ಇಬ್ಬರು ಕನ್ನಡಪರ ಹೋರಾಟಗಾರರ ಮೇಲೆ ರೌಡಿಶೀಟರ್ ಕೇಸ್ ದಾಖಲಿಸಿರುವ ಹಿನ್ನೆಲೆ ಕನ್ನಡಪರ ಸಂಘಟನೆಗಳು ನಗರದ ಸಾಹಿತ್ಯ ಭವನದಲ್ಲಿ ಸಭೆ ನಡೆಸಿದರು. ನಾಳೆ ಕನ್ನಡಪರ ಸಂಘಟನೆಗಳು ಬೆಳಗಾವಿ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ, ರೌಡಿ ಶೀಟರ್ ವಾಪಸ್‌ಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ.
ಬೆಳಗಾವಿ (ಫೆ.12) ಇಬ್ಬರು ಕನ್ನಡಪರ ಹೋರಾಟಗಾರರ ಮೇಲೆ ರೌಡಿಶೀಟರ್ ಕೇಸ್ ದಾಖಲಿಸಿರುವ ಹಿನ್ನೆಲೆ ಕನ್ನಡಪರ ಸಂಘಟನೆಗಳು ನಗರದ ಸಾಹಿತ್ಯ ಭವನದಲ್ಲಿ ಸಭೆ ನಡೆಸಿದರು.
ಇಬ್ಬರು ಕನ್ನಡಪರ ಹೋರಾಟಗಾರರ ವಿರುದ್ಧ ರೌಡಿಶೀಟರ್ ಹಾಕಿರುವ ಹಿನ್ನೆಲೆ ರಾಜ್ಯ ಸರ್ಕಾರದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಳೆ ಕನ್ನಡಪರ ಸಂಘಟನೆಗಳು ಬೆಳಗಾವಿ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ, ರೌಡಿ ಶೀಟರ್ ವಾಪಸ್‌ಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ.
ಕನ್ನಡ ಹೋರಾಟಗಾರರ ಬಗ್ಗೆ ಅವಹೇಳನಕಾರಿ ಪದ ಬಳಕೆ; ಪೆಂಟಗನ್ ಸಿನಿಮಾ ವಿರುದ್ಧ ರೂಪೇಶ್ ರಾಜಣ್ಣ ಆಕ್ಷೇಪ
ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ:
ಕನ್ನಡಪರ ಹೋರಾಟಗಾರರ ವಿರುದ್ಧ ರೌಡಿಶೀಟರ್ ಹಾಕಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕನ್ನಡ ಸಂಘಟನೆಗಳು. ರೌಡಿಶೀಟರ್ ವಾಪಸ್ ಪಡೆಯಬೇಕು. ಇಲ್ಲವಾದರೆ ರಾಜ್ಯ ಸರ್ಕಾರದ ವಿರುದ್ಧ ಉಗ್ರ ಸ್ವರೂಪ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ನಾಳೆ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುತ್ತದೆ. ಒಂದು ವೇಳೆ ಕನ್ನಡಪರ ಹೋರಾಟಗಾರರ ಮೇಲೆ ರೌಡಿಶೀಟರ್ ವಾಪಸ್ ಪಡೆಯದಿದ್ದಲ್ಲಿ ಉಗ್ರ ಹೋರಾಟಕ್ಕಿಳಿಯುವ ಬಗ್ಗೆ ಸಭೆಯಲ್ಲಿ ವಿಸ್ಕೃತವಾಗಿ ಚರ್ಚೆ ಮಾಡಲಾಗಿದೆ. ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ರೌಡಿಶೀಟ್ ಅನ್ನು ವಾಪಸ್ ಪಡೆಯಬೇಕು ಎಂದು ಎಚ್ಚರಿಸಿದರು.
