ನಾಯಿಗೆ ಚಿಕಿತ್ಸೆ ನೀಡಲಿಲ್ಲ ಎಂದು ವೈದ್ಯರ ಮೇಲೆ ರೌಡಿ ಅಟ್ಟಹಾಸ!

By Kannadaprabha NewsFirst Published Feb 14, 2020, 8:07 AM IST
Highlights

ತನ್ನ ಸಾಕು ನಾಯಿಗೆ ಚಿಕಿತ್ಸೆ ನೀಡಲಿಲ್ಲ ಎಂದು ಕೋಪಗೊಂಡು ವೈದ್ಯರೊಬ್ಬರ ಮೇಲೆ ಹಲ್ಲೆ ನಡೆಸಿದ ರೌಡಿಯನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು(ಫೆ.14): ತನ್ನ ಸಾಕು ನಾಯಿಗೆ ಚಿಕಿತ್ಸೆ ನೀಡಲಿಲ್ಲ ಎಂದು ಕೋಪಗೊಂಡು ವೈದ್ಯರೊಬ್ಬರ ಮೇಲೆ ಹಲ್ಲೆ ನಡೆಸಿದ ರೌಡಿಯನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನೀಲಸಂದ್ರದ ರೌಡಿ ಪ್ರದೀಪ್‌ ಬಂಧಿತನಾಗಿದ್ದು, ನಾಲ್ಕು ದಿನಗಳ ಹಿಂದೆ ಆಸ್ಟಿನ್‌ ಟೌನ್‌ ಲೇಔಟ್‌ನ ನಿವಾಸಿ ಡಾ. ಎ.ಎಚ್‌.ಶೆಟ್ಟಿಮೇಲೆ ಆತ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ.

ನೀಲಸಂದ್ರದಲ್ಲಿ ಎ.ಎಚ್‌.ಶೆಟ್ಟಿಅವರು ಕ್ಲಿನಿಕ್‌ ಇಟ್ಟುಕೊಂಡಿದ್ದಾರೆ. ಎಂದಿನಂತೆ ಫೆ.8ರಂದು ರಾತ್ರಿ 10.20ರಲ್ಲಿ ಅವರು ಕ್ಲಿನಿಕ್‌ನಲ್ಲಿದ್ದರು. ಆಗ ಕ್ಲಿನಿಕ್‌ಗೆ ಗಾಯಗೊಂಡ ನಾಯಿ ತೆಗೆದುಕೊಂಡು ಪ್ರದೀಪ್‌ ಬಂದಿದ್ದಾನೆ. ನನ್ನ ನಾಯಿಗೆ ಪೆಟ್ಟಾಗಿದೆ. ಕೂಡಲೇ ಶ್ರುಶೂಷೆ ಮಾಡುವಂತೆ ಆತ ಹೇಳಿದ್ದಾನೆ.ಈ ಮಾತಿಗೆ ವೈದ್ಯ, ನಾನು ಪ್ರಾಣಿಗಳಿಗೆ ಚಿಕಿತ್ಸೆ ನೀಡುವ ವೈದ್ಯನಲ್ಲ. ಪಶು ವೈದ್ಯಕೀಯ ಆಸ್ಪತ್ರೆಗೆ ಹೋಗುವಂತೆ ಸೂಚಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.

ಏಕಾಏಕಿ 20ಕ್ಕೂ ಹೆಚ್ಚು ಶೆಡ್‌ ನಾಶಪಡಿಸಿದ ರೌಡಿಗಳು!

ಈ ಹಂತದಲ್ಲಿ ಕೆರಳಿದ ಪ್ರದೀಪ್‌, ಅವಾಚ್ಯ ಶಬ್ದಗಳಿಂದ ನಿಂದಿಸುತ್ತ ವೈದ್ಯ ಶೆಟ್ಟಿಮೇಲೆ ಹಲ್ಲೆ ನಡೆಸಿದ್ದಾನೆ. ಆಗ ವೈದ್ಯರ ರಕ್ಷಣೆಗೆ ಧಾವಿಸಿದ ಅವರ ಸೋದರನ ಮೇಲೂ ಪ್ರದೀಪ್‌ ಚೂರಿಯಿಂದ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಈ ಗಲಾಟೆಯಿಂದ ಭೀತಿಗೊಂಡ ಶೆಟ್ಟಿಮತ್ತು ಅವರ ಸೋದರ ಕೂಡಲೇ ತಪ್ಪಿಸಿಕೊಂಡಿದ್ದಾರೆ. ಮರು ದಿನ ಘಟನೆ ಕುರಿತು ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

click me!