ಭಾರತದಲ್ಲೇ ಅತೀ ಹೆಚ್ಚು ಪಡಿತರ ಚೀಟಿಗಳನ್ನು ವಿತರಿಸಿರುವ ರಾಜ್ಯ ಕರ್ನಾಟಕ. ನಮ್ಮ ರಾಜ್ಯದಲ್ಲಿರುವ 7 ಕೋಟಿ ಜನರ ಪೈಕಿ ಶೇ. 70 ರಷ್ಟು ಫಲಾನುಭವಿಗಳಿಗೆ ಪಡಿತರ ಚೀಟಿ ಹಂಚಿಕೆ ಮಾಡಲಾಗಿದೆ. ರಾಜ್ಯದಲ್ಲಿ ಸುಮಾರು 4.50 ಕೋಟಿ ಪಡಿತರ ಚೀಟಿಗಳನ್ನು ವಿತರಣೆ ಮಾಡಲಾಗಿದೆ. ಇದರ ಸದುಪಯೋಗ ಅರ್ಹ ಫಲಾನುಭವಿಗಳಿಗೆ ಸಿಗುವಂತಾಗಬೇಕು ಎಂಬುದು ನಮ್ಮ ಸರ್ಕಾರದ ಉದ್ದೇಶ: ಆಹಾರ ಸಚಿವ ಕೆ.ಎಚ್.ಮುನಿಯಪ್ಪ
ತುಮಕೂರು(ಡಿ.07): ಬಿಪಿಎಲ್ ಕಾರ್ಡ್ ಹೊಂದಿರುವ ಅನುಕೂಲಸ್ಥರು ಸ್ವಯಂ ಪ್ರೇರಣೆಯಿಂದ ಪಡಿತರ ಚೀಟಿಯನ್ನು ಹಿಂದಿರುಗಿಸಿದರೆ ಮತ್ತಷ್ಟು ಅರ್ಹ ಫಲಾನುಭವಿಗಳಿಗೆ ಬಿಪಿಎಲ್ ಪಡಿತರ ಚೀಟಿ ವಿತರಿಸಲು ಅನುಕೂಲವಾಗುತ್ತದೆ ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದರು.
ನಗರದ ಕುಣಿಗಲ್ ರಸ್ತೆಯ ಅಮರಜ್ಯೋತಿ ನಗರದಲ್ಲಿರುವ ಶಿರಡಿ ಸಾಯಿಬಾಬ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಉಳ್ಳವರು, ಶ್ರೀಮಂತರು ಬಿಪಿಎಲ್ ಕಾರ್ಡ್‌ಗಳನ್ನು ಪಡೆದಿದ್ದಾರೆ. ಅಂತಹವರು ತಾವಾಗಿಯೇ ವಾಪಸ್ ನೀಡಿದರೆ ಬಡವರಿಗೆ ಮತ್ತಷ್ಟು ಬಿಪಿಎಲ್ ಕಾರ್ಡ್ ವಿತರಿಸಲು ಅನುಕೂಲವಾಗುತ್ತದೆ ಎಂದರು.
ರಾಜ್ಯದಲ್ಲಿ 14 ಲಕ್ಷ ಬಿಪಿಎಲ್ ಕಾರ್ಡ್‌ಗಳು ಶೀಘ್ರವೇ ರದ್ದು! ಯಾರಾರು ಅನರ್ಹರು?
