'ಬೇಳೆ, ಅಕ್ಕಿ, ಕಾಳುಗಳಲ್ಲಿ ಹುಳ ಇದ್ದರೆ ವಾಪಸ್‌ ಕಳುಹಿಸಿ'..!

By Kannadaprabha NewsFirst Published Jan 15, 2020, 12:44 PM IST
Highlights

ಸರ್ಕಾರದಿಂದ ನೀಡಲಾಗುವ ಅಕ್ಕಿ, ಬೇಳೆಯಲ್ಲಿ ಹುಳ ಸಿಗುವ ಘಟನೆ ನಡೆಯುತ್ತಲೇ ಇರುತ್ತದೆ. ಶಾಲಾ ಮಕ್ಕಳಿಗೂ ಇದೇ ಅಕ್ಕಿಯಿಂದ ಅನ್ನ ಮಾಡಿಕೊಟ್ಟು ನಂತರ ಮಕ್ಕಳು ಅಸ್ವಸ್ಥರಾಗುವ ಘಟನೆಗಲೂ ವರದಿಯಾಗುತ್ತವೆ. ಇನ್ನು ಅಕ್ಕಿಯಲ್ಲಿ ಹುಳ ಕಂಡು ಬಂದರೆ ಅದನ್ನು ವಾಪಸ್ ಕಳುಹಿಸಬಹುದು.

ಮೈಸೂರು(ಜ.15): ಬೇಳೆ, ಅಕ್ಕಿ ಹಾಗೂ ಕಾಳುಗಳನ್ನು ಅಂಗನವಾಡಿ ಕೇಂದ್ರಗಳು ಹಾಗೂ ಶಾಲೆಗಳಲ್ಲಿ ಪಡೆಯುವಾಗ ಪರಿಶೀಲಿಸಿ ಹುಳು ಆಗಿದ್ದರೆ ಮುಲಾಜಿಲ್ಲದೆ ವಾಪಸ್‌ ಕಳುಹಿಸಿ, ಯಾರಾದರೂ ಕೂಗಾಡಿದರೆ ನನ್ನ ಗಮನಕ್ಕೆ ತನ್ನಿ ನಿಮ್ಮ ಹಿತಕಾಯಲು ನಾನಿದ್ದೇನೆ ಎಂದು ತಾಪಂ ಸದಸ್ಯ ಗಣಪತಿ ಇಂದಲ್ಕರ್‌ ತಿಳಿಸಿದ್ದಾರೆ.

ಹುಣಸೂರು ತಾಲೂಕಿನ ಗಾವಡಗೆರೆ ಗ್ರಾಪಂನಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದ್ದಾರೆ. ತಾಲೂಕಿನಲ್ಲಿ ಎಲ್ಲ ಶಾಲೆ, ಹಾಸ್ಟೆಲ್‌ ಹಾಗೂ ಅಂಗನವಾಡಿಗಳಲ್ಲಿ ಮಕ್ಕಳಿಗೆ ನೀಡುವ ಅಹಾರ ಪದಾರ್ಥಗಳಲ್ಲಿ ಹುಳು ಮಿಶ್ರಿತ ಅಹಾರ ಅಪರಾಧವಾಗಿದ್ದು, ಇದರ ಜವಾಬ್ದಾರಿ ಹೊತ್ತ ಏಜೆನ್ಸಿಗೆ ಸರ್ಕಾರ ಹಣ ನೀಡುತ್ತಿದೆ. ಇದನ್ನು ಪರಿಶೀಲಿಸಿಕೊಂಡು ಪಡೆಯಬೇಕು, ಅವರು ಒಪ್ಪದಿದ್ದರೆ ಅದರ ಬಗ್ಗೆ ಏನಾದರೂ ಸಮಸ್ಯೆಯಾದರೆ ನನ್ನ ಗಮನಕ್ಕೆ ತನ್ನಿ ಎಂದು ಶಾಲೆ, ಹಾಸ್ಟಲ್‌ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಆತ್ಮ ಸೈರ್ಯ ತುಂಬಿದ್ದಾರೆ.

ಮಗುವಿಗೆ ಹೊಡೀಬೇಡ ಎಂದಿದ್ದಕ್ಕೆ ತಾಯಿ ಆತ್ಮಹತ್ಯೆ..!

