ಕೊರೋನಾ ಮಹಾಮಾರಿ ಅಟ್ಟಹಶ ಹೆಚ್ಚಾಗಿಯೇ ಇದೆ. ಲಕ್ಷಾಂತರ ಜನರು ಸೋಂಕಿಗೆ ತುತ್ತಾಗಿದ್ದು ಇದೀಗ ಮಾಜಿ ಸಚಿವರೋರ್ವರು ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ
ಕಲಬುರಗಿ (ಅ.02) : ಕೊರೋನಾ ಸೋಂಕು ತಗುಲಿದ್ದರಿಂದ ತಮ್ಮನ್ನು ಭೇಟಿ ಮಾಡಲು ಯಾರೂ ಬರಬೇಡಿ. ನನಗಾಗಿದ್ದು ಆಗಿದೆ, ನಿಮಗಾರಿಗೂ ಕೊರೋನಾ ಬರಬಾರದು ಎಂದು ಮಾಜಿ ಸಚಿವ ರೇವೂನಾಯಕ ಬೆಳಮಗಿ ಕಣ್ಣೀರಿಟ್ಟಿದ್ದಾರೆ.
ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿರುವ ಮಾಜಿ ಸಚಿವ ಕೊರೋನಾದಿಂದಾಗಿ ಈಗಾಗಲೇ ಚಿಕಿತ್ಸೆ ಪಡೆದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ತಮ್ಮನ್ನು ಭೇಟಿಯಾಗಲು ಯಾರೂ ಬರಬಾರದು.ದೇವರ ಆಶೀರ್ವಾದವಿದ್ದರೆ ಆದಷ್ಟುಬೇಗ ಗುಣಮುಖರಾಗುತ್ತೇನೆ ಎಂದಿದ್ದಾರೆ.
ಹೆಚ್ಚಿದ ಕೇಸ್
ರಾಜ್ಯದಲ್ಲಿ ಕೊರೋನಾ ಸೋಂಕು ಪತ್ತೆ ಹಚ್ಚುವ ಪರೀಕ್ಷೆಯಲ್ಲಿ ಏರಿಕೆಯೊಂದಿಗೆ ಸೋಂಕಿತರ ಪ್ರಮಾಣ ಕೂಡ ಹೆಚ್ಚಾಗುತ್ತಿದೆ. ಗುರುವಾರ 96,588 ಜನರ ಪರೀಕ್ಷೆ ಮಾಡಿದ್ದು 10,070 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 130 ಮಂದಿ ಮೃತಪಟ್ಟಿದ್ದಾರೆ. 7,144 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಸಾರ್ವಜನಿಕರೇ ಎಚ್ಚರ: ಮಾಸ್ಕ್ ಧರಿಸದಿದ್ರೆ ಕ್ರಿಮಿನಲ್ ಕೇಸ್..! ...
ಸೆಪ್ಟೆಂಬರ್ 29 ರಂದು 10,453 ಮಂದಿಯಲ್ಲಿ ಸೋಂಕು ಪತ್ತೆಯಾಗಿರುವುದು ಈವರೆಗಿನ ದಾಖಲೆಯಾಗಿದೆ. ಈವರೆಗೆ ಕೊರೋನಾ ಸೋಂಕಿನಿಂದ ರಾಜ್ಯದಲ್ಲಿ 4,92,412 ಮಂದಿ ಗುಣಮುಖರಾಗಿದ್ದಾರೆ. ಒಟ್ಟು ಕೊರೋನಾ ಪರೀಕ್ಷೆಗಳ ಸಂಖ್ಯೆ 49,97,671 ತಲುಪಿದೆ. ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 6.11 ಲಕ್ಷ ಮುಟ್ಟಿದೆ. ರಾಜ್ಯದಲ್ಲಿ 1.10 ಲಕ್ಷಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣಗಳಿದ್ದು ಇವರಲ್ಲಿ 811 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಯಾಂಪಲ್ ಕೊಡದಿದ್ರೂ ವರದಿ ಪಾಸಿಟಿವ್; ದಂಧೆಗಿಳಿದಿದೆಯಾ ಆರೋಗ್ಯ ಇಲಾಖೆ? ...
ಬೆಂಗಳೂರು ನಗರ ಜಿಲ್ಲೆಯಲ್ಲಿ 41 ಮಂದಿ ಮೃತಪಟ್ಟಿದ್ದಾರೆ. ಉಳಿದಂತೆ ಮೈಸೂರು 25, ದಕ್ಷಿಣ ಕನ್ನಡ 11, ತುಮಕೂರು 8, ಕೋಲಾರ ಮತ್ತು ಕೊಪ್ಪಳ ತಲಾ 5, ಶಿವಮೊಗ್ಗ ಮತ್ತು ಕೊಡಗು ತಲಾ 4, ಹಾಸನ ಮತ್ತು ಉಡುಪಿ ತಲಾ 3, ಯಾದಗಿರಿ, ಮಂಡ್ಯ, ಬೀದರ್ ಮತ್ತು ಬಳ್ಳಾರಿಯಲ್ಲಿ ತಲಾ 2, ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾವೇರಿ, ರಾಯಚೂರು, ರಾಮನಗರ, ವಿಜಯಪುರದಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.