ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ 2014 ಏ.28 ರಂದು 2 ಮಕ್ಕಳ ತಾಯಿ ಲಕ್ಷ್ಮಮ್ಮ ಎನ್ನುವವರಿಗೆ ವೈದ್ಯ ಡಾ.ಕೆ.ಶಿವಕುಮಾರ್ ಅವರು ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿದ್ದರು. ಆದರೂ ಲಕ್ಷ್ಮಮ್ಮ ಅವರು 2020 ಜ.26ರಂದು 3ನೇ ಮಗುವಿಗೆ ಜನ್ಮ ನೀಡಿದ್ದರು.
ಚಿತ್ರದುರ್ಗ(ಡಿ.07): ಮಹಿಳೆಯೊಬ್ಬರು ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ 5 ವರ್ಷದ ಬಳಿಕ ಗರ್ಭಿಣಿಯಾಗಿ 3ನೇ ಮಗುವಿಗೆ ಜನ್ಮ ನೀಡಿದ್ದು, ಸರಿಯಾಗಿ ಆಪರೇಷನ್ ಮಾಡಿದ ವೈದ್ಯರಿಗೆ ಜಿಲ್ಲಾ ಗ್ರಾಹಕರ ಆಯೋಗ 55 ಸಾವಿರ ರು. ದಂಡ ವಿಧಿಸಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಜಿಲ್ಲಾ ಆಸ್ಪತ್ರೆಯಲ್ಲಿ 2014 ಏ.28 ರಂದು 2 ಮಕ್ಕಳ ತಾಯಿ ಲಕ್ಷ್ಮಮ್ಮ ಎನ್ನುವವರಿಗೆ ವೈದ್ಯ ಡಾ.ಕೆ.ಶಿವಕುಮಾರ್ ಅವರು ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿದ್ದರು. ಆದರೂ ಲಕ್ಷ್ಮಮ್ಮ ಅವರು 2020 ಜ.26ರಂದು 3ನೇ ಮಗುವಿಗೆ ಜನ್ಮ ನೀಡಿದ್ದರು.
ಡಾಕ್ಟರ್ ಬದ್ಲು ಕಾಂಪೌಂಡರ್ ಮಾಡಿದ ಫ್ಯಾಮಿಲಿ ಪ್ಲಾನಿಂಗ್ ಆಪರೇಷನ್‌ಗೆ ಮಹಿಳೆ ಬಲಿ!
ಈ ಸಂಬಂಧ ಲಕ್ಷ್ಮಮ್ಮ ಗ್ರಾಹಕರ ಆಯೋಗಕ್ಕೆ ದೂರು ನೀಡಿದ್ದರು. ಇದರಿಂದ ಕೆರಳಿದ ಲಕ್ಷಮ್ಮ ಅವರು, ವೈದ್ಯರು ತಮಗೆ ಸರಿಯಾಗಿ ಶಸ್ತ್ರ ಚಿಕಿತ್ಸೆ ಮಾಡಿಲ್ಲ. ಹಾಗಾಗಿ ಸೂಕ್ತ ಪರಿಹಾರ ನೀಡಬೇಕು ಎಂದು ಚಿತ್ರದುರ್ಗ ಜಿಲ್ಲಾ ಗ್ರಾಹಕರ ಆಯೋಗಕ್ಕೆ 2021 ಫೆ.17ರಂದು ದೂರು ದಾಖಲಿಸಿದ್ದರು.
2024 ಡಿ.5 ರಂದು ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷೆ ಎಚ್.ಎನ್.ಕುಮಾರಿ ಮೀನಾ, ವೈದ್ಯರ ಸೇವಾ ನಿರ್ಲಕ್ಷ್ಯದಿಂದ ಶಸ್ತ್ರಚಿಕಿತ್ಸೆ ವಿಫಲವಾಗಿದ್ದು, ಮಹಿಳೆ ಅನುಭವಿಸಿದ ಹಿಂಸೆಗೆ ₹30,000 ಹಾಗೂ ದೂರಿನ ಖರ್ಚು ₹25000 ಸೇರಿ ಒಟ್ಟು 55000 ದಂಡ ಪಾವತಿಸುವಂತೆ ಆದೇಶ ನೀಡಿದ್ದಾರೆ.
ಪಿಂಚಣಿ ಕೊಡ್ತಿನಿ ಅಂತ ಕರೆದು ಯುವಕರಿಗೆ ಮಕ್ಕಳಾಗದಂತೆ ಅಪರೇಷನ್ ಮಾಡಿದ ವೈದ್ಯ
ಪಿತ್ತಕೋಶ ಆಪರೇಷನ್ ಮಾಡೋ ಬದಲು, ಸಂತಾನಹರಣ ಚಿಕಿತ್ಸೆ ಮಾಡಿದ ವೈದ್ಯರು!