ರೇಷ್ಮೆ ಇಲಾಖೆ ರೈತರಿಗೆ ಸಾಕಷ್ಟುಅನುದಾನ ನೀಡಿ ಪೋ›ತ್ಸಾಹಿಸಿದರೂ, ರೈತರು ರೇಷ್ಮೆ ಬೆಳೆ ಬೆಳೆಯಲು ಮುಂದೆ ಬರುತ್ತಿಲ್ಲ, ಜೊತೆಗೆ ಗ್ರಾಮ ಲೆಕ್ಕಾಧಿಕಾರಿಗಳು ರೈತರಿಗೆ ಬೆಳೆ ದೃಢೀಕರಣ ಪತ್ರ ನೀಡಲು ಸತಾಯಿಸುತ್ತಾರೆ ಹಾಗೂ ನಮ್ಮ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದ್ದು, ಗಾವಡಗೆರೆ ಹಾಗೂ ಹನಗೋಡು ಹೋಬಳಿ ಎರಡನ್ನೂ ಒಬ್ಬನೇ ನೋಡುತ್ತಿದ್ದು, ರೈತರ ಸಮಸ್ಯೆಗೆ ಸ್ಪಂದಿಸಿ ಕೆಲಸ ಮಾಡುತ್ತಿದ್ದೇನೆ ಈ ಬೆಳೆಗೆ ಆಸಕ್ತಿ ತೋರುವ ರೈತರು ನನ್ನ ಸಂಪರ್ಕಿಸಿದರೆ ಸಂಪೂರ್ಣ ಮಾಹಿತಿ ನೀಡುವುದಾಗಿ ಸಭೆಯಲ್ಲಿ ರೇಷ್ಮೆ ಇಲಾಖೆಯ ಸಿಬ್ಬಂದಿ ಸದಾಶಿವ ಮೂರ್ತಿ ತಿಳಿಸಿದ್ದಾರೆ.

ಕೃಷಿ ಅಧಿಕಾರಿ ಮಧುಲತಾ ಮಾತನಾಡಿ, ನಮ್ಮ ಇಲಾಖೆಯಲ್ಲಿ ಸಾಕಷ್ಟುಪರಿಕರಣ ನೀಡುತ್ತಿದ್ದು, ಇಲಾಖೆಯಿಂದ ದೊರೆಯುವ ಸವಲತ್ತುಗಳೆಲ್ಲವನ್ನೂ ಪ್ರಾಮಾಣಿಕವಾಗಿ ರೈತರಿಗೆ ತಲುಪಿಸುತ್ತಿದ್ದೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಶುಂಠಿ ಬೆಳೆಗೆ ರೈತರು ಮುಖ ಮಾಡಿದ್ದು, ಜಿಪ್ಸಂ ಗೊಬ್ಬರವನ್ನು ಖಾಲಿಯಾಗಿ ಇನ್ನೂ 100 ಟನ್‌ ಬೇಕಾದರೂ ಖಾಲಿಯಾಗುವ ಬೇಡಿಕೆ ಇದೆ ಎಂದಿದ್ದಾರೆ.
ಮೈಸೂರು: ಸಂಕ್ರಾಂತಿ ಹಬ್ಬಕ್ಕೆ ಖರೀದಿ ಭರಾಟೆ..!

ಈ ಪಂಚಾಯ್ತಿ ವ್ಯಾಪ್ತಿಯಲ್ಲಿ 30 ಇಲಾಖೆಗಳು ಒಳಪಟ್ಟಿದ್ದು, ಕೆಲವೇ ಮಂದಿ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದು, ಗೈರು ಹಾಜರಾದ ಅಧಿಕಾರಿಗಳಿಗೆ ನೋಟೀಸ್‌ ನೀಡಲು ಗಣಪತಿ ಇಂಡೊಲ್ಕರ್‌ ಪಿಡಿಒಗೆ ತಿಳಿಸಿದ್ದಾರೆ.

ಸಭೆಯಲ್ಲಿ ಜಿಪಂ ಸದಸ್ಯೆ ಸಾವಿತ್ರಮ್ಮ ಮಂಜು, ಗ್ರಾಪಂ ಅಧ್ಯಕ್ಷ ಜಗದೀಶ್‌, ಸ್ಥಾಯಿ ಸಮಿತಿ ಅಧ್ಯಕ್ಷ ಜಯಕೃಷ್ಣ, ಪಿಡಿಒ ಲೋಕೇಶ್‌, ಕಾರ್ಯದರ್ಶಿ ರಮೇಶ್‌, ರಂಗಪ್ಪ ಹಾಗೂ ಗ್ರಾಪಂ ವ್ಯಾಪ್ತಿಯ ಕೆಲವು ಅಧಿಕಾರಿಗಳು ಇದ್ದರು.

click me!