ಭಾರತದಲ್ಲೇ ಅತೀ ಹೆಚ್ಚು ಪಡಿತರ ಚೀಟಿಗಳನ್ನು ವಿತರಿಸಿರುವ ರಾಜ್ಯ ಕರ್ನಾಟಕ. ನಮ್ಮ ರಾಜ್ಯದಲ್ಲಿರುವ 7 ಕೋಟಿ ಜನರ ಪೈಕಿ ಶೇ. 70 ರಷ್ಟು ಫಲಾನುಭವಿಗಳಿಗೆ ಪಡಿತರ ಚೀಟಿ ಹಂಚಿಕೆ ಮಾಡಲಾಗಿದೆ. ರಾಜ್ಯದಲ್ಲಿ ಸುಮಾರು 4.50 ಕೋಟಿ ಪಡಿತರ ಚೀಟಿಗಳನ್ನು ವಿತರಣೆ ಮಾಡಲಾಗಿದೆ. ಇದರ ಸದುಪಯೋಗ ಅರ್ಹ ಫಲಾನುಭವಿಗಳಿಗೆ ಸಿಗುವಂತಾಗಬೇಕು ಎಂಬುದು ನಮ್ಮ ಸರ್ಕಾರದ ಉದ್ದೇಶ. ಭಾರತದಲ್ಲಿ ಜಿಎಸ್‌ಟಿ ಸಂಗ್ರಹದಲ್ಲಿ ಮಹಾರಾಷ್ಟ್ರ ಮೊದಲನೇ ಸ್ಥಾನದಲ್ಲಿದ್ದರೆ, ಕರ್ನಾಟಕ 2ನೇ ಸ್ಥಾನದಲ್ಲಿದೆ ಎಂದು ಅವರು ತಿಳಿಸಿದರು.
ಮಾಜಿ ಸಂಸದ ಜಿ.ಎಸ್. ಬಸವರಾಜು ಬೃಹತ್ ಹಾಗೂ ಭವ್ಯವಾಗಿ ಸಾಯಿಬಾಬ ದೇವಾಲಯ ನಿರ್ಮಿಸಿದ್ದಾರೆ. ಈ ದೇವಾಲಯದ ಉದ್ಘಾಟನೆಗೆ ನಾನು ಬಂದಿದ್ದೆ. ಸರ್ವ ಜನರ ಸಂಕಷ್ಟ ಪರಿಹರಿಸುವ ದೇವರು ಸಾಯಿಬಾಬ. ಕಳೆದ 40 ವರ್ಷಗಳಿಂದ ಸಾಯಿಬಾಬ ದೇವರನ್ನು ಪೂಜಿಸುತ್ತಾ ಪ್ರಾರ್ಥಿಸುತ್ತಿದ್ದೇವೆ ಎಂದು ಹೇಳಿದರು.
ನಮ್ಮದು ಮತ್ತು ಬಸವರಾಜುರವರದ್ದು ಹಳೇ ಬಾಂಧವ್ಯ, ಬಸವರಾಜುರವರು ಶಿಸ್ತು, ಪ್ರಾಮಾಣಿಕತೆ, ನೇರ ನಡೆ ಉಳ್ಳವರು. ರಾಜಕಾರಣದಲ್ಲಿ ಇಂಥವರು ಬಹಳ ಅಪರೂಪ. ಹಾಗಾಗಿ ಬಸವರಾಜುರವರನ್ನು ಕಂಡರೆ ನನಗೆ ಅಪಾರ ಗೌರವ ನನಗೆ. ರೀತಿ-ನೀತಿಯಿಂದ ರಾಜಕಾರಣದಲ್ಲಿ ನಡೆಯುವುದು ಬಹಳ ಕಷ್ಟ, ಆದರೂ ಅದನ್ನು ಬಸವರಾಜು ರವರು ಚಾಚೂತಪ್ಪದೇ ಪಾಲಿಸಿಕೊಂಡು ಬಂದಿದ್ದಾರೆ ಎಂದರು.
ಮಾಜಿ ಸಂಸದ ಜಿ.ಎಸ್. ಬಸವರಾಜು ಮಾತನಾಡಿ, ನಾವಿಬ್ಬರೂ ಸಾಯಿಬಾಬ ಭಕ್ತರು. ಮೊದಲಿನಿಂದಲೂ ನಾವೆಲ್ಲರೂ ಸ್ನೇಹಿತರು. ಮುನಿಯಪ್ಪರವರು ಬಡವರ ಪರ ಕಾಳಜಿಯುಳ್ಳವರು. ಇದಕ್ಕೆ ಪೂರಕವಾಗಿ ಬಡವರಿಗೆ ಸಹಾಯ ಮಾಡುವಂತಹ ಖಾತೆ ಸಿಕ್ಕಿದೆ. ಹಾಗಾಗಿ ಬಡವರಿಗೆ ಅನುಕೂಲವಾಗುವಂತಹ ರೀತಿಯಲ್ಲಿ ಕೆಲಸ ಮಾಡಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ಜಿ.ಎಸ್. ಬಸವರಾಜು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಂಟೆಸ್ವಾಮಿ, ರಕ್ಷಿತ್ ಮತ್ತಿತರರು ಉಪಸ್ಥಿತರಿದ್ದರು.