ಆಸ್ಪತ್ರೆಗೆ ಹೋದಾಗ ವೈದ್ಯೋ ನಾರಾಯಣೋ ಹರಿ ಅಂತ ಅವರು ಹೇಳಿದ್ದೆಲ್ಲ ಸುಮ್ಮನೆ ಮಾಡಿಸಿಕೊಳ್ಳೋರಿದ್ದಾರೆ. ಮತ್ತೆ ಕೆಲವರು ವೈದ್ಯರು ಬೈದ್ರೂ ಸರಿ, ಒಂದಿಷ್ಟು ಪ್ರಶ್ನೆ ಕೇಳಿ ತಮ್ಮ ಅನುಮಾನ ಬಗೆಹರಿಸಿಕೊಳ್ತಾರೆ. ಆಸ್ಪತ್ರೆಯಲ್ಲಿ ಕೆಲ ಯಡವಟ್ಟಾಗೋದಿದೆ. ಯಾರಿಗೋ ನೀಡುವ ಔಷಧಿಯನ್ನು ಇನ್ನಾರಿಗೋ ನೀಡಿ ವೈದ್ಯರು, ನರ್ಸ್ ತಪ್ಪು ಮಾಡಿರ್ತಾರೆ. ಆದ್ರೆ ಅದ್ರ ಶಿಕ್ಷೆಯನ್ನು ರೋಗಿಗಳು ಅನುಭವಿಸಬೇಕಾಗುತ್ತದೆ. ಅದನ್ನು ತಪ್ಪಿಸಿಕೊಳ್ಳಲು, ತಮಗೂ ಹಾಗೆಲ್ಲ ಆದ್ರೆ ಎನ್ನುವ ಭಯದಲ್ಲೇ ಜನರು ಪ್ರಶ್ನೆಗಳನ್ನು ಕೇಳ್ತಾರೆ. ಆದ್ರೆ ಈತ ಯಾವ ಪ್ರಶ್ನೆಯನ್ನೂ ಕೇಳದೆ ಆಪರೇಷನ್ ಗೆ ಹೋಗಿದ್ದೇ ದೊಡ್ಡ ತಪ್ಪಾಗಿದೆ. ವೈದ್ಯರು ಪಿತ್ತಕೋಶದ ಶಸ್ತ್ರಚಿಕಿತ್ಸೆ ಮಾಡುವ ಬದಲು ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿದ್ದು, ಆತ ತಲೆಮೇಲೆ ಕೈಹೊತ್ತು ಕುಳಿತಿದ್ದಾನೆ. ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಬರ್ತಾ ಹೊಸ ಚಿಂತೆಯೊಂದಿಗೆ ಹೊರಗೆ ಬಂದಿದ್ದಾನೆ. ಮುಂದೇನು ಗತಿ ಎನ್ನುವ ಆತಂಕ ಆತನನ್ನು ಕಾಡ್ತಿದೆ. ಆದ್ರೆ ವೈದ್ಯರು (Doctor) ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ, ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿದ್ರೂ ಮಕ್ಕಳನ್ನು ಪಡೆಯಬಹುದು ಅಂತಾ ಸಮಾಧಾನ ಹೇಳಿದ್ದಾರೆ.
ಘಟನೆ ಅರ್ಜೆಂಟೀನಾ (Argentina) ದಲ್ಲಿ ನಡೆದಿದೆ. 41 ವರ್ಷದ ಜಾರ್ಜ್ ಬಾಸ್ಟೊ, ಪಿತ್ತಕೋಶ (Gallbladder)ದ ಶಸ್ತ್ರಚಿಕಿತ್ಸೆಗಾಗಿ ಅರ್ಜೆಂಟೀನಾದ ಕಾರ್ಡೋಬಾದಲ್ಲಿರುವ ಫ್ಲೋರೆನ್ಸಿಯೊ ಡಯಾಜ್ ಪ್ರಾಂತೀಯ ಆಸ್ಪತ್ರೆಗೆ ದಾಖಲಾಗಿದ್ದ. ಫೆಬ್ರವರಿ 28ರಂದು ಶಸ್ತ್ರಚಿಕಿತ್ಸೆ (Surgery) ಮಾಡೋದಾಗಿ ವೈದ್ಯರು ಹೇಳಿದ್ದರು. ಆದ್ರೆ ಯಾವುದೋ ಕಾರಣಕ್ಕೆ ಅದನ್ನು ಬದಲಿಸಿ 29ಕ್ಕೆ ನಿಗದಿಪಡಿಸಲಾಗಿತ್ತು. ಈ ಬದಲಾವಣೆ ದೊಡ್ಡ ನಷ್ಟಕ್ಕೆ ಕಾರಣವಾಯ್ತು.
ಫೆಬ್ರವರಿ 28ರಂದು ನರ್ಸ್ ತಂಡವೊಂದು ಜಾರ್ಜ್ ರೂಮಿಗೆ ಬಂದಿದೆ. ಆತನನ್ನು ಸ್ಟ್ರೆಚ್ಚರ್ ನಲ್ಲಿ ಹಾಕಿಕೊಂಡು ಆಪರೇಷನ್ ರೂಮಿಗೆ ಹೋಗಿದೆ. ಜಾರ್ಜ್ ರೂಮಿಗೆ ಬಂದಾಗ ಮತ್ತು ಆಪರೇಷನ್ ಮಾಡುವ ಮೊದಲು ಜಾರ್ಜ್ ವೈದ್ಯಕೀಯ ರಿಪೋರ್ಟ್ ನೋಡಿಲ್ಲ. ಹಾಗೆಯೇ ವೈದ್ಯರು ಶಸ್ತ್ರಚಿಕಿತ್ಸೆ ಶುರು ಮಾಡಿದ್ದಾರೆ. ವೈದ್ಯರಿಗೆ ಜಾರ್ಜ್ ಆಪರೇಷನ್ ದಿನಾಂಕ ಮುಂದೆ ಹೋಗಿದ್ದು ಗೊತ್ತಿರಲಿಲ್ಲ. ಆ ದಿನ ಯಾವ ಆಪರೇಷನ್ ಇತ್ತೋ ಅದನ್ನೇ ಜಾರ್ಜ್ ಗೆ ಮಾಡಿದ್ದಾರೆ. ಆ ದಿನ ಬೇರೆ ವ್ಯಕ್ತಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಆಗ್ಬೇಕಿತ್ತು. ಅದನ್ನು ಜಾರ್ಜ್ ಗೆ ಮಾಡಲಾಗಿದೆ.