ವಾಹನ ಸವಾರರೇ ಎಚ್ಚರ : ಡಬಲ್ ಹಣ ಕಟ್ಬೇಕಾಗುತ್ತೆ !

By Suvarna NewsFirst Published Jan 15, 2020, 12:37 PM IST
Highlights

ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ಈ ಬೋರ್ಡನ್ನು ಒಮ್ಮೆ ಓದಿ ಮುಂದೆ ಸಾಗಿ ಯಾಕಂದ್ರೆ ಈ ನಿಯಮ ಪಾಲಿಸದೇ ಇದ್ದಲ್ಲಿ ಡಬಲ್ ಹಣ ಪಾವತಿ ಮಾಡಬೇಕಾಗುತ್ತದೆ

ನೆಲಮಂಗಲ [ಜ.15]:  ಫಾಸ್ಟ್ಯಾಗ್ ಅಳವಡಿಕೆಗೆ ಇಂದೇ [ಜ.15] ಕೊನೆಯ ದಿನವಾಗಿದ್ದು,  ಒಂದು ವೇಳೆ ಕಾರು ಹಾಗೂ ಇನ್ನಿತರ ವಾಹನಗಳಿಗೆ ಫಾಸ್ಟ್ಯಾಗ್ ಅಳವಡಿಸಲ್ಲವೆಂದಾದಲ್ಲಿ ಡಬಲ್ ಹಣ ಪಾವತಿ ಮಾಡಬೇಕಾಗುತ್ತದೆ. 

ನೆಮಂಗಲದ ನವಯುಗ ಟೋಲ್ ನಲ್ಲಿ ಅಧಿಕೃತವಾಗಿ ವಾಹನ ಸವಾರರು ಗಮನಕ್ಕೆ ತರಲು ಎಚ್ಚರಿಕೆ ನಾಮಫಲಕವನ್ನು ಅಳವಡಿಸಲಾಗಿದೆ. 

ಫಾಸ್ಟ್ಯಾಗ್  ವಿಚಾರದಲ್ಲಿ ಕೇಂದ್ರ ಸಾರಿಗೆ ಇಲಾಖೆ ನೀಡಿದ್ದ ಗಡುವು ಇಂದು [ಜನವರಿ 15] ಕೊನೆಯಾಗಲಿದೆ. ಆದ್ದತಿಂದ  ಟೋಲ್ ಗಳಲ್ಲಿ ಒಂದೇ ಗೇಟ್ ನಲ್ಲಿ ಹಣ ಪಾವತಿಗೆ ಅನುಮತಿ ನೀಡಲಾಗಿದೆ. 

ವಾಹನಗಳಿಗೆ ಫಾಸ್ಟ್ಯಾಗ್‌ ಅಳವಡಿಸಲು ಕೊನೆಯ ದಿನ...

ಹೀಗಾಗಿ ಉಳಿದ ಎಲ್ಲಾ ಟೋಲ್ ಬೂತ್ ಗಳಲ್ಲಿ ಫಾಸ್ಟ್ಯಾಗ್ ನಿಯಮ ಕಡ್ಡಾಯವಾಗಿ ಜಾರಿಯಾಗಲಿದೆ. ಹೊಸ ಆದೇಶ ಜಾರಿಗೆ ಬರುವ ಸೂಚನೆ ಕೂಡ ಇದೆ. 

ಫಾಸ್ಟ್ಯಾಗ್ ಇಲ್ಲದವರಿಗೆ ಮಾತ್ರ ಟ್ರಾಫಿಕ್ ಬಿಸಿ ತಟ್ಟಲಿದೆ. ಅಲ್ಲದೇ ಫಾಸ್ಟ್ಯಾಗ್ ಇರುವ ಗೇಟ್ ನಲ್ಲಿ ಫಾಸ್ಟ್ಯಾಗ್ ಇಲ್ಲದ ವಾಹನ ಸಂಚರಿಸಿದಾಗ ಡಬಲ್ ಹಣ ಪಾವತಿ ಮಾಡಲೇಬೇಕು ಎಂದು ಟೋಲ್ ಕಂಪನಿಗಳು ನಾಮಫಲಕ ಅಳವಡಿಸಿದ್ದಾರೆ. 

click me!