ಸಿಎಂ ಯಡಿಯೂರಪ್ಪ ನಡೆಗೆ ಬಿಜೆಪಿಯಲ್ಲೇ ಅಸಮಾಧಾನ| ಬಳ್ಳಾರಿ ಜಿಲ್ಲೆ ವಿಭಜನೆಗೆ ವ್ಯಾಪಕ ವಿರೋಧ| ಬಳ್ಳಾರಿ ಜಿಲ್ಲೆ ವಿಭಜನೆ ಮಾಡದಂತೆ ಬಳ್ಳಾರಿ ಬಂದ್ ಮಾಡುತ್ತಿರುವಾಗಲೇ ದೊಡ್ಡ ಮಟ್ಟದ ನೀರಾವರಿ ಯೋಜನೆಯ ಸಿಎಂ ಚಾಲನೆ| ಬಳ್ಳಾರಿ ಬಿಜೆಪಿ ಮುಖಂಡರನ್ನ ಮತ್ತಷ್ಟು ಕೆರಳಿಸಿದ ಸಿಎಂ ನಡೆ|
ಬಳ್ಳಾರಿ(ನ.26): ಒಂದು ಕಡೆ ಅಖಂಡ ಬಳ್ಳಾರಿ ಜಿಲ್ಲೆ ಉಳಿವಿಗಾಗಿ ಬಳ್ಳಾರಿ ಬಂದ್ ಮಾಡಲಾಗುತ್ತಿದ್ದರೆ, ಇನ್ನೊಂದು ಕಡೆ ಬಳ್ಳಾರಿಯಿಂದ ವಿಭಜನೆಯಾಗಿ ಹೊಸ ಜಿಲ್ಲೆಯಾಗುತ್ತಿರುವ ವಿಜಯನಗರದಲ್ಲಿ ಬೃಹತ್ ನೀರಾವರಿ ಯೋಜನೆಯ ಕಾಮಗಾರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ಕೊಡುತ್ತಿದ್ದಾರೆ.
ವಿಜಯನಗರ ಜಿಲ್ಲೆ ಮಾಡಬೇಕು ಎಂದು ಸಾಕಷ್ಟು ಪ್ರತಿಷ್ಠೆಯಾಗಿ ತಗೆದುಕೊಂಡಿದ್ದ ಅನಂದ್ ಸಿಂಗ್‌ಗೆ ಗೆಲವು ಸಹ ಸಿಕ್ಕಿದೆ. ಇದೀಗ ವಿಜಯನಗರ ಜಿಲ್ಲೆಗೆ ಬಳ್ಳಾರಿಯಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಬಳ್ಳಾರಿ ಜಿಲ್ಲೆ ವಿಭಜನೆ ಮಾಡದಂತೆ ಬಳ್ಳಾರಿ ಬಂದ್ ಮಾಡುತ್ತಿರುವಾಗಲೇ ದೊಡ್ಡ ಮಟ್ಟದ ನೀರಾವರಿ ಯೋಜನೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಬಳ್ಳಾರಿ ಬಂದ್: ಬಿಎಸ್‌ವೈ-ಆನಂದ ಸಿಂಗ್ ವಿರುದ್ಧ ಹೋರಾಟಗಾರರ ಆಕ್ರೋಶ
ವಿಜಯನಗರದಲ್ಲಿ ಅಂದಾಜು 243 ಕೋಟಿ ರೂಪಾಯಿಗಳ ಬೃಹತ್ ನೀರಾವರಿ ಯೋಜನೆಗೆ ಸಿಎಂ ಚಾಲನೆ ನೀಡಲಿದ್ದಾರೆ. ವಿಜಯನಗರ ಕ್ಷೇತ್ರ ವ್ಯಾಪ್ತಿಯಲ್ಲಿ ಪಾಪಿನಾಯಕನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಬೃಹತ್ ನೀರಾವರಿ ಯೋಜನೆಗೆ ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ.
ಸಿಎಂ ತಮ್ಮ ಗೃಹ ಕಚೇರಿ ಕೃಷ್ಣಾದಿಂದ ವರ್ಚುವಲ್ ಲೈವ್ ಮುಖೇನ ವಿಜಯನಗರದ ನೀರಾವರಿ ಯೋಜನೆಗೆ ಚಾಲನೆ ಕೊಡಲಿದ್ದಾರೆ. ವಿಜಯನಗರ ಜಿಲ್ಲೆ ಮಾಡುತ್ತಿರುವುದಕ್ಕೆ ಬಳ್ಳಾರಿಯ ಬಿಜೆಪಿ ಮುಖಂಡರು ಕಣ್ಣು ಈಗಾಗಲೇ ಕೆಂಪಾಗಿಸಿದೆ. ಅದು ಅಲ್ದೇ ಬಂದ್ ಮಾಡುತ್ತಿರುವ ದಿನವೇ ವಿಜಯನಗರದಲ್ಲಿ ಬೃಹತ್ ಮೊತ್ತದ ಕಾಮಗಾರಿ ಸಿಎಂ ಚಾಲನೆ ಕೊಡುತ್ತಿರೋದು ಬಳ್ಳಾರಿ ಬಿಜೆಪಿ ಮುಖಂಡರನ್ನ ಮತ್ತಷ್ಟು ಕೆರಳಿಸಿದೆ.