ಹೊಸಪೇಟೆ ಬೆಂಜ್ ಕಾರು ಅಪಘಾತ: ಯಾರೆಲ್ಲಾ ಏನೆಲ್ಲಾ ಅಂದ್ರು ಗೊತ್ತಾ?

By Suvarna News  |  First Published Feb 13, 2020, 8:53 PM IST

ಹೊಸಪೇಟೆ ಬೆಂಜ್ ಕಾರು ಅಪಘಾತ ಪ್ರಕರಣ| ಕಾರಿನಲ್ಲಿ ಆರ್.ಅಶೋಕ್ ಪುತ್ರ ಇರುವುದು ನಿಜಾನಾ?| ಪುತ್ರನ ಉಪಸ್ಥಿತಿ ನಿರಾಕರಿಸಿದ ಆರ್.ಅಶೋಕ್| ಸರ್ಕಾರ ಪ್ರಭಾವಿ ವ್ಯಕ್ತಿಯ ಪುತ್ರನನ್ನು ರಕ್ಷಿಸುತ್ತಿದೆ ಎಂದ ಕಾಂಗ್ರೆಸ್| ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದ ಎಸ್. ಆರ್. ವಿಶ್ವನಾಥ್| ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ ಸತಿಶ್ ಜಾರಕಿಹೊಳಿ| 


ಬೆಂಗಳೂರು(ಫೆ.13): ಹೊಸಪೇಟೆ ಬೆಂಜ್ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಅಂತೆ ಕಂತೆಗಳು ಹರಿದಾಡುತ್ತಿದ್ದು, ಈ ಕುರಿತು ಇದುವರೆಗೂ ಸ್ಪಷ್ಟ ಚಿತ್ರಣ ಹೊರ ಬಿದ್ದಿಲ್ಲ.

ಕಾರು ಅಪಘಾತದಲ್ಲಿ ಸಚಿವ ಆರ್.ಅಶೋಕ್ ಪುತ್ರನ ಹೆಸರು ಕೇಳಿ ಬಂದಿದ್ದು, ಈ ಆರೋಪವನ್ನು ಅಶೋಕ್ ಸ್ಪಷ್ಟವಾಗಿ ನಿರಾಕರಿಸಿದ್ದಾರೆ.

Tap to resize

Latest Videos

"

ಈ ಮಧ್ಯೆ ಹೊಸಪೇಟೆ ಕಾರು ಅಪಘಾತಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್, ಆರ್.ಅಶೋಕ್  ಹೆಸರನ್ನು ಉಲ್ಲೇಖಿಸಲದೇ ಪ್ರಭಾವಿ ವ್ಯಕ್ತಿಯ ಪುತ್ರನನ್ನು ಉಳಿಸಲು ಪ್ರಯತ್ನಿಸುತ್ತಿರುವ ಸರ್ಕಾರಕ್ಕೆ ಧಿಕ್ಕಾರ ಎಂದು ಹೇಳಿದೆ.

ಮಿನಿಸ್ಟರ್ ಸನ್ ಹಿಟ್ & ರನ್? ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾಕ್ಟರ್

ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್. ವಿಶ್ವನಾಥ್, ಕಾನೂನಿನ ಮುಂದೆ ಎಲ್ಲರೂ ಸಮಾನರಾಗಿದ್ದು ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

"

ಇನ್ನು ಇದೇ ವಿಚಾರವಾಗಿ ಮಾತನಾಡಿರುವ ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ, ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.

"

ಈ ಎಲ್ಲ ಬೆಳವಣಿಗೆಗಳ ಕುರಿತು ನಿಮ್ಮ ಸುವರ್ಣನ್ಯೂಸ್’ನಲ್ಲಿ ಬಿತ್ತರವಾದ ಸುದ್ದಿಗಳ ವಿಡಿಯೋ ಇಲ್ಲಿದೆ.

click me!