ನಾವೆಲ್ಲ ಸಾಯಿಬಾಬ ಭಕ್ತರು:
ಮುನಿಯಪ್ಪ ನಾನು ಕೂಡ ಕೋಲಾರದಲ್ಲಿ ಸಣ್ಣದೊಂದು ಸಾಯಿಬಾಬ ದೇಗುಲ ಕಟ್ಟಿಸಿದ್ದೇನೆ. ದೇವಾ ಲಯದಲ್ಲಿ ಪೂಜಾ ಕೈಂಕರ್ಯಗಳು ಚೆನ್ನಾಗಿ ನಡೆಯುತ್ತಿವೆ. ಜನರ ಕಷ್ಟ ಕಾರ್ಪಣ್ಯಗಳಿಗೆ ಶೀಘ್ರವಾಗಿ ಪರಿಹಾರ ಕೊಡುವ ದೇವರು ಸಾಯಿಬಾಬ, ನೆನದವರ ಮನದಲ್ಲಿ ಎನ್ನುವಂತೆ ಮನಸ್ಸಿನಲ್ಲಿ ಏನೇ ಅಂದು ಕೊಂಡರೂ ಸಾಯಿಬಾಬ ಕರುಣಿ ಸುತ್ತಾನೆ ಎಂದು ಸಚಿವ ಮುನಿಯಪ್ಪ ಹೇಳಿದರು.
ಇ-ಕೆವೈಸಿ ಇಲ್ಲದ APL ರೇಷನ್ ಕಾರ್ಡ್ ರದ್ದು ಮಾಡಿದ ಆಹಾರ ಇಲಾಖೆ!
ತೀವ್ರ ಆಕ್ರೋಶಕ್ಕೆ ಮಣಿದ ಸರ್ಕಾರ - ಅನರ್ಹ ಬಿಪಿಎಲ್ ಕಾರ್ಡ್ ರದ್ದುಪಡಿಸುವ ಪರಿಷ್ಕರಣೆ ಬಂದ್!
ಬೆಂಗಳೂರು: ರಾಜ್ಯದಲ್ಲಿ ಅನರ್ಹ ಬಿಪಿಎಲ್ ಕಾರ್ಡ್ ರದ್ದುಪಡಿಸುವ ಸಲುವಾಗಿ ಕೈಗೆತ್ತಿಕೊಂಡಿದ್ದ ಪಡಿತರ ಚೀಟಿ ಪರಿಷ್ಕರಣೆ ಅಭಿಯಾನಕ್ಕೆ ತೀವ್ರ ಟೀಕೆ ವ್ಯಕ್ತವಾದ ಬೆನ್ನಲ್ಲೇ ಬಿಪಿಎಲ್ ಕಾರ್ಡ್ ಪರಿಷ್ಕರಣೆ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ.
ಅಲ್ಲದೆ, ಸರ್ಕಾರಿ ನೌಕರರು ಹಾಗೂ ತೆರಿಗೆ ಪಾವತಿದಾರರು ಹೊರತುಪಡಿಸಿ ಕಳೆದ ಒಂದು ತಿಂಗಳಿಂದ ರದ್ದಾಗಿರುವ ಎಲ್ಲಾ ಬಿಪಿಎಲ್ ಕಾರ್ಡ್‌ಗಳನ್ನು ಹಿಂದಿನಂತೆಯೇ ಮುಂದುವರೆಸುತ್ತೇವೆ. ಜತೆಗೆ ಒಂದು ವಾರದ ಬಳಿಕ ಅವರಿಗೂ ಅಕ್ಕಿ ನೀಡುತ್ತೇವೆ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಭರವಸೆ ನೀಡಿದ್ದರು.