ರೋಷನ್ ಬೇಗ್ ಜಯದೇವ ಆಸ್ಪತ್ರೆಗೆ ಅಡ್ಮಿಟ್ : ಜೈಲಿಂದ ಆಸ್ಪತ್ರೆಗೆ

Kannadaprabha News   | Asianet News
Published : Nov 26, 2020, 09:00 AM IST
ರೋಷನ್ ಬೇಗ್ ಜಯದೇವ ಆಸ್ಪತ್ರೆಗೆ ಅಡ್ಮಿಟ್  : ಜೈಲಿಂದ ಆಸ್ಪತ್ರೆಗೆ

ಸಾರಾಂಶ

ಮಾಜಿ ಸಚಿವ ಕಾಂಗ್ರೆಸ್  ಮುಖಂಡ ರೋಷನ್ ಬೇಗ್ ಅವರನ್ನು ಜಯದೇವ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿದೆ.  ಜೈಲಿನಿಂದ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ

 

ಬೆಂಗಳೂರು (ನ.26):  ಪರಪ್ಪನ ಅಗ್ರಹಾರ ಜೈಲು ಬಳಿಗೆ ಆಗಮಿಸಿ ಜೈಲು ಬಳಿ ಕಾದು ಬರಿಗೈಲಿ ಸಿಬಿಐ ಅಧಿಕಾರಿಗಳು ತೆರಳಿದ್ದಾರೆ. 

ಮಾಜಿ ಸಚಿವ ರೋಶನ್ ಬೇಗ್ ರನ್ನು ಕರೆದೋಯ್ಯಲು ಸಿಬಿಐ ಅಧಿಕಾರಿಗಳು ಆಗಮಿಸಿದ್ದು, ನ್ಯಾಯಾಲಯದಿಂದ ಸಿಬಿಐಗೆ  ಮೂರು ದಿನ ಬೇಗ್ ರನ್ನು ಕಸ್ಟಡಿಗೆ  ನೀಡಿದ ಹಿನ್ನೆಲೆ ಆಗಮಿಸಿದ್ದರು.

ಜೈಲಿಂದ ರೋಷನ್ ಬೇಗ್ ಬೆಳಿಗ್ಗೆಯೇ ಜಯದೇವ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು,  ಜೈಲು ಅಧಿಕಾರಿಗಳು ಸಿಬಿಐ ಗೆ ಸರಿಯಾದ ಮಾಹಿತಿ ನೀಡದೇ ಕಾಯಿಸಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಐಎಂಎ ಬಹುಕೋಟಿ ವಂಚನೆ; ರೋಷನ್‌ ಬೇಗ್‌ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಡಲೇಬೇಕು! ...

ಆರೋಗ್ಯ ಸಮಸ್ಯೆ ಹಿನ್ನೆಲೆ ಆಸ್ಪತ್ರೆಗೆ ಕಳಿಸಲಾಗಿದೆ ಎಂದು ಜೈಲು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.  ಸಂಜೆ 8ರ ಸುಮಾರಿಗೆ   ಪರಪ್ಪನ ಅಗ್ರಹಾರ ಜೈಲು ಬಳಿ ಕಾಯುತ್ತಿದ್ದ ಸಿಬಿಐ ಅಧಿಕಾರಿಗಳು ಬಳಿಕ ವಾಪಸ್ ತೆರಳಿದ್ದಾರೆ. 

ಇತ್ತ ರೋಷನ್ ಬೇಗ್ ಜಯದೇವ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಾರೆ.

PREV
click me!

Recommended Stories

CM Siddaramaiahಗೆ ಈಶ್ವರಪ್ಪ ವಾರ್ನಿಂಗ್: ಭಗವದ್ಗೀತೆ ಓದಲಿ, ತಾಕತ್ತಿದ್ದರೆ ಕುರಾನ್ ಬಗ್ಗೆ ಮಾತನಾಲಿ
ಪ್ರೆಗ್ನೆಂಟ್ ಮಾಡಿ ಗರ್ಭಪಾತ ಮಾಡಿಸಿದ, Sorry ಅಮ್ಮಾ ಸಾಯ್ತಿದ್ದೀನಿ: ಯುವತಿ ಆತ್ಮ*ಹತ್ಯೆ