ಸಿಎಂ ಬಸವರಾಜ ಬೊಮ್ಮಾಯಿ(CM Basavaraj bommai) ಕೇವಲ ಮಾತಿನಲ್ಲಿ ಕನ್ನಡ ಪ್ರೇಮ ಪ್ರದರ್ಶನ ಮಾಡಬಾರದು. ಕನ್ನಡ ಹೋರಾಟಗಾರರ ಮೇಲೆ ರೌಡಿಶೀಟರ್ ಹಾಕುವ ಪೊಲೀಸರೇ ನಿಮಗೆ ಸಂಬಳ ಕೊಡುವವರು ಮಹಾರಾಷ್ಟ್ರದವರ ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮದುವೆ ಸಂಭ್ರಮದಲ್ಲಿದ್ದ ಕನ್ನಡಪರ ಹೋರಾಟಗಾರ ಅನಿಲ್ ದಡ್ಡಿಮನಿ(Anil daddimani)ಗೆ ನೋಟಿಸ್ ನೀಡಿದ್ದಾರೆ. ಮಾರ್ಚ್ 18ರಂದು ಅನಿಲ್ ದಡ್ಡಿಮನಿ ಮದುವೆ ನಿಶ್ಚಯವಾಗಿದೆ. ಮದುವೆ ಸಂದರ್ಭದಲ್ಲಿ ಯುವಕನ ಮೇಲೆ ರೌಡಶೀಟ್(rowdy sheeter) ಹಾಕಿದ್ದನ್ನ ಕನ್ನಡಿಗರು ಕ್ಷಮಿಸಲ್ಲ. ಬೆಳಗಾವಿ ಪೊಲೀಸರು, ರಾಜ್ಯ ಸರ್ಕಾರ ವಿರುದ್ಧ ಕನ್ನಡಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.
CM Basavaraj Bommai: ಕನ್ನಡಕ್ಕೆ ಭರ್ಜರಿ ಕೊಡುಗೆ: ಕನ್ನಡ ಹೋರಾಟಗಾರರ ವಿರುದ್ಧದ ಕೇಸ್ ವಾಪಸ್: ಸಿಎಂ
ಮದುವೆ ಆಮಂತ್ರಣ ಪತ್ರಿಕೆಯಲ್ಲೂ ಕನ್ನಡಾಭಿಮಾನ:
ಮಾರ್ಚ್ 18ರಂದು ಮದುವೆ ನಿಶ್ಚಯವಾಗಿರುವ ಅನಿಲ್ ದಡ್ಡಿಮನಿ, ತನ್ನ ಮದುವೆ ಆಮಂತ್ರಣ ಪತ್ರಿಕೆಯಲ್ಲೂ ಕನ್ನಡಾಭಿಮಾನ ಮೆರೆದಿದ್ದಾರೆ. ಆಮಂತ್ರಣ ಪತ್ರಿಕೆಯಲ್ಲಿ ಚಿ|| ಕನ್ನಡಿಗ ಅನಿಲ್, ಚಿ.ಕುಂ.ಸೌ.ಕಾಂ. ಕನ್ನಡತಿ ಭಾಗ್ಯಶ್ರೀ ಎಂದು ಮುದ್ರಣ ಮಾಡಿಸಿದ್ದಾರೆ. ಅಲ್ಲದೆ, ಬಸವಣ್ಣ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ವೀರರಾಣಿ ಕಿತ್ತೂರು ಚನ್ನಮ್ಮ ಸೇರಿ ವಿವಿಧ ಮಹನೀಯರ ಫೋಟೋ ಪ್ರಿಂಟ್ ಹಾಕಿಸಿದ್ದಾನೆ. ಇದರ ಜತೆಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಫೋಟೋ ಹಾಕಿ ಮದುವೆ ಆಮಂತ್ರಣ ಪತ್ರಿಕೆ ಮುದ್ರಣ ಮಾಡಿಸಿರುವ ಅನಿಲ್ ದಡ್ಡಿಮನಿ. ಇಂಥ ಕನ್ನಡಪರ ಹೋರಾಟಗಾರನ ಮೇಲೆ ರಾಜ್ಯ ಸರ್ಕಾರ ರೌಡಿ ಶೀಟರ್ ಹಾಕಿರುವುದು ನಾಚಿಕೆಗೇಡು ಎಂದು ಕನ್ನಡ ಹೋರಾಟಗಾರರ ಹರಿಹಾಯ್ದರು.