನ್ನು ಪಡೆದಿದ್ದಾರೆ. ಬಳಿಕ ರಂಭಾಪುರಿ ಶ್ರೀ ಹಾಗೂ ಶಾಖಾ ಮಠಾಧೀಶರ ಜೊತೆ ಸಮಾಲೋಚನೆ ನಡೆಸಿದ್ದಾರೆ.

ಜಗದ್ಗುರುಗಳ ಭೇಟಿ ಬಳಿಕ ಡಿಕೆ ಶಿವಕುಮಾರ್ ಸಾರ್ವಜನಿಕ ಸಭೆಗೆ ತೆರಳಿದ್ದಾರೆ. ಸಾರ್ವಜನಿಕ ಸಭೆಯಲ್ಲಿ ಕಸ್ತೂರಿ ರಂಗನ್ ವರದಿ ಬಗ್ಗೆ ರೈತರಿಂದ ಅಹವಾಲು ಸ್ವೀಕರಿಸಿದ್ದಾರೆ.

PREV
Read more Articles on
click me!

Recommended Stories

ವೇದಿಕೆಯಲ್ಲಿ ಸಂಸ್ಕತ ಶ್ಲೋಕ ಹೇಳಿದ ತಕ್ಷಣ ಸಂಸ್ಕಾರ ಬರಲ್ಲ: ನಿಖಿಲ್‌ ಕುಮಾರಸ್ವಾಮಿ ಕಿಡಿ
ಧಾರವಾಡದ ಅತ್ತೆಯ ಹೆಲ್ತ್ ಮಿಕ್ಸ್‌ಗೆ ಸೊಸೆಯ ಬಿಸಿನೆಸ್ ಟಚ್; ಇಂದು ₹25 ಲಕ್ಷದ ವಹಿವಾಟು!